HEALTH TIPS

ನಿದ್ರಾಹೀನತೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ; ನಿದ್ರಾಹೀನತೆಗೆ ಪ್ರಮುಖ ಕಾರಣವೇ ಇದು!

 

              ನವದೆಹಲಿ:    ನಿನ್ನೆ ವಿಶ್ವ ನಿದ್ರಾ ದಿನ. ಜಗತ್ತಿನಾದ್ಯಂತ ಆಚರಿಸುತ್ತಿರುವ ಈ ಅಂತಾರಾಷ್ಟ್ರೀಯ ನಿದ್ರಾ ದಿನದ ಹಿನ್ನೆಲೆಯಲ್ಲಿ ನಿದ್ರೆಗೆ ಸಂಬಂಧಿಸಿದ ಒಂದಷ್ಟು ಸಂಗತಿಗಳು ಹೊರಬರುವುದು ಸರ್ವೇಸಾಮಾನ್ಯ. ಅದೇ ರೀತಿ ಈ ವರ್ಷವೂ ನಿದಿರೆಯ ಬಗ್ಗೆ ಕೆಲವು ಮಾಹಿತಿ ಬಹಿರಂಗಗೊಂಡಿದೆ.

                ಅದರಲ್ಲೂ ನಿದ್ರಾಹೀನತೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂಬುದು ಅಧ್ಯಯನವೊಂದರಿಂದ ಬಹಿರಂಗಗೊಂಡಿದೆ. ನಿದ್ರಾಹೀನತೆಯ ವಿಚಾರದಲ್ಲಿ ಜಗತ್ತಿನಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.

                  ZzzQuil ಇಂಡಿಯಾ ನ್ಯಾಷನಲ್​ ಸ್ಲೀಪ್​ ಸರ್ವೇ ಪ್ರಕಾರ ನಿದ್ರಾಹೀನತೆ ಪ್ರಮುಖ ಕಾರಣ ಕೂಡ ಬಯಲಾಗಿದೆ. ನಿದ್ರಾಹೀನತೆಯಲ್ಲಿ ಬಳಲುತ್ತಿರುವವರ ಪೈಕಿ ಶೇ. 54 ಜನರಲ್ಲಿ ಅವರ ನಿದ್ರಾಸಮಸ್ಯೆಗೆ ಸೋಷಿಯಲ್​ ಹಾಗೂ ಡಿಜಿಟಲ್ ಮೀಡಿಯಾ ವ್ಯಸನವೇ ಕಾರಣ ಎಂಬುದೂ ತಿಳಿದುಬಂದಿದೆ.

                   ಮತ್ತೊಂದೆಡೆ ದ ಗ್ರೇಟ್ ಇಂಡಿಯಾ ಸ್ಲೀಪ್​ ಸ್ಕೋರ್​​ಕಾರ್ಡ್​ ಪ್ರಕಾರ ಭಾರತದಲ್ಲಿ ಶೇ. 87 ಮಂದಿ ಮಲಗುವುದಕ್ಕೂ ಮುನ್ನ ಸ್ಮಾರ್ಟ್​ಫೋನ್​ ಬಳಸುವುದೇ ನಿದ್ರಾಹೀನತೆಗೆ ಪ್ರಮುಖ ಕಾರಣ. ಇನ್ನು ಮಹಿಳೆಯರಲ್ಲಿ ಸುಮಾರು ಶೇ. 67 ಮಂದಿ ಕೆಲಸದ ವೇಳೆ ತೂಕಡಿಸಿದರೆ, ಪುರುಷರಲ್ಲಿ ಈ ಪ್ರಮಾಣ ಶೇ. 56. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಕೆಲಸದ ವೇಳೆ ತೂಕಡಿಸುವವರ ಪ್ರಮಾಣ ಭಾರತದಲ್ಲಿ ಶೇ. 21 ಹೆಚ್ಚಾಗಿದೆ ಎಂದೂ ಈ ಅಧ್ಯಯನ ಹೇಳಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries