HEALTH TIPS

ಕೆ-ಸ್ಟೋರ್ ಆಗಿ ಬದಲಾದ ಪಡಿತರ ಕೇಂದ್ರಗಳು: ಜಿಲ್ಲೆಯ ಐದು ರೇಶನ್ ಅಂಗಡಿಗಳು ಆಯ್ಕೆ

                  ಕಾಸರಗೋಡು: ಅಕ್ಕಿ, ಸೀಮೆ ಎಣ್ಣೆ, ಸಕ್ಕರೆ ಹೀಗೆ ಅತ್ಯಾವಶ್ಯಕ ಪಡಿತರ ಮಾತ್ರ ಲಭಿಸುತ್ತಿದ್ದ ರೇಶನ್ ಅಂಗಡಿಗಳು ಹೈಟೆಕ್ ಆಗಿ ಬರಲಿದ್ದು, ರೇಶನ್ ಜತೆಗೆ ಬ್ಯಾಂಕಿಂಗ್, ಗ್ಯಾಸ್ ವಿತರಣೆ, ಅಕ್ಷಯ ಸೇವಾ ಸೌಲಭ್ಯಗಳೂ ಲಭ್ಯವಾಗಲಿದೆ. ಪಡಿತರ ಅಂಗಡಿಗಳು ಇನ್ನು ಮುಂದೆ ಕೆ-ಸ್ಟೋರ್‍ಗಳಾಗಿ ಗುರುತಿಸಿಕೊಳ್ಳಲಿದೆ. 

            ಕಾಸರಗೋಡು ಜಿಲ್ಲೆಯಲ್ಲಿ ಕೆ-ಸ್ಟೋರ್ ಯೋಜನೆಗೆ ಮೊದಲ ಹಂತದಲ್ಲಿ ಐದು ಪಡಿತರ ಅಂಗಡಿಗಳನ್ನು ಆಯ್ಕೆ ಮಾಡಲಾಗಿದೆ.  ಪಡಿತರ ಅಂಗಡಿಯಲ್ಲಿ ಹೆಚ್ಚಿನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲಿದ್ದು, ಗ್ಯಾಸ್, ಬ್ಯಾಂಕಿಂಗ್ ಜತೆಗೆ ಮಿಲ್ಮಾ ಉತ್ಪನ್ನಗಳು, 5 ಕೆಜಿತೂಕದ ಚೋಟು ಗ್ಯಾಸ್ ಸಿಲಿಂಡರ್, ಸಪ್ಲೈಕೋ ಮತ್ತು ಶಬರಿ ಸಂಸ್ಥೆಗಳ ವಿವಿಧ ಉತ್ಪನ್ನಗಳು ಲಭ್ಯವಾಗಲಿದೆ. ಹೊಸದುರ್ಗ ತಾಲೂಕಿನಲ್ಲಿ ಮೂರು ಹಾಗೂ ವೆಳ್ಳರಿಕುಂಡು ತಾಲೂಕಿನಲ್ಲಿ ಎರಡು ರೇಶನ್ ಅಂಗಡಿಗಳನ್ನು ಕೆ-ಸ್ಟೋರ್ ಕೇಂದ್ರಗಳಾಗಿ ಪರಿವರ್ತಿಸಲಾಗುವುದು.  ಹೊಸದುರ್ಗ ತಾಲೂಕಿನ ವಲಿಯಪರಂಬ, ಕೂಟಪುನ್ನ ಮತ್ತು ಆಯಂಬಾರ ಪಡಿತರ ಅಂಗಡಿಗಳು ಮತ್ತು ವೆಳ್ಳರಿಕುಂಡು ತಾಲೂಕಿನ ಪೂಂಗೋಡ್ ಮತ್ತು ಪೆರಿಯಾ ಪಡಿತರ ಅಂಗಡಿಗಳು ಹೈಟೆಕ್ ಸೇವೆಯಾಗಲಿವೆ. 

                                                   ಐದು ಕೆ-ಸ್ಟೋರ್‍ಗಳಿಗೆ ಚಾಲನೆ:

               ಜಿಲ್ಲೆಯಲ್ಲಿ ಐದು ಪಡಿತರ ಅಂಗಡಿಗಳು ಹಾಗೂ ಕೆ ಸ್ಟೋರ್‍ಗಳು ಶುಕ್ರವಾರ ಆರಂಭಗೊಂಡಿತು. ವಲಿಯಪರಂ (ಸಂ. 88) ಮತ್ತು ಪೂಂಗೋಡ್ (ಸಂ. 55) ಕೆ-ಸ್ಟೋರ್ ಮಳಿಗೆಗಳನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಕೂಟಪುನ್ನ, ಕೋಡೋಬೇಲೂರ್ ಮತ್ತು ಆಯಂಬರ ಕೇಂದ್ರಗಳನ್ನು ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries