HEALTH TIPS

ಕೊರೊನಾ ಲಸಿಕೆ ಎಲ್ಲಿ, ಎಷ್ಟು?; ಜಾಗತಿಕ ಲಸಿಕೆ ಅಭಿಯಾನ ಶುರುವಾಗಿ 3 ತಿಂಗಳು

                 

            ಜಗತ್ತನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿಯ ವಿರುದ್ಧ ಜಾಗತಿಕ ಲಸಿಕೆ ಅಭಿಯಾನ ಆರಂಭವಾಗಿ ಮೂರು ತಿಂಗಳು ಕಳೆದರೂ ಲಸಿಕೆ ನೀಡಿಕೆ ಪ್ರಮಾಣದಲ್ಲಿ ದೇಶ ದೇಶಗಳ ನಡುವೆ ಭಾರಿ ಅಸಮಾನತೆಯಿದೆ. ಅನೇಕ ದೇಶಗಳಲ್ಲಿ ಇನ್ನೂ ಲಸಿಕೆ ಕಾರ್ಯಕ್ರಮ ಆರಂಭವಾಗಿಲ್ಲ. ಜಗತ್ತಿನಾದ್ಯಂತ ಇದುವರೆಗೆ ಸುಮಾರು 359 ಮಿಲಿಯನ್ ಡೋಸ್ ಗೂ ಅಧಿಕ ಕೋವಿಡ್-19 ಲಸಿಕೆ ಹಾಕಲಾಗಿದೆ.


            ಇಸ್ರೇಲ್ ಪ್ರಥಮ:

     ಕೊರೊನಾ ಲಸಿಕೆ ನೀಡಿಕೆಯಲ್ಲಿ ಇಸ್ರೇಲ್ ಪ್ರಥಮ ಸ್ಥಾನದಲ್ಲಿದೆ. ತನ್ನ ಜನಸಂಖ್ಯೆಯ ಶೇ. 58 ಮಂದಿಗೆ ಲಸಿಕೆ ನೀಡುವಲ್ಲಿ ಅದು ಯಶಸ್ವಿಯಾಗಿದೆ. ಜನರು ಮಾಡರ್ನಾ ಇಲ್ಲವೇ ಫೈಜರ್-ಬಯೋಎನ್?ಟೆಕ್?ನ ಲಸಿಕೆ ಪಡೆದಿದ್ದಾರೆ. ಶೇಕಡ 46 ಜನರು ಎರಡೂ ಡೋಸ್ ಲಸಿಕೆ ಪಡೆದಾಗಿದೆ. ಚಿಲಿ ದೇಶದಲ್ಲಿ ಪ್ರಕ್ರಿಯೆ ನಿಧಾನಕ್ಕೆ ಆರಂಭವಾದರೂ ಕನಿಷ್ಠ ಕಾಲು ಭಾಗದಷ್ಟು ಜನರು ಈಗಾಗಲೇ ಲಸಿಕೆ ಪಡೆದಿದ್ದಾರೆ.

            ಬ್ರಿಟನ್ ಯಶಸ್ಸು: 

   ಮೊದಲ ಡೋಸ್ ನೀಡಿದ 12 ವಾರಗಳ ನಂತರ 2ನೇ ಲಸಿಕೆ ಹಾಕಬೇಕೆಂಬ ಬ್ರಿಟನ್ ನಿರ್ಧಾರಕ್ಕೆ ಆರಂಭದಲ್ಲಿ ಟೀಕೆ ವ್ಯಕ್ತವಾದರೂ ಈ ಕಾರ್ಯತಂತ್ರಕ್ಕೆ ಫಲ ಸಿಗುವಂತೆ ಕಾಣುತ್ತಿದೆ. ಕನಿಷ್ಠ ಮೂರನೇ ಒಂದು ಭಾಗದಷ್ಟು ಜನರು 1 ಡೋಸ್ ಲಸಿಕೆಯನ್ನಾದರೂ ಪಡೆದಿದ್ದಾರೆ. ಯುರೋಪ್?ನ ಬೇರಾವುದೇ ದೇಶ ಮಾಡದ ಸಾಧನೆಯನ್ನು ಬ್ರಿಟನ್ ಮಾಡಿದೆ. ಒಂದು ಡೋಸ್ ಲಸಿಕೆ ನೀಡಿದ ನಂತರ ಬ್ರಿಟನ್?ನಲ್ಲಿ ಕರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಯಾಗಿರುವುದು ಈ ಕಾರ್ಯತಂತ್ರದ ಯಶಸ್ಸಿಗೆ ಹಿಡಿದ ಕನ್ನಡಿ ಎಂದು ಅಧ್ಯಯನಗಳು ತಿಳಿಸಿವೆ.

            ಖಂಡಗಳ ನಡುವಿನ ಅಸಮಾನತೆ: 

     ಕೆಲವು ಖಂಡಗಳ ನಡುವೆ ಲಸಿಕೆ ವಿಚಾರದಲ್ಲಿ ಭಾರಿ ಅಂತರ ಇದೆ. ಉತ್ತರ ಅಮೆರಿಕದಲ್ಲಿ ಪ್ರತಿ ನೂರು ಜನರಲ್ಲಿ 18 ಮಂದಿಗೆ ಚುಚ್ಚುಮದ್ದು ಹಾಕಲಾಗಿದೆ. ದಕ್ಷಿಣ ಅಮೆರಿಕದಲ್ಲಿ ಈ ಪ್ರಮಾಣ ಕೇವಲ 4.9 ಆಗಿದೆ. ಸಾಂಕ್ರಾಮಿಕತೆ ಹರಡುವಿಕೆ ವ್ಯಾಪಕವಾಗಿದ್ದರೂ ಇಷ್ಟೊಂದು ಕಡಿಮೆ ಜನರಿಗೆ ಲಸಿಕೆ ಹಾಕಲಾಗಿದೆ. ಆಫ್ರಿಕಾದ ಅನೇಕ ದೇಶಗಳಲ್ಲಿ ಇನ್ನೂ ಲಸಿಕೆ ಕಾರ್ಯ ಪ್ರಕ್ರಿಯೆಯೇ ಆರಂಭವಾಗಿಲ್ಲ. ಈ ಖಂಡದ ಕೆಲವು ದೇಶಗಳಲ್ಲಿ ನೂರು ಜನರಲ್ಲಿ ಕೇವಲ ಒಬ್ಬರಿಗೆ ಲಸಿಕೆ ಹಾಕಲಾಗಿದೆ.

            ಲಭ್ಯತೆ ಅಸಂಭವ: 

    ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಘಸಂಸ್ಥೆಗಳು ಕೆಲವು ಆಫ್ರಿಕಾ ದೇಶಗಳಿಗೆ ಹಲವು ಮಿಲಿಯನ್ ಡೋಸ್ ಲಸಿಕೆ ಪೂರೈಸಿವೆ. ಆದರೆ ಜಗತ್ತಿನ ಇತರ ಭಾಗಗಳಿಗೆ 2024ರ ಮುಂಚೆ ಕೊರೊನಾ ಲಸಿಕೆ ಸಿಗುವುದು ಅಸಂಭವವಾಗಿದೆ. 122 ದೇಶಗಳಲ್ಲಿ ಜನರು ಚುಚ್ಚುಮದ್ದು ಪಡೆದಿದ್ದಾರೆ.

    ತಜ್ಞರ ಎಚ್ಚರಿಕೆ: ಜಗತ್ತಿನ ಬಹುತೇಕ ಜನರಿಗೆ ಲಸಿಕೆ ಹಾಕುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸದ ಹೊರತು ಕರೊನಾ ವೈರಸ್?ನ ರೂಪಾಂತರಿ ಪ್ರಭೇದಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಅವು ಮೂಲ ವೈರಸ್?ಗಿಂತ ಹೆಚ್ಚು ವೇಗದಲ್ಲಿ ಹರಡುತ್ತವೆ ಹಾಗೂ ಅಧಿಕ ಮಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

                ಚೀನಾ ಆಮೆಗತಿ: 

      ಇಡೀ ಜಗತ್ತು ಸಂಕಟಕ್ಕೆ ಒಳಗಾಗುವಂತೆ ಮಾಡಿದ ಕೊರೊನಾ ಸೋಂಕಿನ ಮೂಲ ಸ್ಥಾನವಾದ ಚೀನಾದಲ್ಲಿ ಇದುವರೆಗೆ 65 ಮಿಲಿಯನ್ ಡೋಸ್ ಲಸಿಕೆ ಹಾಕಲಾಗಿದೆ. ದೇಶದ 140 ಕೋಟಿ ಜನಸಂಖ್ಯೆಯ ಶೇಕಡ 80ರಷ್ಟು ಜನರಿಗೆ ರೋಗ ನಿರೋಧಕತೆ ಚುಚ್ಚುಮದ್ದು ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಲಸಿಕೆ ಪ್ರಕ್ರಿಯೆಯಲ್ಲಿ ಚೀನಾ ಆಮೆಗತಿಯಲ್ಲಿ ಸಾಗುತ್ತಿದೆ.

                ಜಾಗತಿಕ ಚಿತ್ರಣ:

- ಕೊರೊನಾ ಸೋಂಕಿನಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಇದುವರೆಗೆ 107 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ. ಕಳೆದ ವಾರ, ಪ್ರತಿದಿನ ಸರಾಸರಿ 2.39 ಮಿಲಿಯನ್ ಡೋಸ್ ಲಸಿಕೆ ಹಾಕಲಾಗಿದೆ.

- ಐರೋಪ್ಯ ಒಕ್ಕೂಟ/ ಐರೋಪ್ಯ ಆರ್ಥಿಕ ಪ್ರದೇಶ (ಇಇಎ) ದೇಶಗಳಲ್ಲಿ ಒಟ್ಟು 22 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ.

- ಒಟ್ಟು 2,31,000 ಡೋಸ್ ಲಸಿಕೆಯನ್ನು ನೀಡಲಾಗಿದೆ. 3,348 ಜನರು ಅಗತ್ಯವಾದ ಎರಡೂ ಡೋಸ್ ಪಡೆದಿದ್ದಾರೆ.

- ಸೋಂಕಿನಿಂದ ಹೆಚ್ಚು ಸಂತ್ರಸ್ತವಾದ ದೇಶಗಳಲ್ಲಿ ಒಂದಾದ ಇಟಲಿಯಲ್ಲಿ ಇದುವರೆಗೆ 67,20,000 ಡೋಸ್ ಲಸಿಕೆ ನೀಡಲಾಗಿದ್ದು ಸುಮಾರು 20 ಲಕ್ಷ ಜನರು ಎರಡು ಡೋಸ್ ಪಡೆದಿದ್ದಾರೆ.

- 1.14 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಸುಮಾರು 29 ಲಕ್ಷ ಮಂದಿ ಎರಡೂ ಡೋಸ್ ಪಡೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries