HEALTH TIPS

ಕೋವಿಡ್-19 ನಂತರದ ಸಮಸ್ಯೆಗಳಿಗೆ ಯೋಗ, ಆಯುರ್ವೇದ ಹೆಚ್ಚು ಸಹಕಾರಿ- ಶ್ರೀಪಾದ್ ನಾಯ್ಕ್

        ಪಣಜಿ: ಕೋವಿಡ್-19 ನಂತರದ ತೊಂದರೆಗಳನ್ನು ಎದುರಿಸಲು ಆಯುರ್ವೇದ, ಯೋಗ ಮತ್ತು ಇತರ ವಿಧಾನಗಳು ಇಡೀ ಜಗತ್ತಿಗೆ ತುಂಬಾ ಸಹಕಾರಿಯಾಗಲಿವೆ ಎಂದು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ) ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದ್ದಾರೆ.

          ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಆಯುಷ್ ಸಚಿವಾಲಯ ಜಂಟಿಯಾಗಿ ಆರಂಭಿಸಿರುವ ರಾಷ್ಟ್ರೀಯ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಆಯುರ್ವೇದವನ್ನು ಸೇರಿಸಲಾಗಿದೆ ಎಂದು ಸರಣಿ ಟ್ವೀಟ್ ಗಳಲ್ಲಿ  ಅವರು ತಿಳಿಸಿದ್ದಾರೆ. 

     ಭಾರತ, ಕೋವಿಡ್-19 ಸಂದರ್ಭದಲ್ಲಿ  ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಇದರ ಜೊತೆಗೆ ಅಂತಾರಾಷ್ಟ್ರೀಯ ಪ್ರಯತ್ನಗಳ ಮೂಲಕ ಬೆಂಬಲವೂ ಅಗತ್ಯವಾಗಿದೆ. ಕೋವಿಡ್-19ರಿಂದ ಗುಣಮುಖರಾಗಿ ನಂತರವೂ ತೊಂದರೆಗಳು ಬಾಧಿಸಿದರೆ ಇಡೀ ವಿಶ್ವಕ್ಕೆ  ಆಯುರ್ವೇದ, ಯೋಗ ಮತ್ತು ಆಯುಷ್ ನ ಪದ್ಧತಿಗಳು ತುಂಬಾ ಸಹಾಯಕವಾಗುತ್ತವೆ ಎಂಬ ವಿಶ್ವಾಸ ತಮಗಿದೆ ಎಂದಿದ್ದಾರೆ.

     ಆರೋಗ್ಯ ಮತ್ತು ಕಾಯಿಲೆ ಮತ್ತು ವೆಚ್ಚದ ಪರಿಣಾಮಕಾರಿತ್ವದ ಬಗೆಗಿನ ಸಮಗ್ರ ವಿಧಾನದಿಂದಾಗಿ ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಔಷಧ ವಿಧಾನಗಳು ರೋಗವನ್ನು ಆರಂಭದಲ್ಲೇ ತಡೆಯುವುದರೊಂದಿಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಲ್ಲಿ ನೆರವಾಗಲಿವೆ. ಸಾಂಕ್ರಾಮಿಕ ರೋಗದ ನಂತರ ಉಂಟಾಗುವ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಲು ಈ ವಿಧಾನಗಳು ಪರಿಹಾರಗಳನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

     ಸಾಂಕ್ರಾಮಿಕ ರೋಗದ ತೀವ್ರ ಪರಿಣಾಮ, ಸಮಾಜ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಮೂಲ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದಿರುವ ಅವರು, ಭವಿಷ್ಯದಲ್ಲಿ ಇಂತಹ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ತಡೆಗಟ್ಟುವಿಕೆ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಹೊಸ ಮಾದರಿಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries