ಮುಳ್ಳೇರಿಯ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಭಾನುವಾರ ಜರಗಿತು.ಸಮಿತಿಯ ಅಧ್ಯಕ್ಷ ಪುರುಷೋತ್ತಮ ಪುಣಿಂಚಿತ್ತಾಯರು ಅಧ್ಯಕ್ಷತೆ ವಹಿಸಿ ಮಾತನಾಡಿ 2026ರಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿರುವ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಕಾರ್ಯಗಳನ್ನು ಅತಿಶೀಘ್ರದಲ್ಲಿ ಮುಗಿಸುವುದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಲೋಕಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರದಲ್ಲಿ ಡಿ. 29ರಂದು ಭಾನುವಾರ ಶಿವಶಕ್ತಿ ಮಹಾಯಾಗವನ್ನು ನಡೆಸಲು ತೀರ್ಮಾನಿಸಲಾಯಿತು. ಹಿರಿಯರಾದ ಪುರುಷೋತ್ತಮ ಚಂದ್ರಂಪ್ಪಾರ, ಗೋಪಾಲನ್ ಚಂದ್ರಂಪ್ಪಾರ, ರವಿಶಂಕರ್ ಪುಣಿಂಚಿತ್ತಾಯ ವಾಲ್ತಾಜೆ, ಶೇಕರನ್ ನಾಯರ್ ಮಾಳಂಗೈ, ನ್ಯಾಯವಾದಿ. ಕೃಷ್ಣರಾಜ ಪುಣಿಂಚಿತ್ತಾಯ ಪುಂಡೂರು, ಶಶಿಧರನ್ ಮಾಳಂಗೈ, ನಾರಾಯಣ ಅರ್ಲಡ್ಕ, ಗೋಪ ಅರ್ಲಡ್ಕ ,ದಿನೇಶ್ ಓರುಕೂಡ್ಲು, ರಾಮಚಂದ್ರ ಓರುಕೂಡ್ಲು ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ಸಮಿತಿಯ ಕಾರ್ಯದರ್ಶಿ ಸುನಿಲ್ ಕರೋಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತ್ನಾಕರ ಆಳ್ವ ವಂದಿಸಿದರು.





