HEALTH TIPS

ಮಾರ್ಯಾದೆಗೇಡು ಹತ್ಯೆ ಪ್ರಕರಣಗಳಿಗೆ ಸಿಜೆಐ ಕಳವಳ

               ವದೆಹಲಿ :ಮರ್ಯಾದೆಗೇಡು ಹತ್ಯೆಗಳಿಂದಾಗಿ ಭಾರತದಲ್ಲಿ ಪ್ರತಿ ವರ್ಷವೂ ನೂರಾರು ಯುವಜನರು ಸಾವನ್ನಪ್ಪುತ್ತಿರುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶನಿವಾರ ಕಳವಳ ವ್ಯಕ್ತಪಡಿಸಿದ್ದಾರೆ.

                    ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅಥವಾ ಜಾತಿಯಿಂದ ಹೊರಗೆ ಪ್ರೀತಿಸಿದ ಇಲ್ಲವೇ ವಿವಾಹವಾದ ಕಾರಣಕ್ಕಾಗಿ ಈ ಹತ್ಯೆಗಳು ನಡೆದಿವೆ ಎಂದು ಅವರು ಹೇಳಿದರು.

                   ಮುಂಬೈನ ಬಾರ್ ಆಸೋಸಿಯೇಶನ್ ಆಯೋಜಿಸಿದ್ದ ಅಶೋಕ್ ದೇಸಾಯಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 'ಕಾನೂನು ಮತ್ತು ನೈತಿಕತೆ ' ಕುರಿತ ಭಾಷಣದಲ್ಲಿ ಅವರು ಈ ವಿಷಯವನ್ನು ಪ್ರಸ್ತಾವಿಸಿದರು.

                   ಕೇರಳದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ 'ಸ್ತನ ತೆರಿಗೆ', ಸಲಿಂಗ ಕಾಮವನ್ನು ಕ್ರಿಮಿನಲೀಕರಣಗೊಳಿಸುವ 377 ನೇ ಸೆಕ್ಷನ್ ರದ್ದತಿ, ಮುಂಬೈಯಲ್ಲಿ ಡಾನ್ಸ್ ಬಾರ್‌ ಗಳಿಗೆ ನಿಷೇಧ ಇತ್ಯಾದಿ ನೈತಿಕತೆಯ ವಿಷಯಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ಅವರು ಭಾಷಣದಲ್ಲಿ ಪ್ರಸ್ತಾವಿಸಿದರು. ಸಾಮಾಜಿಕವಾಗಿ ಪ್ರಬಲವಾದ ಗುಂಪುಗಳು ದುರ್ಬಲ ವರ್ಗಗಳನ್ನು ಹತ್ತಿಕ್ಕುವ ಮೂಲಕ ತಮಗೆ ಬೇಕಾದಂತೆ ನೀತಿ ಸಂಹಿತೆ ಹಾಗೂ ನೈತಿಕತೆಯನ್ನು ನಿರ್ಧರಿಸುತ್ತವೆ ಎಂದವರು ಆತಂಕ ವ್ಯಕ್ತಪಡಿಸಿದರು.

               'ನಿಮಗೆ ಯಾವುದು ನೈತಿಕತೆಯೆಂದು ಅನಿಸುತ್ತದೆಯೋ ಅದು ನನಗೂ ಕೂಡಾ ನೈತಿಕತೆಯೆಂದು ಅನಿಸಬೇಕಾಗಿರುವುದು ಅಗತ್ಯವೇʼ ಎಂದು ಚಂದ್ರಚೂಡ್ ಪ್ರಶ್ನಿಸಿದರು.

                  ಭಾರತದಲ್ಲಿ ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧದಿಂದ ಮುಕ್ತಗೊಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕೂಡಾ ಚಂದ್ರಚೂಡ ಅವರು ಈ ಸಂದರ್ಭದಲ್ಲಿ ಪ್ರಸ್ತಾವಿಸಿದರು.

           'ಕಳೆದು ಹೋದ ಯುಗದ ನೈತಿಕತೆಯನ್ನು ಆಧರಿಸಿದ ಭಾರತೀಯ ದಂಡಸಂಹಿತೆಯ ಸೆಕ್ಷನ್ 377 ನ್ನು ರದ್ದುಪಡಿಸುವ ಮೂಲಕ ನಾವು ಅನ್ಯಾಯವನ್ನು ಸರಿಪಡಿಸಿದ್ದೇವೆ. ಸಾಂವಿಧಾನಿಕ ನೈತಿಕತೆಯು ವ್ಯಕ್ತಿಗಳ ಹಕ್ಕುಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಹಾಗೂ ಸಮಾಜದ ಮೌಲ್ಯಗಳನ್ನು ಹಾಗೂ ನೈತಿಕತೆಯ ಕುರಿತಾದ ಸಮಾಜದಲ್ಲಿ ಪ್ರಚಲಿತದಲ್ಲಿರುವ ಭಾವನೆಗಳಿಂದ ರಕ್ಷಣೆ ನೀಡುತ್ತದೆʼ ಎಂದವರು ಹೇಳಿದರು.

               ಪ್ರಗತಿಪರ ಸಂವಿಧಾನದ ಮೌಲ್ಯಗಳು ನಮಗೆ ಮಾರ್ಗದರ್ಶಿ ಶಕ್ತಿಯಾಗಿದೆ. ನಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬದುಕು ಸಂವಿಧಾನದಿಂದ ವಿಚ್ಚೇದಿತವಾಗಲಾರದೆಂಬ ಸಂದೇಶವನ್ನು ಅವು ನೀಡುತ್ತವೆ ಎಂದರು.


ಭಾರತೀಯ ಸಂವಿಧಾನವು ನಮ್ಮ ಮೂಲಭೂತ ಹಕ್ಕುಗಳ ಧ್ವಜಧಾರಿಯಾಗಿದೆ. ಅದು ನಮ್ಮ ದೈನಂದಿನ ಬದುಕಿಗೆ ಮಾರ್ಗದರ್ಶ ನೀಡುತ್ತದೆ ಎಂದರು.

ʼದುರ್ಬಲ ಹಾಗೂ ಕಡೆಗಣಿಸಲ್ಪಟ್ಟವರು ತಮ್ಮ ಉಳಿವಿಗಾಗಿ ಪ್ರಬಲ ಸಂಸ್ಕೃತಿಗೆ ಶರಣಾಗದ ಹೊರತಾಗಿ ಬೇರೆ ಆಯ್ಕೆ ಇರುವುದಿಲ್ಲ. ದಮನಿತ ಗುಂಪುಗಳ ಕೈಯಲ್ಲಿ ಪ್ರತ್ಯೇಕತೆ ಹಾಗೂ ಅಪಮಾನವವನ್ನು ಅನುಭವಿಸಿದ ಬಳಿಕ ಸಮಾಜದ ದುರ್ಬಲ ವರ್ಗಗಳು ಪ್ರತಿಸಂಸ್ಕೃತಿಯನ್ನು ಸೃಷ್ಟಿಸಲು ಅಸಮರ್ಥರಾಗಿರುತ್ತಾರೆ. ಒಂದು ವೇಳೆ ದುರ್ಬಲವರ್ಗಗಳು ಪ್ರತಿ ಸಂಸ್ಕೃತಿಯನ್ನು ಬೆಳೆಸಿಕೊಂಡರೂ, ಸರಕಾರಿ ಗುಂಪುಗಳು ಅವರನ್ನು ಹತ್ತಿಕ್ಕುತ್ತವೆ. ಇದರಿಂದ ದುರ್ಬಲರು ಇನ್ನಷ್ಟು ಪ್ರತ್ಯೇಕಿಸಲ್ಪಡುತ್ತಾರೆ ' ಎಂದು ಚಂದ್ರಚೂಡ್ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries