HEALTH TIPS

ಸಮರಸ ಶಬ್ದಾಂತರಂಗ ಸೌರಭ_ಸಮಚಿಕೆ-19-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

    ಇಂದಿನ ಟಿಪ್ಪಣಿ
೧. ಸುದ್ದಿ ಶೀರ್ಷಿಕೆಗಳಲ್ಲಿ ಶುದ್ಧಿ ಇರಬೇಕು!

ಇವು ಕನ್ನಡದ ಪ್ರಮುಖ ದಿನಪತ್ರಿಕೆಗಳ ಇತ್ತೀಚಿನ (ಕಳೆದ ಮೂರ್ನಾಲ್ಕು ದಿನಗಳಿಂದೀಚೆಗಿನಸಂಚಿಕೆಗಳಿಂದ ಆಯ್ದ ಕೆಲವು ಸುದ್ದಿ ಶೀರ್ಷಿಕೆಗಳುಏನಾಗಿದೆ ಇವುಗಳ ಶುದ್ಧಿಗೆ ಎಂದು ಒಂದೊಂದಾಗಿ ನೋಡೋಣ.


ಅ) ‘ಪಶ್ಚಿಮಘಟ್ಟ ಸೂಕ್ಷ್ಮ’ ಕರಡಿಗೆ ರಾಜ್ಯ ವಿರೋಧ [ಕನ್ನಡಪ್ರಭ] - ಕಾಗುಣಿತ ತಪ್ಪಿಲ್ಲವ್ಯಾಕರಣ ದೋಷ ಇಲ್ಲ. ಆದರೂ ‘ಕರಡಿಗೆ’ ಪದ ಗೊಂದಲ ಮೂಡಿಸುತ್ತದೆ. ಸುದ್ದಿ ಇರುವುದು ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮವಲಯ ಎಂದು ಸಾರುವ ಕರಡು ಅಧಿಸೂಚನೆಯ ಬಗ್ಗೆ. ಕರಡು ಅಂದರೆ draft. ಅದಕ್ಕೆ ಚತುರ್ಥೀ ವಿಭಕ್ತಿಪ್ರತ್ಯಯ ‘’ಇಗೆ’ ಸೇರಿದಾಗ ‘ಕರಡಿಗೆ’ ಎಂದಾಗುವುದು ಹೌದು. ಆದರೆ ಓದುಗನ ಕಣ್ಮುಂದೆ ಕರಡಿ ಥಕ ಥೈ ಕುಣಿದಂತಾಗಬಾರದಲ್ಲಈ ಶೀರ್ಷಿಕೆಯನ್ನು " ‘ಪಶ್ಚಿಮಘಟ್ಟ ಸೂಕ್ಷ್ಮ’ ಕರಡು : ರಾಜ್ಯದ ವಿರೋಧ " ಎಂದು ಬರೆಯಬಹುದಿತ್ತು.

ಆ) ‘ಕಲಾಪ ಆರಂಭಕ್ಕೆ ಮುನ್ನ ಎಲ್ಲ ಗುಂಡಿಗೆ ಮುಕ್ತಿ’ [ಉದಯವಾಣಿ] - ಕಲಾಪ ಆರಂಭಕ್ಕೆ ಮುನ್ನ  ಯಾರೋ ಹಾರಿಸಿದ ಗುಂಡು ತಾಗಿ ಎಲ್ಲರೂ ಸತ್ತರೇಕಲಾಪ ಆರಂಭಕ್ಕೆ ಮುನ್ನ ಯಾರೂ ಯಾವ ನಮೂನೆಯದೂ‘ಗುಂಡು’ ಸೇವಿಸಬಾರದೆಂದು ಆದೇಶವೇಕಲಾಪ ಆರಂಭಕ್ಕೆ ಮುನ್ನ ಎಲ್ಲರೂ ತಂತಮ್ಮ ಅಂಗಿಯ ಗುಂಡಿ ಬಿಚ್ಚಿ ಬರಬೇಕೆಂದು ಅರ್ಥವೇಒಂದೂ ಅಲ್ಲ! ಸುದ್ದಿ ಇರುವುದು ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ. ಶೀರ್ಷಿಕೆಯಲ್ಲಿ ‘ಗುಂಡಿಗಳಿಗೆ’ ಎಂದು ಬರೆದಿದ್ದರೆ ಸರಿಯಾಗುತ್ತಿತ್ತು. ಅಲ್ಲದೆ, ‘ಎಲ್ಲ’ ಎಂಬ ಪದದ ಬಳಿಕ ಬಹುವಚನ ಇರಲೇಬೇಕು.

ಇ) ‘ವೃದ್ಧೆ ಹುಡುಕಿಕೊಟ್ಟ ವಾಟ್ಸ್‌ಅಪ್ ಗ್ರೂಪ್’! [ಪ್ರಜಾವಾಣಿ] - ವಾಟ್ಸ್‌ಅಪ್ ಗ್ರೂಪ್ ಕಾಣೆಯಾಗಿತ್ತಂತೆವೃದ್ಧೆಯೊಬ್ಬಳು ಅದನ್ನು ಹುಡುಕಿ ಕೊಟ್ಟಳು. ಆ ವೃದ್ಧೆಯ ಕಣ್ಣುಗಳ ತೀಕ್ಷ್ಣತೆಯನ್ನೂ ತಾಂತ್ರಿಕ ನೈಪುಣ್ಯವನ್ನೂಮೆಚ್ಚಲೇಬೇಕು! ವಿಷಯ ಹಾಗಲ್ಲ. ವೃದ್ಧೆಯೊಬ್ಬಳು ನಾಪತ್ತೆಯಾಗಿದ್ದಳು. ಅವಳನ್ನು ಹುಡುಕುವುದಕ್ಕೆ ವಾಟ್ಸ್‌ಅಪ್ ಗ್ರೂಪ್ ನೆರವಾಯ್ತು. ಅರ್ಥ ವಿರುದ್ಧವಾದರೂ ಅಡ್ಡಿಯಿಲ್ಲ ಶೀರ್ಷಿಕೆಯಲ್ಲಿ ದ್ವಿತೀಯಾ ವಿಭಕ್ತಿ ಬಳಸೆವುಎಂದು ಅದೇನು ಮೊಂಡುತನವೋ ಈಗಿನ ಪತ್ರಕರ್ತರದು. ಅರ್ಥ ಅಸಂಬದ್ಧವಾಗಿದೆಯೆಂದು ಯಾರೋ ಓದುಗರು ಗಮನ ಸೆಳೆದಿರಬೇಕುಆಮೇಲೆ ವೆಬ್ ಆವೃತ್ತಿಯಲ್ಲಿ ‘ವೃದ್ಧೆಯ ಹುಡುಕಿಕೊಟ್ಟ ವಾಟ್ಸ್‌ಅಪ್ ಗ್ರೂಪ್!’ ಎಂದು ತಿದ್ದಲಾಗಿದೆವಿಭಕ್ತಿಯೇ ಇಲ್ಲದೆ ಅರ್ಥವ್ಯತ್ಯಾಸವಾಗುವುದಕ್ಕಿಂತ ಷಷ್ಠೀ ವಿಭಕ್ತಿಯನ್ನಾದರೂ ಬಳಸಿದ್ದಾರಲ್ಲ ಪುಣ್ಯ.

ಈ) ‘ಪಾಕ್ ವಿರುದ್ಧ ಪ್ರತೀಕಾರಕ್ಕೆ ಸೇನೆ ಸಿದ್ಧತೆ’ [ವಿಜಯವಾಣಿ] - ಇಲ್ಲಿರುವುದು ಕಾಗುಣಿತ ದೋಷ. ‘ಪ್ರತೀಕಾರ’ ಅಲ್ಲ, ‘ಪ್ರತಿಕಾರ’ ಆಗಬೇಕು. ಪ್ರತಿಯಾಗಿ ಮಾಡುವುದನ್ನು ಪ್ರತಿಕಾರ ಎನ್ನುತ್ತೇವೆಸ್ವಾರಸ್ಯವೆಂದರೆಶೀರ್ಷಿಕೆಯಲ್ಲಿ ಮಾತ್ರ ಪ್ರತೀಕಾರ ಎಂದು ಅಚ್ಚಾಗಿದೆಸುದ್ದಿವಿವರದಲ್ಲಿ ಪ್ರತಿಕಾರ ಎಂದು ಸರಿಯಾಗಿಯೇ ಇದೆ.

ಉ) ‘ಇತಿಹಾಸ ನಿರ್ಮಿಸಿದ ಮಹಿಳಾ ನಿರೂಪಕಿ’ [ವಿಜಯಕರ್ನಾಟಕ] - ಇದೊಂದು ಕೆಟ್ಟ ಚಾಳಿ. ‘ಮಹಿಳಾ ಲೇಖಕಿ’, ‘ಮಹಿಳಾ ವೈದ್ಯೆ, ‘ಮಹಿಳಾ ಚಾಲಕಿ’ ಅಂತೆಲ್ಲ ಬರೆಯುವುದು. ಸ್ತ್ರೀಲಿಂಗದ ಪದವನ್ನೇ ಬಳಸಿದ ಮೇಲೆ ಅದರ ಮುಂದೆ ‘ಮಹಿಳಾ’ ಏಕೆಸೌದಿ ಅರೇಬಿಯಾದ ಟಿವಿಯಲ್ಲಿ ಇದುವರೆಗೆ ಬೆಳಗಿನ ಸುದ್ದಿನಿರೂಪಣೆಗೆ ಮಾತ್ರ ಮಹಿಳೆಯರಿರುತ್ತಿದ್ದರಂತೆಈಗ ಸಂಜೆಯ ಸುದ್ದಿನಿರೂಪಣೆಗೂ ಮಹಿಳೆಯರಿಗೆ ಅನುಮತಿ ಸಿಕ್ಕಿದೆಯಂತೆ. ಹಾಗೆ ಸೌದಿ ಅರೇಬಿಯಾದ ಟಿವಿಯಲ್ಲಿ ಸಂಜೆಯ ಸುದ್ದಿ ಓದಿದ ಮೊತ್ತಮೊದಲ ಮಹಿಳೆಯನ್ನು ಕುರಿತ ಸುದ್ದಿ ಇದು.

ಊ) ‘ವನಿತೆಯರ ನಾಗಲೋಟಕ್ಕೆ ಕಡಿವಾಣವಿಲ್ಲ’ [ವಿಶ್ವವಾಣಿ] - ನಾಗನೂ ಇಲ್ಲಲೋಟವೂ ಇಲ್ಲ. ಪದಪರಿಚಯವಂತೂ ಇಲ್ಲವೇ ಇಲ್ಲ. ನಾಲ್ಕು ಕಾಲ್ಗಳ ಓಟ -ನಾಲ್ಕಾಲೋಟ ನಾಕ್ಕಾಲೋಟ -ನಾಗಾಲೋಟ ಇದು ಪದದ ವ್ಯುತ್ಪತ್ತಿ. ಕುದುರೆಜಿಂಕೆಚಿರತೆ ಮುಂತಾದ ಪ್ರಾಣಿಗಳ ಓಟಅತಿ ವೇಗದ್ದುಕೆಲವೊಮ್ಮೆ ನಾಲ್ಕೂ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ಓಡುವ ರೀತಿ- ಇದನ್ನು ಬಣ್ಣಿಸಲು ‘ನಾಗಾಲೋಟ’ ಪದ ಹುಟ್ಟಿಕೊಂಡಿರುವುದು.

===
೨. ‘ದಂಪತಿ’ಯಂತೆಯೇ ‘ಸಿಬ್ಬಂದಿ’ಗೂ ಬಹುವಚನ ಬೇಕಿಲ್ಲ.

ಕಳೆದ ವಾರದ ಕಲಿಕೆಯಲ್ಲಿ ‘ದಂಪತಿ’ ಪದವನ್ನು ಕುರಿತ ಟಿಪ್ಪಣಿ ಇತ್ತು. "ಒಂದು" ಜೋಡಿ ಮತ್ತು "ಒಂದಕ್ಕಿಂತ ಹೆಚ್ಚು" ಜೋಡಿಗಳು ಎಂಬ ಸ್ಪಷ್ಟತೆ ಮೂಡುವುದಕ್ಕೋಸ್ಕರ ಕ್ರಮವಾಗಿ ‘ದಂಪತಿ’ ಮತ್ತು ‘ದಂಪತಿಗಳು’ ಎಂದು ಹೇಳುವುದು/ಬರೆಯುವುದು ಹೆಚ್ಚು ತಾರ್ಕಿಕ. ಆ ವಿವರಣೆ ಕೆಲವು ಸಂಸ್ಕೃತ ಪಂಡಿತರಿಗೆ ಒಂದೋ ಅರ್ಥವಾಗಿಲ್ಲಅಥವಾ ಇಷ್ಟವಾಗಿಲ್ಲಸಂಸ್ಕೃತದಲ್ಲಿನ ಲಿಂಗ ವಚನಗಳು ಕನ್ನಡದಲ್ಲೂ ಹಾಗೆಯೇ ಇರುತ್ತವೆ/ಇರಬೇಕುಎಂದೇನಿಲ್ಲ. ಉದಾಹರಣೆಗೆಸಂಸ್ಕೃತದಲ್ಲಿ ‘ಪ್ರಾಣ’ ನಿತ್ಯಬಹುವಚನ ಶಬ್ದ (ಪಂಚಪ್ರಾಣಗಳು ಎಂಬ ಕಾರಣದಿಂದ). "ಪ್ರಾಣಾನ್ ಅತ್ಯಜತ್" ಎಂದು ಸಂಸ್ಕೃತದಲ್ಲಿ ಬರೆಯುತ್ತೇವೆ. ಕನ್ನಡದಲ್ಲಿ "ಪ್ರಾಣಗಳನ್ನು ಬಿಟ್ಟರು" ಎಂದು ಬರೆಯುತ್ತೇವೆಯೇ?  ಸಂಸ್ಕೃತದಲ್ಲಿ `ಪತ್ನಿ’ ಎಂಬರ್ಥದಲ್ಲಿ ಒಂದು ಪುಲ್ಲಿಂಗ ಪದವೂ ಇನ್ನೊಂದು ನಪುಂಸಕಲಿಂಗ ಪದವೂ ಇದೆ. ಹಾಗಂತ ಕನ್ನಡದಲ್ಲಿ ‘ಹೆಂಡತಿ ಬಂದಿದ್ದಾನೆ’, ‘ಹೆಂಡತಿ ಬಂದಿದೆ’ ಎಂದು ಬರೆಯುತ್ತೇವೆಯೇಇಲ್ಲ ತಾನೆ?

ಸಿಬ್ಬಂದಿ’ ಎಂಬ ಪದ ಅರೇಬಿಕ್ ಮತ್ತು ಪಾರಸಿ ಭಾಷೆಗಳ ‘ಸಿಫ್‌ಬಂದಿ’ ಯಿಂದ ಬಂದದ್ದು ಎನ್ನುತ್ತಾರೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯಕಚೇರಿಯ ನೌಕರವರ್ಗ ಎಂದು ಆ ಪದದ ಅರ್ಥ. ಇಂಗ್ಲಿಷ್‌ನಲ್ಲಾದರೆ Staff. ಅಲ್ಲಿ ನಾವು ಹೇಗೆ Staffs ಎನ್ನುವುದಿಲ್ಲವೋ ಹಾಗೆಯೇ ಇಲ್ಲಿಯೂ ಬಹುವಚನ ಬೇಡ. ಸಿಬ್ಬಂದಿಗಳುಸಿಬ್ಬಂದಿಗಳನ್ನುಸಿಬ್ಬಂದಿಗಳಿಂದಸಿಬ್ಬಂದಿಗಳಿಗೆಸಿಬ್ಬಂದಿಗಳಸಿಬ್ಬಂದಿಗಳಲ್ಲಿ... ಇವುಗಳನ್ನು ಕ್ರಮವಾಗಿ ಸಿಬ್ಬಂದಿಸಿಬ್ಬಂದಿಯನ್ನುಸಿಬ್ಬಂದಿಯಿಂದಸಿಬ್ಬಂದಿಗೆಸಿಬ್ಬಂದಿಯಸಿಬ್ಬಂದಿಯಲ್ಲಿ ಎಂದು ಬರೆಯುವುದು ಒಳ್ಳೆಯದು. ಅಕ್ಷರಗಳ ಉಳಿತಾಯವೂ ಆಗುತ್ತದೆವ್ಯಾಕರಣಬದ್ಧವೂ ಆಗುತ್ತದೆ.

====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:

ಅ) ಕವಯತ್ರಿ ತಪ್ಪು. ಕವಯಿತ್ರೀ ಸರಿ. (ಕವಿ ಶಬ್ದದ ಸ್ತ್ರೀಲಿಂಗ ಪದ)
ಆ) ಕಶ್ಮಲ ಸರಿ. ಕಲ್ಮಷ ಸಹ ಸರಿ. ಕೊಳೆಧೂಳುಪಾಪಅಪವಾದಅಪಕೀರ್ತಿ ಮುಂತಾದ ಅರ್ಥಗಳುಕಷ್ಮಲ ಅಥವಾ ಕಲ್ಮಶ ಎಂದು ಬರೆದರೆ ತಪ್ಪಾಗುತ್ತದೆ.
ಇ) ವಿಜ್ರಂಭಣೆ ತಪ್ಪು. ವಿಜೃಂಭಣೆ ಸರಿ.
ಈ) ಪರಿಶಿಷ್ಠ ತಪ್ಪು. ಪರಿಶಿಷ್ಟ ಸರಿ. ಮುಖ್ಯಭಾಗದಲ್ಲಿ ಸೇರದೆ ಬಿಟ್ಟುಹೋಗಿರುವ ಎಂದು ಅರ್ಥ.
ಉ) ಕುಟುಂಬಸ್ತಪೀಠಸ್ತಗ್ರಾಮಸ್ತದೇಶಸ್ತ... ಇವೆಲ್ಲದರಲ್ಲೂ ‘ಸ್ತ’ ಬದಲಿಗೆ ‘ಸ್ಥ’ ಇರಬೇಕು.

 ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ
              FEEDBACK: samarasasudhi@gmail.com

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries