ಮಂಜೇಶ್ವರ: ಕೇರಳ ಸ್ಥಳೀಯ ಸಂಸ್ಥೆಗಳ ತ್ರಿಸ್ಥರ ಚುನಾವಣೆಯ ಪ್ರಚಾರದ ಅಬ್ಬರ ಬಹಿರಂಗ ಪ್ರಚಾರದ ಅಂತ್ಯ ಹಾಗೂ ಚುನಾವಣಾ ದಿನಾಂಕ ಸಮೀಪಿಸುತ್ತಿರುವಂತೆ ಹೊಸ ತಿರುವುಗಳನ್ನು ಪಡೆದುಕೊಳ್ಳುತಿದ್ದು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಪರ ಹಾಗೂ ವಿರೋಧ ಚಟುವಟಿಕೆಗಳು ತೀವ್ರಗೊಳ್ಳುತ್ತಿದೆ.
ಇದರ ಭಾಗವಾಗಿ ಕೇರಳ ಕರ್ನಾಟಕ ಗಡಿಯಲ್ಲಿರುವ ಮಂಜೇಶ್ವರ ಗ್ರಾಮ ಪಂಚಾಯತಿ ಎರಡನೇ ವಾರ್ಡ್‌ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು ಇತ್ತೀಚೆಗೆ ನಡೆದ ಸಮೀಕ್ಷೆಯ ಪ್ರಕಾರ, ಈ ವಾರ್ಡ್‌ನಿಂದ ಸ್ಪರ್ಧಿಸುತ್ತಿರುವ ಸಮಾಜ ಸೇವಕರಾಗಿ ಜನ ಗುರುತಿಸಿರುವ ಇಲ್ಯಾಸ್ ತೂಮಿನಾಡು ಅವರಿಗೆ ಸ್ಪಷ್ಟ ಸ್ಪರ್ಧಾತ್ಮಕ ಮುನ್ನಡೆ ಕಾಣಿಸಿಕೊಂಡಿದ್ದು, ಸುಮಾರು 400ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸುವ ಸಾಧ್ಯತೆ ಗೋಚರಿಸುತ್ತಿದೆ.
ಈ ಹಿಂದಿನ ವಾರ್ಡ್ ಸದಸ್ಯೆಯ ಗೈರಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ತಕ್ಕದಾದ ಪರಿಹಾರವನ್ನು ಕಾಣುವಲ್ಲಿ ಇಲ್ಯಾಸ್ ಅವರ ಸೇವೆ ಇದೀಗ ಅವರಿಗೆ ಲಾಭದಾಯಕವಾಗಿರುವುದು ಗ್ರಾಮದ ಮತದಾರರಿಂದ ವ್ಯಕ್ತವಾಗುತ್ತಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮತದಾರರ ಬಹುಮತ ಇಲ್ಯಾಸ್ ತೂಮಿನಾಡು ಅವರ ಕಾರ್ಯಪಟುತ್ವ, ಜನಸಂಪರ್ಕ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಅವರ ಅರಿವು–ಪರಿಹಾರ ಸಾಮರ್ಥ್ಯಗಳನ್ನು ಪ್ರಮುಖ ಕಾರಣಗಳಾಗಿ ಸೂಚಿಸಿದ್ದಾರೆ. ಅಭಿವೃದ್ಧಿ, ಕುಡಿಯುವ ನೀರು, ರಸ್ತೆ–ಬೆಳಕು ಸೇರಿದಂತೆ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ಅವರು ನೀಡಿರುವ ಭರವಸೆ ಜನರಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಹುಟ್ಟಿಸಿದೆ.
ಇದಕ್ಕೆ ವಿರುದ್ಧವಾಗಿ, ಇತರ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದರೂ, ಮತದಾರರ ಮನಸ್ಸುಗಳಲ್ಲಿ ಇಲ್ಯಾಸ್ ಪರ ವಾತಾವರಣ ಹೆಚ್ಚು ಗಟ್ಟಿ ಆಗುತ್ತಿದೆ ಎಂದು ಸಮೀಕ್ಷಾ ವರದಿ ಬಹಿರಂಗಗೊಂಡಿದೆ.




