HEALTH TIPS

ವೈದಿಕ ಪರಂಪರೆಯ ರಕ್ಷಣೆ ಬ್ರಾಹ್ಮಣರ ಜವಾಬ್ದಾರಿ - ಎಡನೀರುಶ್ರೀ

                     ಮುಳ್ಳೇರಿಯ: ಬ್ರಾಹ್ಮಣರಿಗೆ ವೈದಿಕ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯಿದೆ. ಇದು ಮುಂದಿನ ಪೀಳಿಗೆಗೆ ಆದರ್ಶವಾಗುತ್ತದೆ. ಇಂತಹಾ ವಿಚಾರದಲ್ಲಿ ಯುವಶಕ್ತಿಯು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಸಾಮಾಜಿಕವಾದ ವಿಭಿನ್ನ ಚಟುವಟಿಕೆಗಳ ಪೈಕಿ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಭಾಗವಹಿಸುವ ಮೂಲಕ ಸುದೃಢ ಸಮಾಜದ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಕಾಸರಗೋಡಿನ ಶಿವಳ್ಳಿ ಬ್ರಾಹ್ಮಣ ಸಭಾವು ಅನೇಕ ವರ್ಷಗಳಿಂದ ಸಾಮಾಜಿಕವಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು.

                   ಅವರು  ಮುಳ್ಳೇರಿಯದ ಗಣೇಶ ಮಂದಿರದಲ್ಲಿ ಭಾನುವಾರ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ನಡೆದ 2023-24ರ ಸಾಲಿನ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಕ್ರೀಡೋತ್ಸವ ಹಾಗೂ ಸಾಂಸ್ಕøತಿಕೋತ್ವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. 

                  ಪ್ರತಿಯೊಂದು ಸಮಾಜಕ್ಕೂ ಅದರದ್ದೇ ಆದ ಸಂಸ್ಕøತಿ ಹಾಗೂ ಸಂಸ್ಕಾರ ಇದೆ. ಸಮಾಜ ಬಾಂಧವರು ತಮ್ಮ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ಧರ್ಮವನ್ನು ಕಾಪಾಡಲು ನಮ್ಮ ಸಮಾಜವು ಶಕ್ತವಾಗಬೇಕು. ಶಿವಳ್ಳಿ ಬ್ರಾಹ್ಮಣ ಸಭಾವು ಮುಂದಿನ ದಿನಗಳಲ್ಲಿ ಇನ್ನಷ್ಟೂ ಸಮಾಜಕ್ಕೆ ತೆರೆದುಕೊಳ್ಳಲಿ. ಒಗ್ಗಟ್ಟಿನಲ್ಲಿ ಸಮಾಜ ಮುಂದುವರಿಯಲಿ' ಎಂದು ಅವರು ಹೇಳಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ನರಿಮೊಗರು ಸರಸ್ವತಿ ವಿದ್ಯಾಮಂದಿರದ ಮುಖ್ಯಸ್ಥರಾದ ಅವಿನಾಶ್ ಉಂಗ್ರುಪುಳಿತ್ತಾಯ ಕೊಡಂಕಿರಿ ಮಾತನಾಡಿ, 'ಜ್ಞಾನದ ಶಕ್ತಿಯಾದ ಬ್ರಾಹ್ಮಣ ಸಮಾಜವು ಇಡೀ ಜಗತ್ತಿನ ಮೇಲೆ ದೊಡ್ಡ ಮಟ್ಟದಲ್ಲಿ ಉತ್ತಮ ಪ್ರಭಾವ ಬೀರಿದೆ. ಸಾಮಾಜಿಕವಾಗಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಿದ್ದರೂ, ಅವರ ಪ್ರಭಾವ ದೊಡ್ಡದು. ತನ್ನ ಸಂಸ್ಕಾರ, ಸಂಸ್ಕøತಿಯನ್ನು ಜಗತ್ತಿಗೆ ಆದರ್ಶವಾಗಿ ನೀಡುವಷ್ಟು ಬೆಳೆದಿದ್ದಾರೆ. ಜ್ಞಾನ ಗಳಿಸಿದಾಗಲೇ ತೇಜಸ್ಸು ಬರುತ್ತದೆ. ಬ್ರಾಹ್ಮಣರಿಗೆ ಅಗ್ರಜನ್ಮ ಎಂಬ ಹೆಸರೂ ಇದೆ. ಬ್ರಾಹ್ಮಣರದ್ದು ಅದ್ಭುತವಾದ ಪರಂಪರೆ. ಪ್ರತಿಯೊಂದರಲ್ಲೂ ಕೌಶಲ್ಯ ಗಳಿಸುವುದು ಭಾರತೀಯರ ಸಂಸ್ಕøತಿ. ಜ್ಞಾನದ ವಿಚಾರದಲ್ಲಿ ಭಾರತೀಯರು ಜಗತ್ತಿನಲ್ಲೇ ಮಹತ್ವವನ್ನು ಪಡೆದರು. ಇದಕ್ಕೆ ಬ್ರಹ್ಮ ಮತ್ತು ತೇಜಸ್ಸು ಮೂಲ ಕಾರಣ. ಕಾಸರಗೋಡು ಜಿಲ್ಲೆಯು ಶಿವಳ್ಳಿ ಬ್ರಾಹ್ಮಣರ ಗಂಡು ಮೆಟ್ಟಿದ ನೆಲ. ತುಳುವಿನ ಪ್ರಪ್ರಥಮ ಲಿಖಿತ ಸಾಹಿತ್ಯ ಇಲ್ಲಿಯೇ ದೊರಕಿದೆ. ತುಳು ಲಿಪಿಯನ್ನು ವೆಂಕಟರಾಜ ಪುಣಿಂಚಿತ್ತಾಯರ ಮೂಲಕ ನಾಡಿಗೆ  ನೀಡಿದವರು ಶಿವಳ್ಳಿ ಬ್ರಾಹ್ಮಣರು. ಆಹಾರ, ವಿಹಾರ, ವಿಚಾರವೇ ಬ್ರಾಹ್ಮಣ ಸಂಸ್ಕಾರ ಎಂದು ಅವರು ಹೇಳಿದರು. 

            ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಟಿ ಕೆ ಮಂಜುನಾಥ ವಹಿಸಿದ್ದರು. ಕಾಸರಗೋಡು ಜಿಲ್ಲಾ ಸಮಿತಿ ಖಜಾಂಜಿ ಅಡೂರು ಶ್ರೀಪ್ರಕಾಶ ಪಾಂಙಣ್ಣಾಯ, ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಸುಮನ ಅಡಿಗ, ಯುವಶಕ್ತಿ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ ಅಡಿಗ, ಕಾರ್ಯದರ್ಶಿ ಚೇತನ್ ಕುಮಾರ, ರಕ್ಷಾಧಿಕಾರಿಗಳಾದ ಪಣಿಯೆ ಸೀತರಾಮ ಕುಂಜತ್ತಾಯ, ವಿಷ್ಣು ಪುತ್ತಿಲ್ಲಾಯ, ಓಲಸರಿ ಸುಬ್ರಹ್ಮಣ್ಯ ಕಡಂಬಳಿತ್ತಾಯ, ಮುಳ್ಳೇರಿಯ ವಲಯ ಅಧ್ಯಕ್ಷ ಡಾ. ರವಿಪ್ರಸಾದ್, ಮುಖಂಡರಾದ ಎಂ ಸುಬ್ರಾಯ ಬಳ್ಳುಳ್ಳಾಯ, ವೀಣಾ ಕಡಮಣ್ಣಾಯ, ಪುರುಷೋತ್ತಮ ಪುಣಿಂಚಿತ್ತಾಯ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಚಂದನಾ ಮಾಲೆಂಕಿ ಪ್ರಾರ್ಥನೆ ಹಾಡಿದರು. ಡಾ.ಬಿ. ಸೀತಾರಾಮ ಕಡಮಣ್ಣಾಯ ಸ್ವಾಗತಿಸಿದರು. ರಾಘವೇಂದ್ರ ರಾವ್ ವಂದಿಸಿದರು. ಸತ್ಯನಾರಾಯಣ ತಂತ್ರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಂಞಂಗಾಡು, ಮಂಜೇಶ್ವರ, ಕಾಸರಗೋಡು, ಏತಡ್ಕ ಹಾಗೂ ಮುಳ್ಳೇರಿಯ ವಲಯದ ನೂರಾರು ಮಂದಿ ಶಿವಳ್ಳಿ ಬ್ರಾಹ್ಮಣರು ಭಾಗವಹಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries