HEALTH TIPS

ನಿಪಾ ದಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಪೂರ್ಣ: ಕೋಝಿಕ್ಕೋಡ್ ಜಿಲ್ಲೆಯಲ್ಲಿ ಜಾಗರೂಕತೆ

                  ಕೋಝಿಕ್ಕೋಡ್: ನಿಪಾ ವೈರಸ್ ದೃಢಪಟ್ಟು, ಖಾಯಿಲೆಯಿಂದ ಸಾವನ್ನಪ್ಪಿದ್ದ ಹ್ಯಾರಿಸ್ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು. ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಆಸ್ಪತ್ರೆಯ ಅಧಿಕಾರಿಗಳು ಹ್ಯಾರಿಸ್ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಬಿಡುಗಡೆ ಮಾಡಿದರು.

                    ನಂತರ ನಿಪಾ ಪ್ರೋಟೋಕಾಲ್ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು. ವಡಕರ ಮಂಗಲಂ ಮೂಲದ ಹ್ಯಾರಿಸ್ ಅವರ ಅಂತ್ಯಕ್ರಿಯೆಯನ್ನು ಕಟಮೇರಿ ಜುಮಾ ಮಸೀದಿ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಪಾಲಿಕೆ ಆರೋಗ್ಯ ನಿರೀಕ್ಷಕÀ ಬಿಜು ಜಯರಾಂ, ವಿ.ಕೆ.ಪ್ರಮೋದ್ ಮತ್ತು ಪಿಎಸ್ ಡೈಸನ್ ಮೃತ ದೇಹವನ್ನು ಸ್ವೀಕರಿಸಿದರು.

                     ತಜ್ಞರ ಪರೀಕ್ಷೆ ಬಳಿಕ ಇಬ್ಬರಿಗೂ ನಿಪಾ ಸೋಂಕು ಇರುವುದು ದೃಢಪಟ್ಟಿದೆ. ಪುಣೆ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಮಾದರಿಯನ್ನು ಪರೀಕ್ಷಿಸಲಾಗಿತ್ತು. ಫಲಿತಾಂಶವು ಸಕಾರಾತ್ಮಕವಾಗಿತ್ತು. ಜಿಲ್ಲೆಯಲ್ಲಿ ನಿಪಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನವಶ್ಯಕ ಆಸ್ಪತ್ರೆಗೆ ಭೇಟಿ ನೀಡದಂತೆ ಆರೋಗ್ಯ ಇಲಾಖೆ ಸೂಚಿಸಿದೆ. ನಿನ್ನೆ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಎಲ್ಲರೂ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದರು. ನಿಪಾ ತಡೆಗಟ್ಟಲು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸಮಿತಿಯನ್ನು ರಚಿಸಲಾಗಿದೆ.

                  ಮೃತಪಟ್ಟವರ ಒಂಬತ್ತು ವರ್ಷದ ಮಗು ವೆಂಟಿಲೇಟರ್‍ನಲ್ಲಿದೆ. ಮೃತರ ಪತ್ನಿ ಐಸೋಲೇಶನ್‍ನಲ್ಲಿದ್ದಾರೆ. ವೈರಸ್ ಸೋಂಕಿತ ಶಂಕಿತ ನಾಲ್ವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸದ್ಯ ನಿಪಾದಿಂದ ಸಾವನ್ನಪ್ಪಿದ ಆಸ್ಪತ್ರೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ 75 ಜನರ ಸಂಪರ್ಕ ಪಟ್ಟಿ ಸಿದ್ಧಪಡಿಸಲಾಗಿದೆ. ಅವರು ಪ್ರಾಥಮಿಕ ಸಂಪರ್ಕಕ್ಕೆ ಸೇರಿದವರು. ನಿನ್ನೆ ಮೃತಪಟ್ಟ ವ್ಯಕ್ತಿಯೂ ವಡಕರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಜಿಲ್ಲೆಯಲ್ಲಿ ರೋಗಿಗಳು ಮತ್ತು ಸಂಪರ್ಕಗಳ ಜನರನ್ನು ಸಾಗಿಸಲು 108 ಆಂಬ್ಯುಲೆನ್ಸ್‍ಗಳನ್ನು ನಿಯೋಜಿಸಲಾಗಿದೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries