ಪಣಜಿ: ವಿದೇಶದ ವಸ್ತುಸಂಗ್ರಹಾಲಯದಲ್ಲಿರುವ ಪೋರ್ಚುಗೀಸ್ ಅನ್ವೇಷಕ ವಾಸ್ಕೊ ಡಾ ಗಾಮ ಅವರ ಡೈರಿಯ ಪ್ರತಿಯನ್ನು ಭಾರತಕ್ಕೆ ತರಲು ಸರ್ಕಾರ ಪ್ರಯತ್ನಿಸಲಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮಂಗಳವಾರ ತಿಳಿಸಿದ್ದಾರೆ.
0
samarasasudhi
ಸೆಪ್ಟೆಂಬರ್ 13, 2023
ಪಣಜಿ: ವಿದೇಶದ ವಸ್ತುಸಂಗ್ರಹಾಲಯದಲ್ಲಿರುವ ಪೋರ್ಚುಗೀಸ್ ಅನ್ವೇಷಕ ವಾಸ್ಕೊ ಡಾ ಗಾಮ ಅವರ ಡೈರಿಯ ಪ್ರತಿಯನ್ನು ಭಾರತಕ್ಕೆ ತರಲು ಸರ್ಕಾರ ಪ್ರಯತ್ನಿಸಲಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮಂಗಳವಾರ ತಿಳಿಸಿದ್ದಾರೆ.
ಇಲ್ಲಿನ ಹಡಗುಕಟ್ಟೆಯಲ್ಲಿ ಹಡಗು ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಸಮುದ್ರಯಾನದ ಸಮೃದ್ಧ ಇತಿಹಾಸವನ್ನು ತಿಳಿದುಕೊಳ್ಳಲು ಈ ಡೈರಿಯಿಂದ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ವಾಸ್ಕೊ ಡಾ ಗಾಮ ಅವರ ಡೈರಿಯು ವಿದೇಶದ ವಸ್ತುಸಂಗ್ರಹಾಲಯದಲ್ಲಿರುವುದಾಗಿ ಪುರಾತತ್ವ ಶಾಸ್ತ್ರಜ್ಞ ದಿವಂಗತ ಡಾ. ವಿಷ್ಣು ಶ್ರೀಧರ್ ವಾಕಂಕರ್ ಅವರು ದಾಖಲಿಸಿದ್ದರು ಎಂದಿದ್ದಾರೆ.
ವಾಸ್ಕೊ ಡಾ ಗಾಮ ಅವರು ನಮ್ಮ ದೇಶದ ನಾಗರಿಕರಲ್ಲದ ಕಾರಣ ಡೈರಿಯ ಮೂಲಪ್ರತಿಯನ್ನು ತರಲು ಸಾಧ್ಯವಿಲ್ಲ. ಆದರೆ ಅದರ ನಕಲು ಪ್ರತಿಯನ್ನು ತರಲು ಪ್ರಯತ್ನಿಸಿತ್ತೇವೆ ಎಂದು ಮೀನಾಕ್ಷಿ ಅವರು ಹೇಳಿದ್ದಾರೆ.