HEALTH TIPS

ಪಾರ್ಕಿಸನ್ಸ್‌ನ ಈ ಆರಂಭಿಕ ಲಕ್ಷಣ ನಿರ್ಲಕ್ಷ್ಯ ಮಾಡಲೇಬೇಡಿ

 

ಪಾರ್ಕಿಸನ್ಸ್‌ ಗುಣಪಡಿಸಲು ಯಾವುದೇ ಚಿಕಿತ್ಸೆಯಿಲ್ಲ, ಈ ಕಾಯಿಲೆ ಬಂದರೆ ಚಿಕಿತ್ಸೆಯಿಂದ ಸ್ವಲ್ಪ ನಿಯಂತ್ರಣದಲ್ಲಿಡಬಹುದು, ಆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಈ ಕಾಯಿಲೆಯ ಕುರಿತು ಪ್ರಾರಂಭದಲ್ಲಿಯೇ ತಿಳಿದರೆ ಚಿಕಿತ್ಸೆ ಕೊಡಿಸುವುದು ಸುಲಭ.

ಪಾರ್ಕಿಸನ್ಸ್‌ನ ಈ ಪ್ರಾರಂಭದ ಲಕ್ಷಣಗಳನ್ನು ನೋಡಿದರೆ ನಿರ್ಲಕ್ಷ್ಯ ಮಾಡಲೇಬೇಡಿ:
ಕೈಗಳಲ್ಲಿ ನಡುಕ
ನಿಮ್ಮ ಬೆರಳು, ಕೈ, ಕೆನ್ನೆ ಇವುಗಳಲ್ಲಿ ನಡುಕ ಕಂಡು ಬಂದರೆ ಇದು ಪಾರ್ಕಿಸನ್ಸ್‌ನ ಪ್ರಾರಂಭದ ಲಕ್ಷಣವಾಗಿದೆ.
ಯಾವುದು ಸಹಜ?
ನೀವು ತುಂಬಾ ವ್ಯಾಯಾಮ ಮಾಡಿದಾಗ, ಉದ್ವೇಗ ಅಥವಾ ಆತಂಕಕ್ಕೆ ಒಳಗಾದಾಗ ಅಥವಾ ಕೆಲವೊಮ್ಮೆ ಔಷಧ ಅಡ್ಡಪರಿಣಾಮದಿಂದ ಕೂಡ ಕೈ ಬೆರಳುಗಳಲ್ಲಿ ನಡುಕ ಕಂಡು ಬರಬಹುದು. ಆದರೆ ಅದ್ಯಾವುದೇ ಇಲ್ಲದೆ ನಿಮ್ಮ ಕೈ ಬೆರಳುಗಳಲ್ಲಿ , ಕೆನ್ನೆಯಲ್ಲಿ ನಡುಕ ಉಂಟಾಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ನಿಮ್ಮ ಕೈ ಬರಹದ ಗಾತ್ರ ಚಿಕ್ಕದಾದರೆ?
ನೀವು ಬರೆಯುತ್ತಿದ್ದ ಕೈ ಬರಹದಲ್ಲಿ ವ್ಯತ್ಯಾಸ ಉಂಟಾದರೆ, ನೀವು ಬರದ ಬರಹ ನಿಮ್ಮ ಕೈ ಬರಹದಂತೆಯೇ ಇಲ್ಲ ಎಂದು ನಿಮಗನಿಸಿದರೆ ಇದು ಪಾರ್ಕಿಸನ್ಸ್ ಲಕ್ಷಣವಾಗಿರಬಹುದು. ಇದನ್ನು ಮೈಕ್ರೋಕ್ರಾಫಿಯಾ ಎಂದು ಕರೆಯಲಾಗುವುದು.
ಯಾವುದು ಸಹಜ?
ವಯಸ್ಸಾಗುತ್ತಿದ್ದಂತೆ ಅಥವಾ ದೃಷ್ಟಿ ಮಂದವಾದಾಗ ಕೈ ಬರಹದಲ್ಲಿ ವ್ಯತ್ಯಾಸ ಉಂಟಾಗಬಹುದು.

ವಾಸನೆ ಗ್ರಹಿಸುವ ಸಾಮರ್ಥ್ಯ ಇಲ್ಲವಾಗುವುದು
ನಿಮ್ಮ ಮೂಗಿಗೆ ಯಾವುದೇ ವಾಸನೆ ಬರುತ್ತಿಲ್ಲ, ನೀವು ಇಷ್ಟದ ಆಹಾರವನ್ನು ಮೂಗಿನ ಬಳಿ ಹಿಡಿದರೂ ಯಾವುದೇ ವಾಸನೆ ಬರುತ್ತಿಲ್ಲ ಎಂದಾದರೆ ಈ ಕುರಿತು ನಿಮ್ಮ ವೈದ್ಯರ ಬಳಿ ಹೇಳುವುದು ಒಳ್ಳೆಯದು.
ನಿದ್ದೆಗೆ ಭಂಗ
ನಿದ್ದೆಯಲ್ಲಿ ಬೆಚ್ಚಿ ಬೀಳುವುದು, ಅಥವಾ ನೀವು ಮಲಗಿದ ಕಡೆಯಿಂದ ಬೇರೆ ಕಡೆ ಮಲಗುವುದಾಗಿ ನಿಮ್ಮ ಸಂಗಾತಿ ನಿಮಗೆ ತಿಳಿಸಿದರೆ ಇದು ಪಾರ್ಕಿಸನ್ಸ್ ಪ್ರಾರಂಭದ ಲಕ್ಷಣವಾಗಿದೆ.

ನಡೆದಾಡಲು ಕಷ್ಟವಾಗುವುದು
ದೇಹ ಬಿಗಿಯಾದ ಅನುಭವ, ಮೊದಲಿನಂತೆ ದೇಹಕ್ಕೆ ಪ್ಲೆಕ್ಸಿಬಲ್ ಇಲ್ಲ ಎಂದಾದರೆ ಇದು ಪಾರ್ಕಿಸನ್ಸ್‌ ಪ್ರಾರಂಭದ ಲಕ್ಷಣವಾಗಿರಬಹುದು.
ಮಲಬದ್ಧತೆ
ದೇಹದಲ್ಲಿ ಚಯಪಚಯಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ, ಮಲಬದ್ಧತಗೆ ತೊಂದರೆಯಾಗುತ್ತಿದೆ ಎಂದಾದರೆ ನೀವು ಈ ರೀತಿಯಾಗಲು ಕಾರಣವೇನು ಎಂದು ತಿಳಿಯಲು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ಧ್ವನಿ ಕಡಿಮೆಯಾಗುವುದು
ನಿಮ್ಮ ಧ್ವನಿ ಮೊದಲಿನಂತೆ ಇಲ್ಲ ಎಂದು ನಿಮಗೆ ಅನಿಸಲಾರಂಭಿಸಿದರೆ ನೀವು ಪ್ರಯತ್ನ ಮಾಡಿದಾಗ ದೊಡ್ಡ ಧ್ವನಿ ಬರದಿದ್ದರೆ ಪಾರ್ಕಿಸನ್ಸ್ ಲಕ್ಷಣಗಳಿರಬಹುದು.
* ನೀವು ತುಂಬಾ ಬೇಸರದಲ್ಲಿರುವಂತೆ ಕಂಡರೆ
ನೀವು ಆರಾಮವಾಗಿಯೇ ಇದ್ದರೂ ನಿಮ್ಮ ಮುಖ ನೋಡಿದಾಗ ತುಂಬಾ ಡಲ್‌ ಆದಂತೆ, ಬೇಸರದಲ್ಲಿರುವಂತೆ ಕಂಡರೆ ಪಾರ್ಕಿಸನ್ಸ್ ಲಕ್ಷಣಗಳಿರಬಹುದು.
* ತಲೆಸುತ್ತು
ನಿಂತಾಗ ಇದ್ದಕ್ಕಿದ್ದಂತೆ ತಲೆಸುತ್ತುವುದು ಉಂಟಾಗುತ್ತಿದ್ದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
* ಕೆಲವೊಮ್ಮೆ ನಿಂತಾಗ ನಿಮ್ಮ ಮನೆಯವರು ಅಥವಾ ಸ್ನೇಹಿತರು ನೀವು ಭಂಗಿಯಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಿದಾಗ ಈ ಕಡೆ ಗಮನ ನೀಡುವುದು ಒಳ್ಳೆಯದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries