HEALTH TIPS

ನಕಲಿ ಮತದಾನ ನಡೆದಿರುವ ಕೇಂದ್ರಗಳಲ್ಲಿ ಸಮಗ್ರ ತನಿಖೆಯಾಗಬೇಕು-ಬಿಜೆಪಿ

         ಕಾಸರಗೋಡು: ಸಿಪಿಎಂ ಹಾಗೂ ಕಾಂಗ್ರೆಸ್ ಕೇಂದ್ರಗಳಲ್ಲಿ ಅಧಿಕಾರಿಗಳ ಬೆಂಬಲದೊಂದಿಗೆ ವ್ಯಾಪಕವಾಗಿ ನಕಲಿ ಮತದಾನ ನಡೆದಿರುವುದಾಗಿ  ಬಿಜೆಪಿ ರಾಜ್ಯ ಕಾರ್ಯದರ್ಶಿ, ವಕೀಲ ಕೆ.ಶ್ರೀಕಾಂತ್ ತಿಳಿಸಿದ್ದಾರೆ.

             ಕಲ್ಯಾಶೇರಿ ಕ್ಷೇತ್ರದ ಪಾರಕ್ಕಡವ್‍ನಲ್ಲಿ 92 ವರ್ಷದ ಮಹಿಳೆಯೊಬ್ಬರ ಮತವನ್ನು ಸಿಪಿಎಂನ ಮಾಜಿ ಶಾಖಾ ಕಾರ್ಯದರ್ಶಿ ಹಾಗೂ ಸ್ಥಳೀಯ ಸಮಿತಿ ಸದಸ್ಯ ಗಣೇಶನ್ ಚಲಾಯಿಸಿರುವುದು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಂದ ಸಿಪಿಎಂನ ನಕಲಿ ಮತದಾನದ ಕೃತ್ಯ ಬಯಲಾಗಿದೆ. ಸಿಪಿಎಂ ಮತ್ತು ಸಿಪಿಎಂ ಪೋಷಕ ಸಂಘಟನೆಗಳ ಕುತಂತ್ರದ ಭಾಗವಾಗಿ ಕಲ್ಯಾಶ್ಯೇರಿಯಲ್ಲಿ ನಕಲಿ ಮತದಾನ ನಡೆಸಲಾಗಿದೆ. ಯುಡಿಎಫ್ ಕೇಂದ್ರಗಳಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಪ್ರಭಾವವಿರುವ ಸ್ಥಳಗಳಲ್ಲೂ ಇಂತಹ ನಕಲಿ ಮತಗಳನ್ನು ಹಾಕಿರುವುದು ಗಮನಕ್ಕೆ ಬಂದಿದೆ.   ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಗಳು ಅಥವಾ ಏಜೆಂಟರು ಮತ ಚಲಾಯಿಸುವಂತಿಲ್ಲ ಎಂಬುದು ಚುನಾವಣಾ ಆಯೋಗದ ನಿರ್ದೇಶನವಾಗಿದ್ದು,  ಸಿಪಿಎಂನ ಸ್ಥಳೀಯ ಸಮಿತಿಯ ಸದಸ್ಯ  ಗಣೇಶನ್ ಚುನಾವಣಾ ಆಯೋಗದ ಕಾನೂನು ಧಿಕ್ಕರಿಸಿ  ಮತ ಚಲಾಯಿಸಿದ್ದಾರೆ.  ಸಿಪಿಎಂ ಶಕ್ತಿ ಕೇಂದ್ರವಾಗಿರುವ ಪ್ರದೇಶದಲ್ಲಿ ಈ ರೀತಿಯಾಗಿ ನಕಲಿ ಮತದಾನ ವ್ಯಾಪಕವಾಗಿ ನಡೆಯುತ್ತಿದೆ. ಎನ್‍ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರ ಮುಖ್ಯ ಚುನಾವಣಾ ಏಜೆಂಟ್ ಕೆ.ಕೆ.ಮನೋಜ್ ಕುಮಾರ್ ನೀಡಿರುವ ದೂರಿನ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

               ವಿಶೇಷ ಮತಗಟ್ಟೆ ಅಧಿಕಾರಿ, ಪೆÇೀಲಿಂಗ್ ಸಹಾಯಕ ಮೈಕ್ರೋ ಅಬ್ಸರ್ವರ್, ವಿಶೇಷ ಪೆÇಲೀಸ್ ಅಧಿಕಾರಿ ಮತ್ತು ವಿಡಿಯೋಗ್ರಾಫರ್ ಉಪಸ್ಥಿತಿಯಲ್ಲಿ ನಕಲಿ ಮತದಾನ ನಡೆದಿದೆ.   ಸಿಪಿಎಂ ನಡವಳಿಕೆ ಚುನಾವಣಾ ಪ್ರಕ್ರಿಯೆಗೆ ಬಹಿರಂಗ ಸವಾಲು ಹಾಕುವಂತಿದೆ. ಮುಂದೆ ನಡೆಯಲಿರುವ ಚುನಾವಣೆಯಲ್ಲೂ ಸಿಪಿಎಂ ವ್ಯಾಪಕ ನಕಲಿ ಮತ ಚಲಾವಣೆಗೆ ಯೋಜನೆ ಹಮ್ಮಿಕೊಂಡಿದ್ದು, ಈ ಷಡ್ಯಂತ್ರಕ್ಕೆ ಸಿಪಿಎಂಪರ ಅಧಿಕಾರಿಗಳೂ ಬೆಂಬಲವಾಗಿ ನಿಲ್ಲುತ್ತಿದ್ದಾರೆ.  ಕಲ್ಯಾಶ್ಯೇರಿ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವುದರ ಜತೆಗೆ ಇಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries