ಉಪ್ಪಳ: ಯೇಸುಕ್ರಿಸ್ತನ ಜನ್ಮದಿನವನ್ನು ಕ್ರೈಸ್ತ ಬಾಂಧವರು ಸೋಮವಾರ ಸಂಭ್ರಮದಿಂದ ಆಚರಿಸಿದರು. ಹಬ್ಬದಂಗವಾಗಿ ಭಾನುವಾರ ರಾತ್ರಿ ಚರ್ಚ್‍ಗಳಲ್ಲಿ ವಿಶೇಷ ಬಲಿಪೂಜೆ ನೆರವೇರಿತು.
ಕಯ್ಯಾರ್ ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಬಲಿಪೂಜೆಯನ್ನು ಮಂಗಳೂರು ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ಫಾದರ್.ಲಿಯೊ ಲಸ್ರಾದೊ ನೆರವೇರಿಸಿ ಸಂದೇಶ ನೀಡಿದರು. ರಾಂಚಿ ಸೆಮಿನರಿಯ ಪ್ರಾಧ್ಯಾಪಕ ಫಾದರ್ ಜೋನ್ ಕ್ರಾಸ್ತ, ಕೊಹಿಮಾ ವಲಯದ ಜೆಜ್ವಿತ್ ಧರ್ಮಗುರು ನ್ಯಾಯವಾದಿ, ಫಾದರ್ ರವಿಸಾಗರ್ ಎಸ್.ಜೆ, ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ವಿಶಾಲ್ ಮೋನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು. ಕ್ರಿಸ್ಮಸ್ ಕ್ಯಾರಲ್ಸ್ ಹಾಗೂ ಬಲಿಪೂಜೆಯ ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಪರಸ್ಪರ ಶುಭಾಶಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮಂಜೇಶ್ವರ, ಪಾವೂರು, ಕುಂಬಳೆ, ಉಕ್ಕಿನಡ್ಕ, ಮಣಿಯಂಪಾರೆ, ಪೆರ್ಮುದೆ, ಬೇಳ ಚರ್ಚುಗಳಲ್ಲೂ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಸಂಬ್ರಮಾಚರಣೆ ನಡೆಸಿದರು.

.jpg)
