HEALTH TIPS

ದೃಷ್ಟಿ ವಿಕಲಚೇತನ ಮಕ್ಕಳ ಶಾಲೆಯಲ್ಲಿ ದಾಖಲಾತಿ ಆರಂಭ


           ಕಾಸರಗೋಡು: ವಿದ್ಯಾನಗರದಲ್ಲಿರುವ  ದೃಷ್ಟಿ ವಿಕಲಚೇತನರಾದ ಮಕ್ಕಳ ಶಾಲೆಯಲ್ಲಿ ಪ್ರವೇಶಾತಿ ಆರಂಭಗೊಂಡಿದೆ.  1ರಿಂದ 7ನೇ ತರಗತಿಯ ವರೆಗೆ ಪ್ರವೇಶಾತಿ ಆರಂಭಗೊಂಡಿದ್ದು,  ಕನಿಷ್ಠ 40 ಶೇಕಡಾ ದೃಷ್ಟಿ ದೋಷ ಹೊಂದಿರುವ ಮಕ್ಕಳು ಯಾವುದೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.  ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಶಾಲೆಯಾಗಿದ್ದು ರಾಜ್ಯ ಪಠ್ಯಕ್ರಮವನ್ನು  ಶಾಲೆಯಲ್ಲಿ ಅನುಸರಿಸಲಾಗಿತ್ತದೆ.  ಶೈಕ್ಷಣಿಕ ವಿಷಯಗಳಲ್ಲದೆ, ವಿದ್ಯಾರ್ಥಿಗಳಿಗೆ ಬ್ರೈಲ್ ಬರವಣಿಗೆ, ಉಚಿತ ನಡೆಯುವ ತರಬೇತಿ, ವಿಶೇಷ ಸಾಫ್ಟ್‍ವೇರ್ ಬಳಸಿ ಕಂಪ್ಯೂಟರ್ ಕಲಿಕೆ, ಹಾಡು, ವಾದ್ಯ ಸಂಗೀತ, ಕರಕುಶಲ ವಸ್ತುಗಳ ನಿರ್ಮಾಣ, ಕ್ರೀಡಾ ಶಿಕ್ಷಣ ಮೊದಲಾದ ವಿಶೇಷ ಜೀವನ ಕೌಶಲ್ಯ ತರಬೇತಿಗಳನ್ನೂ  ನೀಡಲಾಗುತ್ತದೆ.  ಉಚಿತ ವಾಸ ಮತ್ತು ಅಧ್ಯಯನಕ್ಕಾಗಿ ಹಾಸ್ಟೆಲ್ ಸೌಲಭ್ಯವನ್ನು ಶಾಲೆ ಒದಗಿಸಿ ಕೊಡುತ್ತದೆ.

                  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9495462946, 9846162180)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries