HEALTH TIPS

ಯಾರಿಗೆ ಗೊತ್ತು?: ಕೆ.ಎಸ್.ಆರ್.ಟಿ.ಸಿ ಕಛೇರಿಗಳು ರದ್ದು; ಆಡಳಿತ ಡಿಪೋಗಳಿಗೆ ವರ್ಗಾಯಿಸಲು ನಿರ್ಧಾರ

                 ತಿರುವನಂತಪುರ: ನವೀಕರಣ ಪ್ಯಾಕೇಜ್‍ನ ಭಾಗವಾಗಿ ಕೆಎಸ್‍ಆರ್‍ಟಿಸಿಯಲ್ಲಿ ಜಾರಿಗೆ ತಂದಿರುವ ಜಿಲ್ಲಾ ಕಚೇರಿ ವ್ಯವಸ್ಥೆಯನ್ನು ಹಿಂಪಡೆಯಲಾಗುತ್ತಿದೆ.

                     ಸಚಿವ ಕೆ.ಬಿ.ಗಣೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳನ್ನು ತೊಲಗಿಸಿ ಹಳೆಯ ಡಿಪೆÇೀಗಳಿಗೆ ಆಡಳಿತ ವರ್ಗಾಯಿಸಲು ನಿರ್ಧರಿಸಲಾಗಿದೆ.

                    ಪ್ರೊ. ಸುಶೀಲ್ ಖನ್ನಾ ವರದಿ ಆಧರಿಸಿ ಒಂದೂವರೆ ವರ್ಷದ ಹಿಂದೆ ಅಧಿಕಾರ ವಿಕೇಂದ್ರೀಕರಣ ಜಾರಿಯಾಗಿದೆ. ಮಧ್ಯಮ ನಿರ್ವಹಣೆಯಲ್ಲಿನ ಲೋಪವನ್ನು ಪರಿಹರಿಸಲು ಜಿಲ್ಲಾ ಕಚೇರಿಗಳಿಗೆ ಸ್ಥಳಾಂತರವಾಗಿದೆ. ಆಡಳಿತಾತ್ಮಕ ವೆಚ್ಚವನ್ನು ಕಡಮೆ ಮಾಡುವುದು ಗುರಿಯಾಗಿತ್ತು. ಇದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಈ ಹಿಂದೆ ಆಡಳಿತ ಮಂಡಳಿ ಹೇಳಿಕೊಂಡಿತ್ತು. ಆದರೆ, ಸಚಿವರ ಬದಲಾವಣೆಯಿಂದ ಈ ಹಿಂದಿನ ಹೇಳಿಕೆ ಬುಡಮೇಲಾಗಿವೆ.

                 ಎಲ್‍ಡಿಎಫ್ ಸರ್ಕಾರದ ಮೊದಲ ಸಾರಿಗೆ ಸಚಿವ ಆ್ಯಂಟನಿ ರಾಜು ಅವರ ಅವಧಿಯಲ್ಲಿ ಜಾರಿಗೆ ತಂದ ಸುಧಾರಣೆಗಳು ಈಗ ಹಿಂದೆ ಸರಿಯುತ್ತಿವೆ. ಕಚೇರಿ ಬದಲಾವಣೆಯು ಉದ್ಯೋಗಿಗಳ ಮೇಲೂ ಪರಿಣಾಮ ಬೀರುತ್ತದೆ. ಡಿಪೆÇೀಗಳ ಮೂಲಕ ಜಿಲ್ಲಾ ಕೇಂದ್ರಗಳಿಗೆ ಕಚೇರಿ ವ್ಯವಸ್ಥೆ ಸ್ಥಳಾಂತರಗೊಂಡಾಗ ಸೇವಾ ದಾಖಲೆ ಸೇರಿದಂತೆ ಹಲವು ವಸ್ತುಗಳು ಕಳೆದು ಹೋಗಿವೆ. ಕಚೇರಿಗಳನ್ನು ಬದಲಾಯಿಸುವಾಗ ಇದೇ ತೊಂದರೆಗಳು ಮರುಕಳಿಸಬಹುದಾಗಿದೆ. 

              ಎರಡನೇ ಪಿಣರಾಯಿ ಸರ್ಕಾರದ ಮೊದಲ ಎರಡೂವರೆ ವರ್ಷಗಳಲ್ಲಿ ಕೆಎಸ್‍ಆರ್‍ಟಿಸಿಯಲ್ಲಿ ಜಾರಿಗೆ ತಂದ ಹಲವು ಸುಧಾರಣೆಗಳು ಈಗ ವ್ಯರ್ಥವಾಗಿ ಹಿಂಪಡೆಯಲಾಗುತ್ತಿದೆ. ಎಲೆಕ್ಟ್ರಿಕ್ ಬಸ್‍ಗಳು ಲಾಭದಾಯಕವಲ್ಲ ಎಂದು ಘೋಷಿಸಿದ ನಂತರ ಜಿಲ್ಲೆಗಳಲ್ಲಿದ್ದ  ಕಾರ್ಯಾಗಾರಗಳನ್ನು(ವರ್ಕ್ ಏರಿಯ-ದುರಸ್ಥಿ ವಲಯ)  ಸಹ ನಿಲ್ಲಿಸಲಾಯಿತು. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಹಣಕಾಸು ವ್ಯವಸ್ಥಾಪಕ ಸೇರಿದಂತೆ ಏಳು ಅಧಿಕಾರಿಗಳನ್ನು ಏಕಾಏಕಿ ವಜಾಗೊಳಿಸಲಾಗಿದೆ.

               ಹಾಗಿದ್ದರೆ ಸರ್ಕಾರಗಳು ಆಗಾಗ ಕೈಗೊಳ್ಳುವ ಅಪಕ್ವ ನಿರ್ಧಾರಗಳಿಗೆ ಕಡಿವಾಣ ಎಲ್ಲಿದೆ. ಅವೈಜ್ಞಾನಿಕ ನಿರ್ಧಾರಗಳನ್ನು ಆಯಾ ಖಾತೆಗಳ ಸಚಿವರುಗಳು ಕೈಗೊಂಡು ಏನೆಲ್ಲಾ ಕಸರತ್ತುಗಳನ್ನು ಮಾಡಿ, ಖಜಾನೆಯನ್ನು ವ್ಯರ್ಥ ಲೂಟಿಮಾಡುವ ಇಂತಹ ಸರ್ಕಾರ, ಅಧಿಕೃತರ ನಿರ್ಧಾರಗಳು ಕೊನೆಗೂ ಪ್ರಭಾವ ಬೀರುವುದು ಜನಸಾಮಾನ್ಯರಿಗೆ. ಹಾಗಿದ್ದರೆ ಜನಸಾಮಾನ್ಯರು ಪ್ರತಿ ಸರ್ಕಾರಗಳ ಅವಧಿಯಲ್ಲೂ ಅನುಭವಿಸುವ ಸಂಕಷ್ಟಗಳಿಗೆ ಕೊನೆಯಿಲ್ಲವೇ. ಮಧ್ಯಮ ವರ್ಗ ಏದುಸಿರು ಬಿಟ್ಟು ನೆಮ್ಮದಿಯಿಂದ ಬದುಕುವುದು ಯಾವಾಗ.ಯಾರಿಗೆ ಗೊತ್ತು?



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries