HEALTH TIPS

ಅಮೆರಿಕದಲ್ಲಿ ಮುಚ್ಚಿದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ ನಲ್ಲಿ ಭಾರತೀಯ ನವೋದ್ಯಮಗಳ 8,200 ಕೋಟಿ ರೂ. ಠೇವಣಿ

                  ವದೆಹಲಿ:ಕಳೆದ ವಾರ ಬಾಗಿಲು ಹಾಕಿದ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ನಲ್ಲಿ ಭಾರತೀಯ ನವೋದ್ಯಮಗಳು (ಸ್ಟಾರ್ಟ್-ಅಪ್) ಸುಮಾರು ಒಂದು ಬಿಲಿಯ ಡಾಲರ್ (ಸುಮಾರು 8,200 ಕೋಟಿ ರೂಪಾಯಿ) ಮೊತ್ತವನ್ನು ಠೇವಣಿ ಇಟ್ಟಿವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗುರುವಾರ ಹೇಳಿದರು.

                     ಕ್ಯಾಲಿಫೋರ್ನಿಯ ಹಣಕಾಸು ರಕ್ಷಣಾ ಮತ್ತು ಹೊಸತನ ಇಲಾಖೆಯು ಸಿಲಿಕಾನ್ ವ್ಯಾಲಿ ಬ್ಯಾಂಕ್ ಗೆ ಮಾರ್ಚ್ 10ರಂದು ಬೀಗ ಹಾಕಿದೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ, ಬಾಗಿಲು ಹಾಕಿದ ಮೊದಲ ಅತಿ ದೊಡ್ಡ ಬ್ಯಾಂಕ್ ಅದಾಗಿದೆ.

                     ಭಾರತೀಯ ನವೋದ್ಯಮಗಳು ಸಂಕೀರ್ಣ ಅಮೆರಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅವಲಂಬಿಸುವ ಬದಲು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಪರಿವರ್ತನೆಗೊಳ್ಳುವಂತೆ ಹೇಗೆ ಮಾಡಬಹುದು ಎನ್ನುವುದು ಈಗಿನ ಯೋಜನೆಯಾಗಿದೆ ಎಂದು ಗುರುವಾರ ಟ್ವಿಟರ್ ವಿಚಾರ ವಿನಿಮಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಚಂದ್ರಶೇಖರ್ ಹೇಳಿದರು.

                    ಸಿಲಿಕಾನ್ ವ್ಯಾಲಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ನವೋದ್ಯಮಗಳು ಸೇರಿದಂತೆ ವಿಷಯಕ್ಕೆ ಸಂಬಂಧಿಸಿದ 460ಕ್ಕೂ ಅಧಿಕ ಭಾಗೀದಾರರನ್ನು ಭೇಟಿಯಾದ ಬಳಿಕ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವರು ಈ ಹೇಳಿಕೆ ನೀಡಿದ್ದಾರೆ.

                ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿದ ಮೂರು ದಿನಗಳ ಬಳಿಕ, 110 ಬಿಲಿಯ ಡಾಲರ್ (9 ಲಕ್ಷ ಕೋಟಿ ರೂಪಾಯಿಗೂ ಅಧಿಕ) ಮೌಲ್ಯದ ಸೊತ್ತುಗಳನ್ನು ಹೊಂದಿದ್ದ ನ್ಯೂಯಾರ್ಕ್ನ ಸಿಗ್ನೇಚರ್ ಬ್ಯಾಂಕ್ ಬಾಗಿಲು ಹಾಕಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries