HEALTH TIPS

ಕೇರಳಕ್ಕೆ ಆಗಮಿಸಿದ ಕರ್ನಾಟಕ ಉಪಮುಖ್ಯಮಂತ್ರಿ-ಶಬರಿಮಲೆ ದರ್ಶನ;ಕೊನ್ನಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗಿ

        ಪತ್ತನಂತಿಟ್ಟು: ಕರ್ನಾಟಕದ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ಅವರು ಬುಧವಾರ ಶಬರಿಮಲೆ ಸನ್ನಿಧಿಗೆ ಭೇಟಿ ನೀಡಿದರು. ಅವರು ಮಂಗಳವಾರ ಸಂಜೆ ಪಂದಳಂ ಅರಮನೆಯಿಂದ ಇರುಮುಡಿ ಕಟ್ಟುಗಳೊಂದಿಗೆ  ಸನ್ನಿಧಿಗೆ ಆಗಮಿಸಿದರು. ಬಳಿಕ ತಂತ್ರಿವರ್ಯರು ಹಾಗೂ ಮೆಲ್ಶಾಂತಿಗಳೊಂದಿಗೆ ಸಭೆ ನಡೆಸಿದರು. ಪಡಿಪೂಜೆ ನಿರ್ವಹಿಸಿ ಬೆಟ್ಟ ಏರಿ ಸನ್ನಿಧಿಗೆ ಆಗಮಿಸಿದರು. ಬಳಿಕ ಬುಧವಾರ ಕೊನ್ನಿಯಲ್ಲಿ ನಡೆದ ಎನ್.ಡಿ.ಎ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದರು. 

         ಕೇರಳದಲ್ಲಿ ಬಿಜೆಪಿ ಚುನಾವಣೆಯ ಉಸ್ತುವಾರಿ ವಹಿಸಿರುವ ಅಶ್ವತ್ ನಾರಾಯಣ ಅವರು ಈ ಹಿಂದೆ ಕ್ರೈಸ್ತ ಮುಖಂಡರನ್ನು ಭೇಟಿ ಮಾಡಿದ್ದರು. ಕ್ಯಾಥೊಲಿಕ್ ಕಾನ್ಫರೆನ್ಸ್ ಬಿಷಪ್ ಆಫ್ ಇಂಡಿಯಾ (ಸಿಸಿಬಿಐ) ಉಪ ಪ್ರಧಾನ ಕಾರ್ಯದರ್ಶಿ ಫಾ. ಸ್ಟೀಫನ್ ಅಲತ್ತರಾ ಮತ್ತು ಬೆಂಗಳೂರು ಡಯಾಸಿಸ್ ನ  ಅಬ್ರಹಾಂ ಮಾರ್ ಸೆರಾಫಿಮ್ ಅವರನ್ನು ಭೇಟಿಯಾಗಿದ್ದರು.

          ಚರ್ಚಿಸಿದ ವಿಷಯಗಳಲ್ಲಿ ಕೇರಳದ ಚುನಾವಣೆಗಳು ಸೇರಿವೆ ಮತ್ತು ಈ ಭೇಟಿ ಎಲ್ಲಾ ವರ್ಗದ ಜನರ ಸುಧಾರಣೆಗಾಗಿ ಕೆಲಸ ಮಾಡುವ ಭಾಗವಾಗಿದೆ ಎಂದು ಅಶ್ವತ್ ನಾರಾಯಣ ಮಾಧ್ಯಗಳಿಗೆ ಹೇಳಿದ್ದಾರೆ.

കർണാടക ഉപമുഖ്യമന്ത്രി കേരളത്തിൽ; ശബരിമലയിൽ ദർശനം നടത്തി; ഇന്ന് കോന്നിയിൽ തെരഞ്ഞെടുപ്പ് കൺവൻഷനിൽ പങ്കെടുക്കും

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries