HEALTH TIPS

ತೀರ್ಪುಗಳಲ್ಲಿ ಮಹಿಳೆಯರ ಅವಹೇಳನದ ಪದ ಬಳಕೆ ತಡೆಗೆ ಸಮಿತಿ ರಚನೆ: ಸಿಜೆಐ ಚಂದ್ರಚೂಡ್

              ವದೆಹಲಿ:ದೇಶದ ನ್ಯಾಯಾಲಯಗಳಲ್ಲಿ ಬಳಕೆಯಾಗುತ್ತಿರುವ ಅನುಚಿತವಾದ ಲಿಂಗತಾರತಮ್ಯವಾದಿ ಪದಗಳ ಪಟ್ಟಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು ತಿಳಿಸಿದ್ದಾರೆಂದು ಕಾನೂನು ಸುದ್ದಿಜಾಲತಾಣ ಲೈವ್ ಲಾ ಗುರುವಾರ ವರದಿ ಮಾಡಿದೆ.

                 ಭಾರತದಲ್ಲಿ ನ್ಯಾಯಾಲಯಗಳು ಆಗಾಗ್ಗೆ ನೀಡುವ ತೀರ್ಪುಗಳಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಉಲ್ಲೇಖಿಸಲಾಗುತ್ತಿದೆ. ಆಶ್ಚರ್ಯವೆಂದರೆ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಹಲವು ಸಲ ಮಹಿಳೆಯರು ಕೂಡಾ ಅಂತಹ ಪದಗಳನ್ನು ಪಿತೃಪ್ರಧಾನವಾದಿವೆಂಬುದಾಗಿ ಪರಿಗಣಿಸುತ್ತಿಲ್ಲ ಎಂದು ಚಂದ್ರಚೂಡ ಹೇಳಿದ್ದಾರೆ.

           ಕೋಲ್ಕತಾ ಹೈಕೋರ್ಟ್ ನ ನ್ಯಾಯಾಧೀಶೆ ನ್ಯಾಯಮೂರ್ತಿ ಮೌಸಮಿ ಭಟ್ಟಾಚಾರ್ಯ ನೇತೃತ್ವದ ಸಮಿತಿಯು ಕಾನೂನಾತ್ಮಕ ಸಂವಾದದಲ್ಲಿ ಬಳಕೆಯಾಗುತ್ತಿರುವ ಲಿಂಗತಾರತಮ್ಯವಾದಿ ಪದಕೋಶವನ್ನು ಪಟ್ಟಿ ಮಾಡುತ್ತಿದೆ. ಮಾಜಿ ನ್ಯಾಯಾಧೀಶರಾ ಪ್ರಭಾ ಶ್ರೀದೇವನ್ ಹಾಗೂ ಗೀತಾ ಮಿತ್ತಲ್ ಸಮಿತಿಯಲ್ಲಿದ್ದಾರೆ. ಕೋಲ್ಕತಾದಲ್ಲಿನ ಪಶ್ಚಿಮಬಂಗಾಳ ರಾಷ್ಟ್ರೀಯ ಕಾನೂನು ವಿಜ್ಞಾನ ವಿಶ್ವವಿದ್ಯಾನಿಲಯದ ಬೋಧಕವರ್ಗದ ಸದಸ್ಯೆ ಪ್ರೊಫೆಸರ್ ಧಝುಮಾ ಸೇನ್ ಸಮಿತಿಯ ಇನ್ನೋರ್ವ ಸದಸ್ಯೆಯಾಗಿದ್ದಾರೆ ಎಂದವರು ಹೇಳಿದರು.

                 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಗುರುವಾರ ಸುಪ್ರೀಂಕೋರ್ಟ್ ನ ಲಿಂಗ ಸಂವೇದನೆ ಹಾಗೂ ಆಂತರಿಕ ದೂರುಗಳ ಸಮಿತಿಯು ಆಯೋಜಿಸಿದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು ಮಾತನಾಡುತ್ತಿದ್ದರು. ಕಾನೂನಾತ್ಮಕ ಸಂವಹನದಲ್ಲಿ ಲಿಂಗ ತಾರತಮ್ಯದ ವೇದಿಕೆಯ ಸೃಷ್ಟಿಗೆ ಎಡೆಮಾಡುವಂತಹ ಮಹಿಳೆಯರನ್ನು ಉದ್ದೇಶಿಸಿ ಬಳಸಲಾಗುವ ಪದಗಳಿಗೆ ಚಂದ್ರಚೂಡ್ ಅವರು ಕೆಲವು ನಿದರ್ಶನಗಳನ್ನು ನೀಡಿದರು. ‌

                   '' ಉದಾಹರಣೆಗೆ, ಮಹಿಳೆಯೊಬ್ಬಳು ಪ್ರೇಮಸಂಬಂಧವನ್ನು ಹೊಂದಿದ್ದಲ್ಲಿ ಆಕೆಯನ್ನು ಉಪಪತ್ನಿ ಎಂದು ಪ್ರಸ್ತಾವಿಸುವ ಹಲವಾರು ತೀರ್ಪುಗನ್ನು ನಾನು ಗಮನಿಸಿದ್ದೇನೆ. ಭಾರತೀಯ ದಂಡಸಂಹಿತೆಯ 498 ಎ ಸೆಕ್ಷನ್ ಹಾಗೂ ಗೃಹೀಕ ಹಿಂಸೆ ತಡೆ ಕಾಯ್ದೆಯಡಿ ಎಫ್‌ಐಆರ್ಗಳನ್ನು ತಳ್ಳಿಹಾಕಲು ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪುಗಳಲ್ಲಿ ಮಹಿಳೆಯನ್ನು ' ಇಟ್ಟುಕೊಂಡವಳು' ಎಂದು ಕರೆಯಲಾಗುತ್ತದೆ ಎಂದು ಸಿಜೆಐ ಅವರು ಹೇಳಿದ್ದಾರೆ.

                 ''ಈ ಅಸಮರ್ಪಕ ಪದಗಳನ್ನು ಕಾನೂನು ಪರಿಭಾಷೆಯಿಂದ ತೊಡೆದುಹಾಕುವ ಕ್ರಮವು ಯಾವುದೇ ನ್ಯಾಯಾಧೀಶರನ್ನು ಗುರಿಯಿಡುವ ಅಥವಾ ಅವರನ್ನು ಕ್ಷುಲ್ಲಕಗೊಳಿಸುವ ಉದ್ದೇಶದಿಂದ ಕೂಡಿಲ್ಲವೆಂದವರು ಸ್ಪಷ್ಟಪಡಿಸಿದರು. ಈ ವಾಸ್ತವತೆಗಳ ಬಗ್ಗೆ ನಾವು ಮುಕ್ತಮನಸ್ಸನ್ನು ಹೊಂದದೆ ಇದ್ದಲ್ಲಿ ಒಂದು ಸಮಾಜವಾಗಿ ನಾವು ವಿಕಸನ ಹೊಂದುವುದು ಕಷ್ಟಕರವಾಗಲಿದೆ'ಎಂದು ಚಂದ್ರಚೂಡ ಅವರು ಹೇಳಿದರು.

               ಲೈಂಗಿಕ ಕಿರುಕುಳ ಹಾಗೂ ಮಹಿಳೆಯರನ್ನು ಗುರಿಯಿರಿಸಿ ಎಸಗುವ ಅನುಚಿತವಾದ ನಡವಳಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ತಾಳಬೇಕೆಂದು ನ್ಯಾಯಮೂರ್ತಿ ಚಂದ್ರಚೂಡ್ ಕರೆ ನೀಡಿದರು. ಸುಪ್ರೀಂಕೋರ್ಟ್ ಸಂಕೀರ್ಣದಲ್ಲಿ ಮಹಿಳಾ ನ್ಯಾಯವಾದಿಗಳಿಗಾಗಿ ವಿಶಾಲವಾದ ಸ್ಥಳವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿರುವುದಾಗಿ ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries