HEALTH TIPS

ಟ್ವಿಟರ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಲಿದ್ದಾರಾ ಎಲಾನ್ ಮಸ್ಕ್?

 

                ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಲಿದ್ದಾರಾ?

                  - ವೋಟಿಂಗ್​ ಒಂದರ ಫಲಿತಾಂಶ ಇಂಥದ್ದೊಂದು ಅನುಮಾನವನ್ನು ಮೂಡಿಸಿದೆ. ಏಕೆಂದರೆ ಈ ಪೋಲಿಂಗ್​ನಲ್ಲಿ ಎಲಾನ್​ ಮಸ್ಕ್​ಗೆ ವಿರುದ್ಧವಾಗಿಯೇ ಮತ ಚಲಾವಣೆ ಆಗಿದ್ದು, ಅವರು ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

                     ಸುಮಾರು 16 ಗಂಟೆಗಳ ಹಿಂದೆ ಟ್ವಿಟರ್​ನಲ್ಲಿ ಪೋಲ್ ಕ್ರಿಯೇಟ್ ಮಾಡಿದ್ದ ಎಲಾನ್ ಮಸ್ಕ್​, 'ನಾನು ಟ್ವಿಟರ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕಾ? ಮತಗಳ ಫಲಿತಾಂಶದ ಪ್ರಕಾರವೇ ನಾನು ನಡೆದುಕೊಳ್ಳುತ್ತೇನೆ' ಎಂದು ಹೇಳಿ ಹೌದು ಅಥವಾ ಇಲ್ಲ ಎಂಬ ಆಯ್ಕೆ ಕೊಟ್ಟು ಮತ ಚಲಾಯಿಸಲು ಹೇಳಿದ್ದರು.

                ಆ ಪೋಲಿಂಗ್ ಮುಗಿದಿದ್ದು, ಅಂತಿಮ ಫಲಿತಾಂಶದಲ್ಲಿ ಹೌದು ಎಂಬುದಕ್ಕೇ ಹೆಚ್ಚಿನ ಮತ ಚಲಾವಣೆ ಆಗಿದೆ. ಅಂದರೆ ಈ ಪೋಲಿಂಗ್​ಗೆ 1,75,02,391 ಮತ ಚಲಾವಣೆ ಆಗಿದ್ದು, ಆ ಪೈಕಿ ಶೇ. 57.5 ಮಂದಿ ಎಲಾನ್ ಮಸ್ಕ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದರೆ, ಶೇ. 42.5 ಮಂದಿ ಬೇಡ ಎಂದಿದ್ದಾರೆ. ಮತದ ಫಲಿತಾಂಶದ ಪ್ರಕಾರವೇ ನಡೆದುಕೊಳ್ಳುತ್ತೇನೆ ಎಂದು ಎಲಾನ್ ಮಸ್ಕ್ ಹೇಳಿದ್ದರಿಂದ, ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಅವರು ಕೆಳಗಿಳಿದರೂ ಇಳಿಯಬಹುದು ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries