ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 18ನೇ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು ತಮ್ಮ ವಿದ್ವತ್ಪೂರ್ಣ ವಿಚಾರಗಳಲ್ಲಿ “ಶ್ರೀ ಕೃಷ್ಣನ ಜೀವನ ಸಂದೇಶ (ಗೀತೆಯ ನೆರಳಿನಲ್ಲಿ)” ಎಂಬ ವಿಷಯದಲ್ಲಿ ಪ್ರವಚನ ನಡೆಸಿಕೊಟ್ಟರು. ಶ್ರೀ ಕೃಷ್ಣನ ಜೀವನ ಹೇಗೆ ಭಗವದ್ಗೀತೆಯಾಯಿತು ಮತ್ತು ಗೀತೆಯಲ್ಲಿ ಅರ್ಜುನನಿಗೆ ಬೋಧಿಸಿದ್ದನ್ನು ತನ್ನ ಜೀವನದಲ್ಲಿ ಹೇಗೆ ನಡೆದು ಬಾಳಿದ ಎಂಬ ವಿಚಾರಗಳನ್ನು ಅತ್ಯಂತ ಸರಳವಾಗಿ ವಿವರಿಸಿ ಹೇಳುವ ಮೂಲಕ ಎಲ್ಲರ ಮನ ಮುಟ್ಟುವಂತೆ ತಿಳಿಸಿದರು.
ಈ ಸಂದರ್ಭ ನೂರಾರು ಭಕ್ತರು ಉಪಸ್ಥಿತರಿದ್ದರು. ಶ್ರೀಗಳು ಮಂತ್ರಾಕ್ಷತೆ ನೀಡಿ ಸಮೃದ್ದಿ, ನೆಮ್ಮದಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೊಂಡೆವೂರಲ್ಲಿ ಗೀತೆಯ ನೆರಳಿನಲ್ಲಿ ಪ್ರವಚನ
0
ಜುಲೈ 28, 2022
Tags

.jpg)
