ಪೆರ್ಲ: ಸಮಾಜದ ಅಶಕ್ತ ಜನತೆಗೆ ಸಹಾಯ ಒದಗಿಸುತ್ತಿರುವ ಸಂಘಟನೆ ಅಮೃತದೀಪ ಪೆರ್ಲ ವತಿಯಿಂದ 'ಅಮೃತದೀಪ ಕೆಸರು ಗದ್ದೆ ಉತ್ಸವ-2022'ಆ. 7ರಂದು ಬಜಕೂಡ್ಲು ಬಯಲಿನಲ್ಲಿ ಜರುಗಲಿದೆ. ಕೆಸರುಗದ್ದೆಯಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿದೆ. ಸಮಾಜದ ಅಶಕ್ತರಿಗೆ ನೆರವಾಗುವ ನಿಟ್ಟಿನಲ್ಲಿ ಕೆಸರುಗದ್ದೆ ಉತ್ಸವ ಆಯೋಜಿಸಲಾಗುತ್ತಿದೆ.
ಕಾರ್ಯಕ್ರಮದ ಯಶಸ್ವಿಗಾಗಿ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸ್ವಾಗತ ಸಮಿತಿ ರಚನಾ ಸಭೆ ಜರುಗಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಉದ್ಯಮಿ ಉದಯ ಚೆಟ್ಟಿಯರ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ರೈ ಕುದ್ವ, ಸತೀಶ್ ಮೂಡಿತ್ತಾಯ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಸಂಚಾಲಕರಾಗಿ ಉದಯ ಚೆಟ್ಟಿಯಾರ್, ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಕುದ್ವ, ಉಪಾಧ್ಯಕ್ಷರಾಗಿ ಚಂದ್ರಶೇಖರ ಆಚಾರ್ಯ, ಸತೀಶ್ ಮೂಡಿತ್ತಯ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಸುವರ್ಣ, ಜತೆಕಾರ್ಯದರ್ಶಿಗಳಾಗಿ ಪ್ರಶಾಂತ್ ಟಿ. ಪೆರ್ಲ, ತೇಜಸ್ ಬಜಕೂಡ್ಲು, ಕೋಶಾಧಿಕಾರಿಯಾಗಿ ವಿನೋದ್ ರೈ ಬಜಕೂಡ್ಲು, ಕ್ರೀಡಾ ಕಾರ್ಯದರ್ಶಿಗಳಾಗಿ ಹರೀಶ್ ಬಜಕೂಡ್ಲು, ಚಂದ್ರ ಅಮೆಕ್ಕಳ, ನಾರಾಯಣ ಅಪ್ಪಯಮೂಲೆ, ಪ್ರಚಾರ ಸಮಿತಿ ಸಂಚಾಲಕರಗಿ ಪುರುಷೋತ್ತಮ ಪೆರ್ಲ, ಸುಜಿ ಪೆರ್ಲ, ದೀಕ್ಷಿತ್ ಬಜಕೂಡ್ಲು, ನಿತಿನ್ ಮಣಿಯಂಪಾರೆ, ಲೋಕೇಶ್ ಖಂಡಿಗೆ ಅವರನ್ನು ಆಯ್ಕೆ ಮಾಡಲಾಯಿತು.
7ರಂದು ಬಜಕೂಡ್ಲಿನಲ್ಲಿ 'ಅಮೃತದೀಪ ಕೆಸರು ಗದ್ದೆ ಉತ್ಸವ-2022'
0
ಜುಲೈ 28, 2022
Tags


