HEALTH TIPS

ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯಿಂದ ಸಾರ್ವಜನಿಕ ವಿದ್ಯಾಭ್ಯಾಸ ರಂಗದಲ್ಲಿ ಉತ್ತೇಜನ-ಸಿಎಂ ಪಿಣರಯಿ ವಿಜಯನ್

 


              ಕಾಸರಗೋಡು: ಕೇರಳದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ರಾಜ್ಯದ ಸಾರ್ವಜನಿಕ ವಿದ್ಯಾಭ್ಯಾಸ ರಂಗದ ಉತ್ತೇಜನಕ್ಕೆ ಕಾರಣವಾಗಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. 

          ಅವರು ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನವಕೇರಳ ಕ್ರಿಯಾ ಯೋಜನೆ'ವಿದ್ಯಾಕಿರಣ ಮಿಷನ್' ಅಂಗವಾಗಿ ಕಾಸರಗೋಡು ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ನಿಮಿಸಲಾದ ನೂತನ ಕಟ್ಟಡ ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಡಿದರು.  

             ಜಿಯುಪಿಎಸ್ ಸುಕುಟ್‍ಬಯಲು ನೂತನವಾಗಿ ನಿರ್ಮಿಸಿದ ಕಟ್ಟಡವನ್ನು ಉದ್ಘಾಟಿಸಿಇಂದು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗನನೀಯವಗಿ ಹೆಚ್ಚಾಗಿದೆ.  ದೇಶದಲ್ಲಿ ಕೇರಳವು ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಬಗ್ಗೆ ಭಾರತೀಯ ನೀತಿ ಆಯೋಗ್ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ತಿಲಿಸಿದರು.

             ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ, ನೂತನ ಕಟ್ಟಡದ ಶಿಲಾಫಲಕ ಅನಾವರಣಗೊಳಿಸಿದರು.  ಕಾಸರಗೋಡು ನಗರಸಭೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ರಜನಿ, ವಾರ್ಡ್ ಕೌನ್ಸಿಲರ್‍ಗಳಾದ ಅಶ್ವಿನಿ ಜಿ ನಾಯ್ಕ್, ಹೇಮಲತಾ, ಡಯಟ್ ಕಾಸರಗೋಡು ಪ್ರಾಂಶುಪಾಲ ರಘುರಾಮ ಭಟ್, ಕಾಸರಗೋಡು ಎಇಒ ಆಗಸ್ಟಿನ್ ಬರ್ನಾಡ್, ಎಸ್‍ಎಂಸಿ ಅಧ್ಯಕ್ಷ ಪಿ.ರಮೇಶ, ಎಂಪಿಟಿಎ ಅಧ್ಯಕ್ಷೆ ಶೀಮಾ ಉಪಸ್ಥಿತರಿದ್ದರು.  ಶಾಲಾ ಮುಖ್ಯ ಶಿಕ್ಷಕಿ ಕೆ.ಎ.ಯಶೋದಾ ಸ್ವಾಗತಿಸಿದರು. ತಾ.ಪಂ.ಅಧ್ಯಕ್ಷ ಕೆ.ಆರ್.ಹರೀಶ್ ವಂದಿಸಿದರು.

            ಜಿಲ್ಲೆಯಲ್ಲಿ ಕೊಡಕ್ಕಾಡ್ ಸರ್ಕಾರಿ ವೆಲ್ಫೇರ್ ಯುಪಿ ಶಾಲೆ, ಸರ್ಕಾರಿ ವೊಕೆಸನಲ್ ಹೈಯರ್ ಸೆಕೆಂಡರಿ ಶಾಲೆ ಹಾಗೂ ರಾವಣೇಶ್ವರ ಸರ್ಕರಿ ಹೈಯರ್ ಸೆಕೆಂಡರಿ ಶಾಲೆಗಾಗಿ ನಿರ್ಮಿಸಲಾದ ನೂತನ ಕಟ್ಟಡಗಳನ್ನು ಮುಕ್ಯ ಮಂತ್ರಿ ಪಿಣರಾಯಿ ವಿಜಯನ್ ಆನ್‍ಲೈನ್ ಮೂಲಕ ಉದ್ಘಾಟಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries