HEALTH TIPS

ಶಬರಿಮಲೆ ಉತ್ಸವಕ್ಕೆ ಧ್ವಜಾರೋಹಣ

                 ಶಬರಿಮಲೆ: ಶಬರಿಮಲೆಯಲ್ಲಿ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ.  ಶನಿವಾರ ಬೆಳಗ್ಗೆ 8.20ರಿಂದ 9ರ ನಡುವೆ ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಧ್ವಜಾರೋಹಣ ನೆರವೇರಿಸಿದರು. ಮೇಲ್ಶಾಂತಿ ಪಿ.ಎನ್. ಮಹೇಶ್ ನಂಬೂದಿರಿ ಉಪಸ್ಥಿತರಿದ್ದು ಭದ್ರದೀಪ ಬೆಳಗಿಸಿದರು. 

                  ಮುಂದಿನ ದಿನಗಳಲ್ಲಿ ಉತ್ಸವಬಲಿ, ಉತ್ಸವಬಲಿ ದರ್ಶನ ಮೊದಲಾದ ವಿಧಿಗಳು  ನಡೆಯಲಿದೆ. 24 ರಂದು ಸರಂಕುತ್ತಿಯಲ್ಲಿ ಪಳ್ಳಿವೇಟ್ಟ ನಡೆಯಲಿದೆ. ಪೈಂಕುಣಿ ಉತ್ರಂ ದಿನವಾದ 25 ರಂದು ಆರಾಟ್ಟು ಉತ್ಸವ ನಡೆಯಲಿದೆ.ಆ ದಿನ ಬೆಳಗ್ಗೆ ಒಂಬತ್ತು ಗಂಟೆಗೆ ಸನ್ನಿಧಾನದಿಂದ ಪಂಪಾಕ್ಕೆ ಆರಾಟ್ಟು ಉತ್ಸವಕ್ಕೆ ಹೊರಡಲಾಗುತ್ತದೆ. ಪಂಬಾದಲ್ಲಿ ಬೆಳಗ್ಗೆ 11.30.ಕ್ಕೆ ಆರಾಟ್ಟು ಉತ್ಸವ ನಡೆಯಲಿದೆ. ಬಳಿಕ ಹಿಂತಿರುಗಿ ಸನ್ನಿಧಿ ತಲುಪಿದಾಗ ರಾತ್ರಿಯಾಗುತ್ತದೆ. ರಾತ್ರಿ ಧ್ವಜಾವರೋಹಣಗೈದು ಗರ್ಭಗೃಹದ ಬಾಗಿಲು ಮುಚ್ಚಲಾಗುತ್ತದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries