HEALTH TIPS

ಪಾಲಕ್ಕುನ್ನು ಗ್ರೀನ್‍ವುಡ್ಸ್ ಪಬ್ಲಿಕ್ ಶಾಲೆಯಲ್ಲಿ ಮತಯಂತ್ರ ಬಳಸಿ ವಿದ್ಯಾರ್ಥಿ ಚುನಾವಣೆ


          ಕಾಸರಗೋಡು: ಪಾಲಕ್ಕುನ್ನು ಗ್ರೀನ್‍ವುಡ್ಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಪರಿಷತ್ತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿ ಚುನಾವಣೆ ನಡೆಯಿತು.
               ವಿದ್ಯಾರ್ಥಿಗಳಲ್ಲಿ  ಮತದಾನದ ಹಕ್ಕಿನ ಅರಿವು ಮೂಡಿಸಿ, ಪ್ರಜಾಸತ್ತಾತ್ಮಕ ತಿಳುವಳಿಕೆ, ಪ್ರಕ್ರಿಯೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಈ ಮೂಲಕ ಜಾಗೃತಗೊಳಿಸಲಾಯಿತು.
       ಹೆಡ್ ಬಾಯ್, ಹೆಡ್ ಗರ್ಲ್ ಸೇರಿದಂತೆ 20 ಹುದ್ದೆಗಳಿಗೆ ಚುನಾವಣೆ ನಡೆದಿತ್ತು. 5ನೇ ತರಗತಿಯಿಂದ 12ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತದಾನ ಮಾಡಿದರು.



     ಪ್ರತಿ ವಿದ್ಯಾರ್ಥಿಗೆ  ನಿಯೋಜಿಸಲಾದ ಪ್ರತ್ಯೇಕ ಮತದಾನ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ಮಕ್ಕಳು ತಮ್ಮ ಮತಗಳನ್ನು ಚಲಾಯಿಸಿದರು. ವಿಶೇಷವಾಗಿ ನಿರ್ಮಿಸಿದ ಮತಗಟ್ಟೆಯಲ್ಲಿ ಶಿಕ್ಷಕರು ಮತದಾನ ಅಧಿಕಾರಿಗಳಾಗಿ ಮಾರ್ಗದರ್ಶನ ನೀಡಿದರು. ಶಾಲೆಯ ಭೌತಶಾಸ್ತ್ರ ಶಿಕ್ಷಕಿ ಸ್ಮೃತಿ.ಎಸ್ ಮುಖ್ಯ ಚುನಾವಣಾಧಿಕಾರಿಯಾಗಿದ್ದರು. ಇಂದು(ಗುರುವಾರ) ಮತ ಎಣಿಕೆ ನಡೆಯಲಿದ್ದು, ನಂತರ ಶಾಲಾ ಅಸೆಂಬ್ಲಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿ ಪರಿಷತ್ತಿನ ಚುನಾಯಿತ ಸದಸ್ಯರು ಆಗಸ್ಟ್ 4 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries