HEALTH TIPS

ಇತಿಹಾಸಪ್ರಸಿದ್ಧ ಪಾರೆಸ್ಥಾನ ಶ್ರೀಆಲಿಚಾಮುಂಡಿ ಕ್ಷೇತ್ರದಲ್ಲಿ ನಾಳೆಯಿಂದ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ, 30ರಿಂದ ವಾರ್ಷಿಕ ಕಳಿಯಾಟ

                    ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಆಲಿಚಾಮುಂಡಿ ಕ್ಷೇತ್ರದಲ್ಲಿ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ 18ರಿಂದ 22ರ ವರೆಗೆ ಹಾಗೂ ವಾರ್ಷಿಕ ಕಳಿಯಾಟ ಮಾ 30ರಿಂದ ಏ. 6ರ ವರೆಗೆ ಜರುಗಲಿದೆ.

                    ಪುನ:ಪ್ರತಿಷ್ಟಾ ಬ್ರಹ್ಮಕಲಶೋತ್ಸವ, ಶ್ರೀನಾಗದೇವರುಗಳು ಮತ್ತು ಗುಳಿಗ ದೈವದ ಪುನ:ಪ್ರತಿಷ್ಠೆ ಮಾ 18ರಿಂದ ಆರಂಭಗೊಲ್ಳುವುದು. ಬ್ರಹ್ಮಶ್ರೀ ಕಲ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದು. 18ರಂದು ಬೆಳಗ್ಗೆ10ಕ್ಕೆ ಉಗ್ರಾಣ ಮುಹೂರ್ತ, ಸಂಜೆ 5.30ಕ್ಕೆ ತಂತ್ರಿವರ್ಯರ ಆಗಮನ, ವಿವಿಧ ವೈದಿಕ ಕಾರ್ಯಕ್ರಮ ಜರುಗುವುದು.

                  19ರಂದು ಬೆಳಗ್ಗೆ ಅಂಕುರಪೂಜೆ, ಗ್ರಹಶಾಂತಿ, ಭಜನೆ ನಡೆಯುವುದು. ಸಂಜೆ 3ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ಕಲ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯ ಆಶೀರ್ವಚನ ನೀಡುವರು. ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಸುಕುಮಾರ ಎಂ. ಅದ್ಯಕ್ಷತೆ ವಹಿಸುವರು. ಸಂಜೆ 5ರಿಂದ ಅಂಕುರಪೂಜೆ, ದುರ್ಗಾಪೂಜೆ ನಡೆಯುವುದು. 20ರಂದು ಬೆಳಗ್ಗೆ 7ಕ್ಕೆ ಅಂಕುರಪೂಜೆ, 108ಕಾಯಿ ಗಣಹೋಮ, ಭಜನೆ, ಸಂಜೆ 3ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯುವುದು. 21ರಂದು ಬೆಳಗ್ಗೆ 10ಕ್ಕೆ ಆನೆಚಪ್ಪರದ ಕ್ಷೇತ್ರ ಸಮರ್ಪಣೆ, ಸಂಜೆ 5.30ರಿಂದ ವಿವಿಧ ವೈದಿಕ ಕಾರ್ಯಕ್ರಮ ನಡೆಯುವುದು. 22ರಂದು ಬೆಳಗ್ಗೆ 9.30ರಿಂದ 11.42ರ ಮಧ್ಯೆ ಪಾರೆ ಶ್ರೀ ಐವರ್ ಭಗವತೀ, ಮಂತ್ರಮೂರ್ತಿ, ಕಾರ್ಯಕ್ಕಾರನ್(ಆಲಿ)ದೈವಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ತತ್ವ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀನಾಗದೇವರು ಮತ್ತು ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯುವುದು. ಮಾ. 30ರಿಂದ ಏ. 6ರ ವರೆಗೆ ವಾರ್ಷಿಕ ಕಳಿಯಾಟ ನಡೆಯುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries