HEALTH TIPS

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ ಒಂದು ತಿಂಗಳು: ಜಾಗತಿಕ ಮಟ್ಟದಲ್ಲಿ ರಷ್ಯಾ ವಿರುದ್ಧ ಪ್ರತಿಭಟನೆ ಮಾಡಿ ಎಂದು ಮನವಿ ಮಾಡಿದ ಉಕ್ರೇನ್ ಅಧ್ಯಕ್ಷ

       ಕೀವ್: ತಮ್ಮ ದೇಶದ ವಿರುದ್ಧ ರಷ್ಯಾ ಸೇನೆಯ ಭೀಕರ ದಾಳಿಯನ್ನು ವಿಶ್ವಾದ್ಯಂತ ಜನತೆ ಬೀದಿಗಿಳಿದು ಖಂಡಿಸಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆಸ್ಕಿ ಮನವಿ ಮಾಡಿಕೊಂಡಿದ್ದಾರೆ.

     ಇಂದು ಗುರುವಾರ ಮಾರ್ಚ್ 24ಕ್ಕೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿದೆ. ಈ ಸಂದರ್ಭದಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ರಷ್ಯಾ ಸೇನೆಯ ಯುದ್ಧ ಉಕ್ರೇನ್ ಮೇಲೆ ಮಾತ್ರವಲ್ಲ, ಸ್ವಾತಂತ್ರ್ಯದ ವಿರುದ್ಧ ಯುದ್ಧವಾಗಿದೆ. ಆದ್ಧರಿಂದ ಈ ಯುದ್ಧದ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲಲೇಬೇಕು. ಈ ಯುದ್ಧವನ್ನು ನಿಲ್ಲಿಸಲು ಕೊನೆಗಾಣಿಸಲು ಇಂದು ರಷ್ಯಾ ಯುದ್ಧ ಆರಂಭಿಸಿ ಒಂದು ತಿಂಗಳಾದ ನಂತರ ಎಲ್ಲರೂ ಒಟ್ಟಾಗಿ ನಿಲ್ಲಬೇಕೆಂದು ಕೇಳಿಕೊಂಡಿದ್ದಾರೆ. ಈ ವಿಡಿಯೊವನ್ನು ಉಕ್ರೇನ್ ನ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ.

     ರಷ್ಯಾದ ಉಕ್ರೇನ್ ಆಕ್ರಮಣದ ಒಂದು ತಿಂಗಳ ನಂತರ ಗುರುವಾರದಿಂದ ಪ್ರಾರಂಭವಾಗುವ ಜಾಗತಿಕ ಪ್ರತಿಭಟನೆಗಳಿಗೆ ಕರೆ ನೀಡಿದ ಝೆಲೆನ್ಸ್ಕಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ, "ಇಂದಿನಿಂದ ಇನ್ನು ಮುಂದೆ ನಿಮ್ಮ ನಿಲುವನ್ನು ತೋರಿಸಿ. ನಿಮ್ಮ ಕಚೇರಿಗಳು, ನಿಮ್ಮ ಮನೆಗಳು, ನಿಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಬನ್ನಿ. ಶಾಂತಿಯಿಂದ ಉಕ್ರೇನ್‌ಗೆ ಬೆಂಬಲ ನೀಡಿ, ಸ್ವಾತಂತ್ರ್ಯವನ್ನು ಬೆಂಬಲಿಸಲು, ಜೀವನವನ್ನು ಬೆಂಬಲಿಸಲು ಉಕ್ರೇನ್ ಜೊತೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ.

    ಕಳೆದ ತಿಂಗಳು ಫೆಬ್ರವರಿ 24 ರ ಮುಂಜಾನೆ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಗಳು (ಡಿಪಿಆರ್ ಮತ್ತು ಎಲ್ಪಿಆರ್) ಕೈವ್ ಪಡೆಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯಕ್ಕಾಗಿ ಮನವಿ ಮಾಡಿದ ನಂತರ ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ದಾಳಿಯನ್ನು ಆರಂಭಿಸಿತು. ತನ್ನ ವಿಶೇಷ ಕಾರ್ಯಾಚರಣೆಯ ಗುರಿಯು ಉಕ್ರೇನ್ ಅನ್ನು ನಿಶಸ್ತ್ರೀಕರಣಗೊಳಿಸುವುದಾಗಿದೆ. ಅಲ್ಲಿನ ಮಿಲಿಟರಿ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗುತ್ತದೆ. ಅಲ್ಲಿನ ನಾಗರಿಕರ ಮೇಲೆ ದಾಳಿ ಮಾಡುವುದಿಲ್ಲ ಎಂದು ರಷ್ಯಾ ಹೇಳಿತ್ತು. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಮಾಸ್ಕೋ ಪದೇ ಪದೇ ಒತ್ತಿಹೇಳಿದೆ.

      ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಕಾರ, ಕಳೆದ ಎಂಟು ವರ್ಷಗಳ ಕೈವ್ ಆಡಳಿತದಿಂದ ನಿಂದನೆ, ನರಮೇಧಕ್ಕೆ ಒಳಗಾದ ಡಾನ್ಬಾಸ್ ಜನರನ್ನು ರಕ್ಷಿಸುವುದು ಗುರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ತೀವ್ರವಾಗಿ ಖಂಡಿಸಿವೆ. ರಷ್ಯಾ ಮೇಲೆ ಭಾರೀ ನಿರ್ಬಂಧಗಳನ್ನು ವಿಧಿಸಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries