HEALTH TIPS

ಜನರಲ್ ಅಸ್ಪತ್ರೆ ಮೇಲ್ವಿಚಾರಕ ಡಾ. ರಾಜಾರಾಂ ಗೆ ಬಡ್ತಿಯೊಂದಿಗೆ ವರ್ಗಾವಣೆ

 




                    ಕಾಸರಗೋಡು: ನಗರದ ಜನರಲ್ ಆಸ್ಪತ್ರೆ ಅಧೀಕ್ಷಕ ಡಾ. ಕೆ.ಕೆ.ರಾಜಾರಾಂ ಅವರನ್ನು ಆರೋಗ್ಯ ಸೇವೆಗಳ ಹೆಚ್ಚುವರಿ ನಿರ್ದೇಶಕರಾಗಿ ಬಡ್ತಿ ನೀಡಿ, ಕೋಯಿಕ್ಕೋಡ್ ಜಿಲ್ಲಾ ವೈದ್ಯಾಧಿಕಾರಿಯಾಗಿ ನೇಮಿಸಲಾಗಿದೆ. 

                   2016 ರಿಂದ ಕಾಸರಗೋಡು ಜನರಲ್ ಆಸ್ಪತ್ರೆಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

               ಅವರು ಬಟ್ಟೆ ಬ್ಯಾಂಕ್ ಮತ್ತು ಮಿತವ್ಯಯ ನಿಧಿಯಂತಹ ದತ್ತಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ಜನಸಾಮನ್ಯರ ವೈದ್ಯರಾಗಿ ಗುರುತಿಸಿಕೊಂಡಿದ್ದರು. ಜನರಲ್ ಆಸ್ಪತ್ರೆಯಲ್ಲಿ ಕೆಲವೊಂದು ಪ್ರಮುಖ ಅಭಿವೃದ್ಧಿ ಚಟುವಟಿಕೆಗಳು ಇವರ ನೇತೃತ್ವದಲ್ಲಿ ನೆರವೇರಿದೆ. ವರ್ಗಾವಣೆಗೊಂಡು ತೆರಳುತ್ತಿರುವ ಡಾ. ಕೆ.ಕೆ ರಾಜಾರಾಮ್ ಅವರಿಗೆ ಆಸ್ಪತ್ರೆ ಸಿಬ್ಬಂದಿ ಬೀಳ್ಕೊಡುಗೆ ಆಯೋಜಿಸಿದ್ದರು. ಈ ಸಂದರ್ಭ ಡಾ. ಕೆ.ಕೆ ರಾಜಾರಾಮ್ ಮತನಾಡಿ,  ಸರಳ ಆಹಾರ ಪದ್ಧತಿ ಮೂಲಕ ಜೀವನಶೈಲಿ ಉತ್ತಮಪಡಿಸಿಕೊಳ್ಳುವಂತೆ ಸಲಹೆ ನೀಡಿದರು.  ಉತ್ತಮ ಓದುಗ, ಬರಹಗಾರನಾಗಿರುವ ಡಾ. ಕೆ.ಕೆ ರಾಜಾರಾಮ್ ಅವರು ತಲಶ್ಶೇರಿ ಪಾನೂರು ನಿವಾಸಿಯಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries