HEALTH TIPS

ಪೋಷಕರನ್ನು ನೋಡಿಕೊಳ್ಳದ ಮಗ/ಮಗಳಿಗೆ ಕಾನೂನು ಮೂಲಕ ತಕ್ಕಪಾಠ ಕಲಿಸಬಹುದೇ?

 

ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ, ವಯಸ್ಸು ಕಾಲದಲ್ಲಿ ನಮಗೆ ನೆರಳಾಗುತ್ತಾರೆ ಎಂದು ಹೊಟ್ಟೆ, ಬಟ್ಟೆ ಕಟ್ಟಿ ಸಾಕಿದ ಮಕ್ಕಳ ದೊಡ್ಡ ಹುದ್ದೆ, ಅವರದ್ದೇ ಆದ ಸಂಸಾರ ಅಂತ ಹಾಯಾಗಿರುವಾಗ ತಂದೆ-ತಾಯಿ ಭಾರವಾಗುತ್ತಿದ್ದಾರೆ. ಹೀಗಾಗಿ ಎಷ್ಟೋ ಇಂಥ ವಯೋವೃದ್ಧರಿಗೆ ವೃದ್ಧಾಶ್ರಮಗಳು ಆಸರೆಯಾಗುತ್ತಿವೆ.

ತಂದೆ -ತಾಯಿ ನಮ್ಮ ಮಗ ಅಥವಾ ಮಗಳು ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂಬ ಭರವಸೆ ಹಾಗೂ ಮಕ್ಕಳು ಚೆನ್ನಾಗಿರಲಿ, ಇನ್ನೇದರೂ ನಮ್ಮ ಆಸ್ತಿ-ಪಾಸ್ತಿ ಅವರು ನೋಡಿಕೊಂಡು ಆರಾಮವಾಗಿರಲಿ ಎಂದು ಮಕ್ಕಳಿಗೆ ಆಸ್ತಿಯನ್ನೆಲ್ಲಾ ಕೊಟ್ಟುಬಿಡುತ್ತಾರೆ. ಆದರೆ ಕೆಲ ಮಕ್ಕಳು ತಮ್ಮ ಹೆತ್ತವರಿಗೆ ವಂಚನೆ ಮಾಡುತ್ತಾರೆ. ಮಕ್ಕಳು ಪೋಷಕರ ಜವಾಬ್ದಾರಿ ತೆಗೆದುಕೊಳ್ಳದಿದ್ದಾಗ ಹಿರಿ ಜೀವಗಳು ಈಗ ನಮಗೇನು ಗತಿ? ಎಂದು ವಿಲವಿಲ ಒದ್ದಾಡುತ್ತಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆ ಇದೆ.
ಯಾವ ಮಕ್ಕಳು ತಮ್ಮ ಪೋಷಕರನ್ನು ನೀಡಿಕೊಳ್ಳುವುದಿಲ್ಲವೋ ಅಂಥ ಮಕ್ಕಳಿಗೆ ಕಾನೂನು ಮೂಲಕ ಶಿಕ್ಷೆ ನೀಡಬಹುದು. ಪೋಷಕರಿಗೆ ಈ ಕಾನೂನು ಕುರಿತು ಅರಿವು ಇದ್ದರೆ ತಮಗೆ ಮೋಸ ಮಾಡಿದ ಮಕ್ಕಳಿಗೆ ತಕ್ಕ ಶಾಸ್ತಿ ಮಾಡಬಹುದು. ಇದರ ಕುರಿತ ಹೆಚ್ಚಿನ ವಿವರ ನೋಡುವುದಾದರೆ...
2001ರಲ್ಲಿ ನಡೆಸಿದ ಜನಗಣತಿ ಪ್ರಕಾರ 1981ರಲ್ಲಿ ಭಾರತದ ಕುಟುಂಬದ ಸದಸ್ಯರ ಸಂಖ್ಯೆಗೆ ಇಳಿದಿತ್ತು, ಅದೇ 2001ರಷ್ಟಿಗೆ ಬಹುತೇಕ ಕುಟುಂಬದ ಸದಸ್ಯರ ಸಂಖ್ಯೆ ನಾಲ್ಕು. ಭಾರತದಲ್ಲಿ 8 ಕೋಟಿಗೂ ಅಧಿಕ ಹಿರಿಯ ನಾಗರಿಕರಿದ್ದಾರೆ, ಅವರಲ್ಲಿ ಕೆಲವರಷ್ಟೇ ಮಕ್ಕಳ ಜೊತೆ ಇದ್ದಾರೆ. ಉಳಿದವರು ಮಕ್ಕಳ ಆಶ್ರಯ ಸಿಗದೆ ವೃದ್ಧಾಶ್ರಮದಲ್ಲಿ ಇರುವಂಥ ಅಥವಾ ಅನಾಥರಂತೆ ಸಾಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇಂಥ ಹಿರಿಯ ಜೀವಗಳ ಕಣ್ಣೀರ ಕತೆ ಕೇಳುವಾಗ ಛೇ... ಅಂಥ ಮಕ್ಕಳು ಇದ್ದರೆಷ್ಟು ಎಂದು ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಆದರೆ ಇಂಥ ನೀಚ ಮಕ್ಕಳಿಗೆ ಕಾನೂನು ರೀತಿಯಲ್ಲಿ ಬುದ್ಧಿ ಕಲಿಸಬಹುದು. 
 
ಮಕ್ಕಳಿಂದ ಮೋಸಕ್ಕೆ, ವಂಚನೆಗೆ ಒಳಗಾಗಿ ದಿಕ್ಕು ತೋಚದಿರುವ ಹಿರಿಯ ಜೀವಗಳು ಕಾನೂನು ಮೂಲಕ ಅಭಯ ಪಡೆಯಬಹುದು. * 1973ರ ಭಾರತೀಯ ದಂಡ ಸಂಹಿತೆ 125ನಲ್ಲಿ ಪತ್ನಿ ಹಾಗೂ ಮಕ್ಕಳ ನಿರ್ವಹಣೆ ಜೊತೆ ಪೋಷಕರ ನಿರ್ವಹಣೆ ಬಗ್ಗೆಯೂ ಹೇಳಿದೆ. CrPC ಸೆಕ್ಷನ್ 125 (1) (d)ನಲ್ಲಿ ತಂದೆ ಹಾಗೂ ತಾಯಿಗೆ ವಿಶೇಷ ಹಕ್ಕನ್ನು ನೀಡಿದೆ. ಪೋಷಕರಿಗೆ ಮಕ್ಕಳು ಆರ್ಥಿಕ ನೆರವು ನೀಡುವಂತಾಗಲು ಹಾಗೂ ವೃದ್ಧಾಶ್ರಮ ಸ್ಥಾಪಿಸಿ ನಿರ್ಗತಿಕರಾದ ಅಥವಾ ಮಕ್ಕಳಿಲ್ಲದ ಹಿರಿಯರಿಗೆ ನರವಾಗಲು 2007ರಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಕ್ಕಳನ್ನು ನಿಭಾಯಿಸೋದು ಹೇಗೆ?
ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಕ್ಕಳನ್ನು ನಿಭಾಯಿಸೋದು ಹೇಗೆ? 
 "ಮಕ್ಕಳು ಆರ್ಥಿಕವಾಗಿ ನೆರವು ನೀಡದಿದ್ದರೆ ಅಥವಾ ಪೋಷಕರ ಆಸ್ತಿಯನ್ನು ಪಡೆದು ಮಕ್ಕಳು ಪೋಷಕರನ್ನು ನೋಡಿಕೊಳ್ಳದಿದ್ದರೆ ಸೆಕ್ಷನ್ 125 CrPC ಪ್ರಕಾರ ಅಂಥ ಮಕ್ಕಳ ವಿರುದ್ಧ ಕೇಸ್ ಹಾಕಬಹುದು. ಆವಾಗ ಮ್ಯಾಜಿಸ್ಟ್ರೇಟ್‌ ಪೋಷಕರಿಗೆ ಆರ್ಥಿಕ ನೆರವು ನೀಡುವಂತೆ ಮಕ್ಕಳಿಗೆ ಸೂಜಿಸುತ್ತದೆ. ಮ್ಯಾಸ್ಟ್ರೇಟ್‌ ನೀಡಿದ ತೀರ್ಪನ್ನು ಮಕ್ಕಳು ಪಾಲಿಸದಿದ್ದರೆ ಅಥವಾ ಪೋಷಕರಿಗೆ ಆರ್ಥಿಕ ನೆರವು ನೀಡದೇ ಹೋದರೆ ಅಂಥ ಮಕ್ಕಳಿಗೆ ಜೈಲು ಶಿಕ್ಷೆಯಾಗುವುದು ಅಥವಾ ಮಕ್ಕಳು ತ್ವರಿತವಾಗಿ ಪೋಷಕರಿಗೆ ಹಣ ನೀಡಬೇಕು, ಇಲ್ಲದಿದ್ದರೆ ಶಿಕ್ಷೆಯಾಗುವುದು" ಎಂಬುವುದಾಗಿ ಹೇಳಿದ್ದಾರೆ. ಹಿರಿಯರು ಈ ಹಕ್ಕುಗಳ ಬಗ್ಗೆ ತಿಳಿದುಕೊಂಡರೆ ಮಕ್ಕಳಿಂದ ಮೋಸಕ್ಕೆ ಒಳಗಾಗಿ ಇಳಿವಯಸ್ಸಿನಲ್ಲಿ ನರಕದಿಂದ ಪಾರಾಗಬಹುದು. 2007ರಲ್ಲಿ ಬಂದ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸಾರಾಂಶ ನೋಡುವುದಾದರೆ * 60 ವರ್ಷ ಮೇಲ್ಪಟ್ಟವರಿಗೆ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಅನ್ವಯಿಸುತ್ತದೆ. * ಪೋಷಕರು ತಮ್ಮ ಕುಟುಂಬದ ವಕೀಲರ ಅಥವಾ ಯಾವುದೇ ಕ್ರಿಮಿನಲ್ ಲಾಯರ್ ಮೂಲಕ ಮಕ್ಕಳ ಮೇಲೆ ಕೇಸ್‌ ಹಾಕಬಹುದು. * ಕೇಸ್ ದಾಖಲಾ ಬಳಿಕ ಮಕ್ಕಳಿಗೆ ನೋಟೀಸ್‌ ಕಳುಹಿಸಲಾಗುವುದು, ನೋಟೀಸ್ ಕಳುಹಿಸಿದ 90 ದಿನದೊಳಗಾಗಿ ಮಕ್ಕಳು ಪೋಷಕರಿಗೆ ನಿರ್ವಹಣೆ ಹಣ ಪಾವತಿಸಬೇಕು. ಕೆಲವೊಂದು ಕೇಸ್‌ಗಳಲ್ಲಿ ಮಾತ್ರ ಮತ್ತೂ 30 ದಿನ ಅಧಿಕ ನೀಡಲಾಗುವುದು. * ನೋಟೀಸ್ ಕಳುಹಿಸಿದ ಬಳಿಕ ನಿರ್ವಹಣೆಗೆ ಹಣ ನೀಡದಿರುವ ಮಕ್ಕಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 5000 ರುಪಾಯಿ ದಂಡವಿಧಿಸಬಹುದು.

ಜೀವನ ನಿರ್ವಹಣೆಗೆ ಹಣ ನೀಡಲು ಪೋಷಕರು ಮಗನ ಬಳಿ ಆಗ್ರಹಿಸಬಹುದೇ? ತಮ್ಮ ಜೀವನ ನಡೆಸಲು ಆರ್ಥಿಕ ಸಹಾಯವಿಲ್ಲದೆ ನಿರ್ಗತಿಕರಾಗಿದ್ದರೆ ಮಗ ಮಾತ್ರವಲ್ಲ ಮಗಳ ಬಳಿಯೂ ಪೋಷಕರು ತಮ್ಮ ಜೀವನ ನಿರ್ಹಣೆಗೆ ಹಣ ನೀಡುವಂತೆ ಕೇಳಬಹುದು. 
ಮಗ ಅಥವಾ ಮಗಳು ಖರ್ಚಿಗೆ ಹಣ ನೀಡಿದ್ದರೆ? ಪೋಷಕರಿಗೆ ಜೀವನ ನಡೆಸಲು ಮಗಳು ಅಥವಾ ಮಗ ಆರ್ಥಿಕ ಸಹಾಯ ನೀಡದೆ ಹೋದರೆ ಮ್ಯಾಜಿಸ್ಟ್ರೇಟ್ ಹೋಗಿ ಕೇಸ್ ದಾಖಲಿಸಿದರೆ ಪ್ರತಿ ತಿಂಗಳ ಜೀವನ ನಿರ್ವಹಣೆಗೆ ಕೋರ್ಟ್ ಸೂಚಿಸಿದ ಹಣವನ್ನು ಮಗ/ಮಗಳು ನೀಡಬೇಕಾಗುತ್ತದೆ. ಒಂದು ಮಕ್ಕಳು ನೀಡದೆ ಹೋದರೆ ಅವರು ಶೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ತಮ್ಮ ಮಕ್ಕಳು ತಮಗೆ ವಂಚನೆ ಮಾಡಿದಾಗ ಹಿರಿ ಜೀವಗಳಿಗೆ ದಿಕ್ಕೇ ತೋಚುವುದಿಲ್ಲ, ನಮಗೆ ದಿಕ್ಕಾಗುತ್ತಾರೆ ಎಂದು ಭಾವಿಸಿ ಸಾಕಿದ್ದ ಮಕ್ಕಳು ಪೋಷಕರ ಜವಾಬ್ದಾರಿ ತೆಗೆದುಕೊಳ್ಳದೆ ದಿಕ್ಕಪಾಲು ಮಾಡುತ್ತಿರುವ ಎಷ್ಟೂ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುತ್ತವೆ. ಮಕ್ಕಳನ್ನು ನೋಡಿಕೊಳ್ಳದ ಮಕ್ಕಳಿಗೆ ಬುದ್ಧಿ ಕಲಿಸಲು ಹಾಗೂ ತಮ್ಮ ಜೀವನ ನಿರ್ವಹಣೆಗೆ ಹಣಕಾಸಿನ ನೆರವು ಸಿಗಲು ಹಿರಿಯರು ಕೋರ್ಟ್ ಮೊರೆ ಹೋದರೆ ಖಂಡಿತ ಅವರಿಗೆ ನ್ಯಾಯ ಸಿಗಲಿದೆ. 00:00/02:00 60 ವರ್ಷ ಮೇಲ್ಪಟ್ಟ ಪೋಷಕರ ಯೋಗಕ್ಷೇಮಕ್ಕಾಗಿಯೇ ಕಾನೂನಿನಲ್ಲಿ ಅವಕಾಶವಿದ್ದರೂ ಎಷ್ಟೋ ಪೋಷಕರು ನಮ್ಮ ಮಕ್ಕಳ ವಿರುದ್ಧ ಹೋಗಲು ಮನಸ್ಸಾಗದೆ ಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಪೋಷಕರು ತಮ್ಮ ಹಕ್ಕುಗಳನ್ನು ಚಲಾಯಿಸಿದರೆ ಮೋಸ ಮಾಡುವ ಮಕ್ಕಳಿಗೂ ತಕ್ಕಶಾಸ್ತಿಯಾಗುವುದು, ಇತರರಿಗೂ ಪಾಠವಾಗುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries