ಇಟಾನಗರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಒಟ್ಟು 90 ಪ್ರಮುಖ ಗಡಿ ಮೂಲಸೌಕರ್ಯ ಯೋಜನೆಗಳನ್ನು ಮಂಗಳವಾರ ಉದ್ಘಾಟಿಸಿದ್ದಾರೆ.
ಇಟಾನಗರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಒಟ್ಟು 90 ಪ್ರಮುಖ ಗಡಿ ಮೂಲಸೌಕರ್ಯ ಯೋಜನೆಗಳನ್ನು ಮಂಗಳವಾರ ಉದ್ಘಾಟಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ತವಾಂಗ್‌ನಿಂದ ಅಸ್ಸಾಂನ ಬಾಲಿಪಾರಾಗೆ ಸಂಪರ್ಕ ಕಲ್ಪಿಸುವ ನೆಚಿಫೂ ಸುರಂಗ ಮಾರ್ಗ ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) 36 ಯೋಜನೆಗಳನ್ನು ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದರು.
'ವಾಸ್ತವ ನಿಯಂತ್ರಣ ರೇಖೆಯಾದ್ಯಂತ ಇರುವ ಈ 90 ಯೋಜನೆಗಳ ಮೌಲ್ಯ ₹ 2,941 ಕೋಟಿ. ರಾಜನಾಥ್ ಅವರು ದೇಶದಾದ್ಯಂತ 22 ರಸ್ತೆ, 63 ಸೇತುವೆ, ನೆಚಿಫೂ ಸುರಂಗ, ಎರಡು ವಾಯುನೆಲೆ, ಎರಡು ಹೆಲಿಪ್ಯಾಡ್‌ಗಳನ್ನು ಉದ್ಘಾಟಿಸಿದರು' ಎಂದು ಬಿಆರ್‌ಒ ಅಧಿಕಾರಿಗಳು ಮಾಹಿತಿ ನೀಡಿದರು.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ ಖಂಡು ಮತ್ತು ಡಿಜಿಪಿ ಆನಂದ್ ಮೋಹನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.