HEALTH TIPS

ಅದ್ಧೂರಿ ಮೆರವಣಿಗೆ ಮೂಲಕ ಮಗಳನ್ನು ಶಾಲೆಗೆ ಬಿಟ್ಟು ಬಂದ ಮಾಜಿ ಶಾಸಕ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

            ಹೈದರಾಬಾದ್​: ಮಹಾಮಾರಿ ಕೋವಿಡ್​ನಿಂದಾಗಿ ಶಾಲೆಯಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಇದೀಗ ಮತ್ತೆ ಶಾಲೆಯ ಮೆಟ್ಟಿಲೇರುತ್ತಿರುವುದು ಒಂದು ರೀತಿಯ ವಿಶಿಷ್ಟ ಅನುಭವ. ಹೀಗಾಗಿ ಈ ಕ್ಷಣವನ್ನು ಕೆಲವೆಡೆ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.

          ಅದಕ್ಕೆ ತಾಜಾ ಉದಾಹರಣೆಯೆಂದರೆ, ಇತ್ತೀಚೆಗೆ ಹೈದರಾಬಾದ್​ನ ಮಾಜಿ ಶಾಸಕ ವಿಷ್ಣುವರ್ಧನ್​ ರೆಡ್ಡಿಯವರು ತಮ್ಮ ಮಗಳನ್ನು ಮೆರವಣಿಗೆ ಮೂಲಕ ಶಾಲೆಗೆ ಬಿಟ್ಟು ಬಂದಿದ್ದಾರೆ.

            ಎರಡು ವರ್ಷಗಳ ಸುದೀರ್ಘ ಅಂತರದ ಬಳಿಕ ಮಗಳು ಜನಶ್ರೀ ರೆಡ್ಡಿ ಮತ್ತೆ ಶಾಲೆಗೆ ಹೋಗಲು ಆರಂಭಿಸಿದ್ದಾಳೆ. ಇದರಿಂದ ತಂದೆಯ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿದೆ. ಹೀಗಾಗಿ ಮಗಳಿಗೆ ಸರ್ಪ್ರೈಸ್​ ಕೊಡಲು ಮಾಜಿ ಶಾಸಕ ವಿಷ್ಣುವರ್ಧನ್​ ರೆಡ್ಡಿ ಪ್ಲಾನ್​ ಮಾಡಿ ಮೆರವಣಿಗೆಯನ್ನು ಆಯೋಜನೆ ಮಾಡಿದ್ದರು.

               ತಂದೆಯ ಈ ಸರ್ಪ್ರೈಸ್​ನಿಂದ ಗಲಿಬಿಲಿಗೊಂಡ 13 ವರ್ಷದ ಮಗಳು ಆರಂಭದಲ್ಲಿ ಶಾಲೆಗೆ ಹೋಗಲು ನಿರಾಕರಿಸಿದಳು. ಆದರೆ, ನಂತರದಲ್ಲಿ ತಂದೆಯ ಮಾತಿಗೆ ಗೌರವ ಕೊಟ್ಟು ಮೆರವಣಿಗೆಯನ್ನು ಎಂಜಾಯ್​ ಮಾಡಿಕೊಂಡು ಶಾಲೆಗೆ ಹೋಗಿದ್ದಾಳೆ.

             ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಎರಡು ವರ್ಷಗಳ ನಂತರ ತಮ್ಮ ಮಗಳು ದೈಹಿಕ ತರಗತಿಗಳಿಗೆ ಹಾಜರಾಗುತ್ತಿರುವುದು ತನಗೆ ಅತ್ಯಂತ ವಿಶೇಷ ಕ್ಷಣವಾಗಿದೆ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries