HEALTH TIPS

ಲೋಕಸಮರಕ್ಕೆ ಮುಹೂರ್ತ ಫಿಕ್ಸ್! 7 ಹಂತದಲ್ಲಿ ಮತದಾನ : ಕೇರಳದಲ್ಲಿ ಏಪ್ರಿಲ್ 26 ರಂದು ಮತದಾನ: ಜೂನ್​ 4ಕ್ಕೆ ಫಲಿತಾಂಶ

            ವದೆಹಲಿ: ಬಹುನಿರೀಕ್ಷಿತ 18ನೇ ಲೋಕಸಭಾ ಚುನಾವಣೆಯು ಒಟ್ಟು 543 ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ನಡೆಯಲಿದೆ. ಮೇ 13ರಂದು ಮತದಾನ ಆರಂಭವಾಗಲಿದ್ದು ಜೂನ್​ 4ಕ್ಕೆ ಫಲಿತಾಂಶ ಹೊರ ಬೀಳಲಿದೆ.


              ಮಧ್ಯಾಹ್ನ 3 ಗಂಟೆಗೆ ರಾಷ್ಟ್ರ ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್​ ಕುಮಾರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಯಿತು.

               ನವದೆಹಲಿ: ಲೋಕಸಭೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿದೆ; ಕೇರಳದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಒಂದನೇ ಹಂತ ಏಪ್ರಿಲ್ 26 ಹಾಗೂ ಎರಡನೇ ಹಂತ ಮೇ.7 ರಂದು ಚುನಾವಣೆ ನಡೆಯಲಿದೆ. 

            ಏಪ್ರಿಲ್ 19 ರಂದು ಲೋಕಸಭಾ ಚುನಾವಣೆಯ ಮೊದಲ ಹಂತವು ಪ್ರಾರಂಭವಾಗುತ್ತದೆ. ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಳನೇ ಹಂತವಾದ ಜೂನ್ ಒಂದರಂದು ಕೊನೆಯ ಘಟ್ಟದ ಚುನಾವಣೆ ನಡೆದು  ಫಲಿತಾಂಶ ಜೂ.4 ರಂದು ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ. 

           ಎರಡನೇ ಹಂತದಲ್ಲಿ ಕೇರಳದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ  ನಡೆಯಲಿದೆ. ಮೂರನೇ ಹಂತದ ಮತದಾನ ಮೇ 4 ರಂದು, ನಾಲ್ಕನೇ ಹಂತ ಮೇ 13 ರಂದು, 5 ನೇ ಹಂತ ಮೇ 20 ರಂದು,ಆರನೇ ಹಂತದ ಮತದಾನ ಮೇ 25 ರಂದು, ಏಳನೇ ಹಂತದ ಮತದಾನ ಜೂನ್ ಒಂದರಂದು ನಡೆದು ಕೊನೆಗೊಳ್ಳಲಿದೆ. .

            26 ವಿಧಾನಸಭಾ ಮಂಡಲಗಳ ಚುನಾವಣೆಗಳೂ ಈ ಸಂದರ್ಭ ಮೂರು ಹಂತಗಳಲ್ಲಿ ನಡೆಯಲಿದೆ. ಆಂಧ್ರಪ್ರದೇಶದಲ್ಲಿ ಒಡಿಶಾದಲ್ಲಿ ಮೇ 13 ರಿಂದ ಸಿಕ್ಕಿಂ, ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 19 ರಿಂದ ವಿಧಾನಸಭಾ ಚುನಾವಣೆ ನಡೆಯಲಿದೆ. ಫಲಿತಾಂಶ ಜೂ. 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ..


          ದೇಶದ 543 ಲೋಕಸಭಾ ಕ್ಷೇತ್ರಗಳಿಗೂ ನಾಲ್ಕು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೂ ಮತದಾನವನ್ನು ಘೋಷಿಸಲಾಗಿದೆ.

ಮಾದರಿ ನೀತಿ ಸಂಹಿತೆ ಮೂಲ:

             1960 ರಲ್ಲಿ ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಡಳಿತವು ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆಯನ್ನು ರೂಪಿಸಲು ಪ್ರಯತ್ನಿಸಿದಾಗ ಮಾದರಿ ನೀತಿ ಸಂಹಿತೆ ತನ್ನ ಮೂಲವನ್ನು ಮೊತ್ತಮೊದಲು ಪ್ರಸ್ತಾವಿಸಲ್ಪಟ್ಟಿತು. ಬಳಿಕ ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ನೀತಿಸಂಹಿತೆ(ಕೋಡ್) ಅದರ ಪ್ರಸ್ತುತ ಸ್ವರೂಪವನ್ನು ಪಡೆದುಕೊಳ್ಳಲು ಕಳೆದ 60 ವರ್ಷಗಳಲ್ಲಿ ಹಂತಹಂತದಲ್ಲಿ ವಿಕಸನಗೊಂಡಿದೆ.

               ಮಾದರಿ ನೀತಿ ಸಂಹಿತೆಯು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಪ್ರಚಾರದಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಲು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮಾರ್ಗಸೂಚಿಗಳನ್ನು ಉಲ್ಲೇಖಿಸುತ್ತದೆ. ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಪಕ್ಷ ಅಥವಾ ಅಭ್ಯರ್ಥಿಯನ್ನು ಪತ್ತೆಮಾಡಿದರೆ, ನೈತಿಕ ಮಾನದಂಡಗಳು ಮತ್ತು ಸೂಕ್ತ ನಡವಳಿಕೆಯನ್ನು ಕಾಪಾಡಿಕೊಳ್ಳಲು ಸಂಬಂಧಿಸಿದ ಪಕ್ಷ ಅಥವಾ ಅಭ್ಯರ್ಥಿಯ ವಿರುದ್ಧ ಎಫ್‍ಐಆರ್‍ಗೆ ಆದೇಶ ನೀಡುವ ಎಚ್ಚರಿಕೆಯನ್ನು ನೀಡುವ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಬಹುದು. ಚುನಾವಣಾ ಆಯೋಗದ ಪ್ರಕಾರ, "ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷವು ತನ್ನ ಅಧಿಕೃತ ಸ್ಥಾನವನ್ನು ಪ್ರಚಾರಕ್ಕಾಗಿ ಬಳಸದಂತೆ ನೋಡಿಕೊಳ್ಳಬೇಕು” ಎಂದು ಚು.ಆಯೋಗ ಹೇಳುತ್ತದೆ.

            ಚುನಾವಣಾ ದಿನಾಂಕ ಘೋಷಣೆಯ ನಂತರ ಯಾವುದನ್ನು ನಿಷೇಧಿಸಲಾಗುತ್ತದೆ?:

1. ಚುನಾವಣೆ ಘೋಷಣೆಯಾದ ನಂತರ ಸಚಿವರು ಮತ್ತು ಇತರ ಅಧಿಕಾರಿಗಳು ಯಾವುದೇ ಹಣಕಾಸಿನ ಅನುದಾನವನ್ನು ಘೋಷಿಸುವುದನ್ನು ಅಥವಾ ಭರವಸೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಸಮಿತಿಯ ಮಾರ್ಗಸೂಚಿಗಳು ಹೇಳುತ್ತವೆ.

2. ಲೋಕಸಭೆ ಚುನಾವಣೆ ದಿನಾಂಕಗಳನ್ನು ಘೋಷಿಸಿದ ನಂತರ, ನಾಗರಿಕ ಸೇವಕರನ್ನು ಹೊರತುಪಡಿಸಿ ಯಾವುದೇ ರೀತಿಯ ಯೋಜನೆಗಳು ಅಥವಾ ಯೋಜನೆಗಳ ಅಡಿಗಲ್ಲು ಹಾಕುವುದು ಅಥವಾ ಪ್ರಾರಂಭಿಸುವುದನ್ನು ನಿರ್ಬಂಧಿಸಲಾಗಿದೆ.

3 .ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಯೋಜನೆ ಅಥವಾ ವಿಷಯಗಳನ್ನು ಘೋಷಿಸುವಂತಿಲ್ಲ. ಮತ್ತು ಪ್ರಚಾರದ ಉದ್ದೇಶಗಳಿಗಾಗಿ ಮಂತ್ರಿಗಳು ಅಧಿಕೃತ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ.

4. ಮಾದರಿ ನೀತಿ ಸಂಹಿತೆಯ ಜಾರಿಯ ನಂತರ, ಅಧಿಕೃತ ಭೇಟಿಗಳನ್ನು ಯಾವುದೇ ಚುನಾವಣಾ ಚಟುವಟಿಕೆಗಳೊಂದಿಗೆ ಸಂಯೋಜಿಸಬಾರದು. ಇದಲ್ಲದೆ, ಚುನಾವಣಾ ಉದ್ದೇಶಗಳಿಗಾಗಿ ಅಧಿಕೃತ ಯಂತ್ರೋಪಕರಣಗಳು ಅಥವಾ ಸಿಬ್ಬಂದಿಯನ್ನು ಬಳಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

5 ಚುನಾವಣೆ ಘೋಷಣೆಯಾದ ನಂತರ ಸಚಿವರು ಮತ್ತು ಇತರ ಅಧಿಕಾರಿಗಳು ವಿವೇಚನಾ ನಿಧಿಯಿಂದ ಅನುದಾನ ಅಥವಾ ಪಾವತಿಗಳನ್ನು ಮಂಜೂರು ಮಾಡುವಂತಿಲ್ಲ.

6 ಚುನಾವಣಾ ಪ್ರಚಾರಕ್ಕಾಗಿ ಅಧಿಕೃತ ಯಂತ್ರೋಪಕರಣಗಳು ಅಥವಾ ಸಿಬ್ಬಂದಿಯನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಇಸಿಐ ಮಾರ್ಗಸೂಚಿಗಳು ಹೇಳುತ್ತವೆ.

7 ಸರ್ಕಾರಿ ವಸತಿಗಳನ್ನು ಪ್ರಚಾರ ಕಚೇರಿಗಳಾಗಿ ಬಳಸಬಾರದು ಅಥವಾ ಯಾವುದೇ ಪಕ್ಷದಿಂದ ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳುತ್ತದೆ. 

8.ಭಾರತೀಯ ಚುನಾವಣಾ ಆಯೋಗ (ಇಸಿಐ) ಚುನಾವಣಾ ಅವಧಿಯಲ್ಲಿ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಜಾಹೀರಾತುಗಳನ್ನು ನೀಡುವುದನ್ನು ನಿಷೇಧಿಸುತ್ತದೆ.

9. ರಾಜಕೀಯ ಸುದ್ದಿಗಳ ಪಕ್ಷಪಾತದ ಪ್ರಸಾರಕ್ಕಾಗಿ ಅಧಿಕೃತ ಸಮೂಹ ಮಾಧ್ಯಮಗಳ ದುರುಪಯೋಗ ಮತ್ತು ಆಡಳಿತ ಪಕ್ಷದ ಪರವಾಗಿ ಸಾಧನೆಗಳ ಬಗ್ಗೆ ಪ್ರಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಮಾರ್ಗಸೂಚಿ ಹೇಳುತ್ತದೆ. 


          ಲೋಕಸಭಾ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ. ರಾಷ್ಟ್ರಕ್ಕೆ ನಿಜವಾದ ಹಬ್ಬ, ಪ್ರಜಾಸತ್ತಾತ್ಮಕ ವಾತಾವರಣವನ್ನು ನೀಡಲು ನಾವು ಬದ್ಧರಾಗಿದ್ದೇವೆ. 17ನೇ ಲೋಕಸಭೆಯ ಅವಧಿಯು 2024ರ ಜೂನ್​ 16ರಂದು ಮುಕ್ತಾಯಗೊಳ್ಳಲಿದೆ ಎಂದು ರಾಜೀವ್​ ಕುಮಾರ್ ಹೇಳಿದರು.

97 ಕೋಟಿ ಮತದಾರರು
             ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. ಇವರಲ್ಲಿ 49.70 ಕೋಟಿ ಪುರುಷ ಮತದಾರರು ಹಾಗೂ 47.10 ಕೋಟಿ ಮಹಿಳಾ ಮತದಾರರಿದ್ದಾರೆ. 12 ರಾಜ್ಯಗಳಲ್ಲಿ ಮಹಿಳಾ ಮತದಾರರ ಅನುಪಾತವು ಪುರುಷರ ಮತದಾರರಿಗಿಂತ ಹೆಚ್ಚಾಗಿದೆ. 1.8 ಕೋಟಿ ಮಂದಿ ಮೊದಲ ಬಾರಿಗೆ ಮತ ಚಲಾಯಿಸುವವರಿದ್ದಾರೆ ಮತ್ತು 20-29 ವರ್ಷದೊಳಗಿನ 19.47 ಕೋಟಿ ಮತದಾರರಿದ್ದಾರೆ. 2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ ಮತ್ತು 48 ಸಾವಿರ ತೃತೀಯಲಿಂಗಿ ಮತದಾರರಿದ್ದಾರೆ.

55 ಲಕ್ಷ ಇವಿಎಂಗಳು
            ಚುನಾವಣೆಗಾಗಿ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು, 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 55 ಲಕ್ಷ ಮತಯಂತ್ರ (ಇವಿಎಂ) ಗಳು, 4 ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಜೀವ್​ ಕುಮಾರ್​ ತಿಳಿಸಿದರು.

85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೆ ಮತದಾನ ವ್ಯವಸ್ಥೆ
            ಮತಗಟ್ಟೆಗಳಲ್ಲಿ ಹೆಲ್ಪ್​ ಡೆಸ್ಕ್​ ಮತ್ತು ವ್ಹೀಲ್​ಚೇರ್​ ವ್ಯವಸ್ಥೆಯನ್ನು ಮಾಡಲಾಗುವುದು. 80 ವರ್ಷ ಮೇಲ್ಪಟ್ಟ ಮತದಾರರನ್ನು ಕರೆತರುವ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಸಹ ಮಾಡಲಾಗುವುದು. 85 ವರ್ಷ ಮೇಲ್ಪಟ್ಟವರು ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು. ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್​ ಕೇಸ್​ ಇದ್ದರೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ತಪಾಸಣೆಗಾಗಿ ಚೆಕ್​ಪೋಸ್ಟ್​ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಗಡಿಭಾಗಗಳಲ್ಲಿ ಡ್ರೋನ್​ ಮೂಲಕ ಪರೀಶಿಲನೆ ನಡೆಸಲಾಗುತ್ತದೆ.

ದ್ವೇಷ ಭಾಷಣವನ್ನು ಮಾಡುವಂತಿಲ್ಲ
             ಚುನಾವಣೆಗೆ ಆಮಿಷ ಒಡ್ಡುವಂತಿಲ್ಲ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ. ಸೂಕ್ಷ್ಮ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ. 2100 ವೀಕ್ಷಕರನ್ನು ನೇಮಕ ಮಾಡಲಾಗುತ್ತದೆ. ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗುತ್ತದೆ. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು. ರಾಜಕೀಯ ನಾಯಕರು ಯಾವುದೇ ದ್ವೇಷ ಭಾಷಣವನ್ನು ಮಾಡುವಂತಿಲ್ಲ. ಅಭ್ಯರ್ಥಿಗಳು ಮತದಾರರನ್ನು ಪ್ರಚೋದಿಸುವಂತಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

              ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 52 ಸ್ಥಾನಗಳಿಗೆ ಕುಸಿಯಿತು. ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನವನ್ನು ಪಡೆಯಲು ಬೇಕಾದ ಸಂಖ್ಯೆಯು ಸಹ ಕಾಂಗ್ರೆಸ್​ಗೆ ಸಿಗಲಿಲ್ಲ.

                  ಹಣ ಬಲ, ತೋಳ್ಬಲವನ್ನು ಚುನಾವಣಾ ಅಕ್ರಮಗಳಿಗೆ ಬಳಿಸಿದರೆ ವಿರುದ್ಧ ಕಠಿಣ ಕ್ರಮ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ

            ಹಣ ಅಕ್ರಮ ಸಾಗಣೆ: ರಸ್ತೆ, ರೈಲು ಮತ್ತು ವಾಯು ಮಾರ್ಗದಲ್ಲೂ ತಪಾಸಣೆಗೆ ಕ್ರಮ

ಹಣ ಅಕ್ರಮ ಸಾಗಣೆ, ಹಂಚಿಕೆ ವಿರುದ್ಧ ಕಠಿಣ ಕ್ರಮ

            ಪ್ರತಿ ಜಿಲ್ಲೆಯಲ್ಲೂ ಚುನಾವಣಾ ನಿಯಂತ್ರಣ ಕೊಠಡಿ ಸ್ಥಾಪನೆ ಗಡಿ ಭಾಗದಲ್ಲಿ ಚೆಕ್‌ ಪೋಸ್ಟ್ ಸ್ಥಾಪನೆ ಗಡಿ ಭಾಗಗಳಲ್ಲಿ ಡ್ರೋನ್ ಮೂಲಕ ಕಣ್ಗಾವಲು

            ಗಲಬೆ ನಡೆಸಿದರೆ ಜಾಮೀನು ರಹಿತ ವಾರೆಂಟ್

              2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದ ರಾಜೀವ್ ಕುಮಾರ್

             ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಕೇಸ್‌ಗಳನ್ನು ಆಯೋಗಕ್ಕೆ ನೀಡುವುದು ಕಡ್ಡಾಯ

             80 ಮೇಲಿನ ಮತದಾರರು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ

ಮತಗಟ್ಟೆಗಳಲ್ಲಿ ಮಾಹಿತಿ ಕೇಂದ್ರ, ಗಾಲಿ ಕುರ್ಚಿ ಕುಡಿಯುವ ನೀರು ವ್ಯವಸ್ಥೆ. ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಇರುವವರಿಗೆ ಮನೆಯಿಂದಲೇ ಮತದಾನ ಅವಕಾಶ

ವಯೋವೃದ್ಧ ಮತದಾರರನ್ನು ಮತಗಟ್ಟೆಗೆ ಕರೆತರಲು ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು

             48 ಸಾವಿರ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದಾರೆ

            12 ರಾಜ್ಯಗಳಲ್ಲಿ ಪುರುಷ ಮತದಾರರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಜಾಸ್ತಿ

           85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ

           ಒಟ್ಟು 55 ಲಕ್ಷ ಇವಿಎಂಗಳ ಬಳಕೆ: ರಾಜೀವ್ ಕುಮಾರ್

           1.8 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ

           10.05 ಲಕ್ಷ ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು: ರಾಜೀವ್ ಕುಮಾರ್

             ದೇಶದಲ್ಲಿ ಸುಮಾರು 97 ಕೋಟಿ ಮತದಾರರು: 1.5 ಕೋಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. ಸಮಾರು 19.74 ಕೋಟಿ ಯುವ ಮತದಾರರು

ಲೋಕಸಭೆ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ ಎಂದು ಘೋಷಿಸಿದ ಮುಖ್ಯ ಚುನಾವಣಾ ಆಯುಕ್ತ. 18ನೇ ಲೋಕಸಭೆಗೆ ಚುನಾವಣಾ ದಿನಾಂಕ ಘೋಷಣೆ, ಅಧಿಸೂಚನೆ ಪ್ರಕಟ, 543 ಲೋಕಸಭಾ ಕ್ಷೇತ್ರ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದೆ ಎಂದ ರಾಜೀವ್ ಕುಮಾರ್ ಹೇಳಿದರು.

          

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries