ತಿರುವನಂತಪುರ: ಶಬರಿಮಲೆಯಲ್ಲಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ. ಕೋವಿಡ್ ಪೆÇ್ರೀಟೋಕಾಲ್ ಪ್ರಕಾರ, ವಾರಾಂತ್ಯದಲ್ಲಿ 2000 ಜನರಿಗೆ ಶಬರಿಮಲೆಗೆ ಭೇಟಿ ನೀಡಲು ಅವಕಾಶವಿದೆ. ಅದನ್ನು 5,000 ಕ್ಕೆ ಏರಿಸುವ ಬಗ್ಗೆ ಯೋಚಿಸುವುದಾಗಿ ಸಚಿವರು ಹೇಳಿದರು.
ಆದಾಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೈನಂದಿನ ದರ್ಶನಕ್ಕೆ ಅವಕಾಶವಿರುವ ಭಕ್ತರ ಸಂಖ್ಯೆಯನ್ನು ಹೆಚ್ಚಿಸುವಂತೆ ಮಂಡಳಿ ರಾಜ್ಯ ಸರ್ಕಾರವನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಪ್ರತಿಕ್ರಿಯೆ ನೀಡಿರುವರು.
ದೈನಂದಿನ ಆದಾಯ 3.5 ಕೋಟಿ ರೂ.ಗಿಂತ ಹೆಚ್ಚಿತ್ತು. ಆದರೆ ಈಗ ಅದು 10 ಲಕ್ಷ ರೂ.ಗಿಂತ ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಹೆಚ್ಚಿನ ಭಕ್ತರಿಗೆ ಅವಕಾಶ ನೀಡಲು ಸರ್ಕಾರದ ನಿರ್ಧಾರಕ್ಕಾಗಿ ದೇವಸ್ವಂ ಮಂಡಳಿ ಕಾಯುತ್ತಿದೆ. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿರುವರು.
ಯಾತ್ರಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ, ದೇವಸ್ವಂ ಮಂಡಳಿಯು ಶನಿವಾರ ಮತ್ತು ಭಾನುವಾರದಂದು ಸಾರ್ವಜನಿಕ ರಜಾದಿನಗಳಲ್ಲಿ ವರ್ಚುವಲ್ ಕ್ಯೂ ಮೂಲಕ ಭೇಟಿಗಳನ್ನು ಕಾಯ್ದಿರಿಸಲು 2,000 ಜನರಿಗೆ ವ್ಯವಸ್ಥೆ ಮಾಡಿತ್ತು.





