ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಪದ್ಮಾವತಿ ಬಿಡುಗಡೆಗೆ ಈ ಷರತ್ತೊಡ್ಡಿದ ಕರಣಿ ಸೇನೆ
ಪದ್ಮಾವತಿ ಚಿತ್ರ ವಿವಾದದ ನಡುವೆ ಸಂಜಯ್ ಲೀಲಾ ಬನ್ಸಾಲಿ ಸ್ವಲ್ಪ ನಿರಾಳವಾಗುವ ಸುದ್ದಿಯೊಂದು ಬಂದಿದೆ. ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವ ಕರಣಿ ಸೇನೆ, ಸಂಜಯ್ ಲೀಲಾ ಬನ್ಸಾಲಿಗೆ ಷರತ್ತೊಂದನ್ನು ಹಾಕಿದೆ. ಬನ್ಸಾಲಿ ಷರತ್ತಿನಂತೆ ನಡೆದುಕೊಂಡಲ್ಲಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲವೆಂದು ಕರಣಿ ಸೇನೆ ಹೇಳಿದೆ.
ಮೇವಾಡದ ಮಹಾರಾಜರಿಗೆ ಪದ್ಮಾವತಿ ಚಿತ್ರವನ್ನು ತೋರಿಸಬೇಕು. ಅವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿಲ್ಲವಾದ್ರೆ ಚಿತ್ರ ಬಿಡುಗಡೆ ಮಾಡಬಹುದು. ನಮ್ಮ ಅಭ್ಯಂತರವೇನೂ ಇಲ್ಲವೆಂದು ಕರಣಿ ಸೇನೆ ಮುಖಂಡ ಕರಣ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಜನವರಿಯಿಂದಲೇ ಕರಣಿ ಸೇನೆ, ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಚಿತ್ರ ಬಿಡುಗಡೆ ದಿನಾಂಕ ಹತ್ತಿರ ಬಂದಂತೆ ಪ್ರತಿಭಟನೆ ಜೋರಾಗಿತ್ತು. ಆದ್ರೆ ಈಗ ಇಂಥ ಹೇಳಿಕೆ ನೀಡಿದ್ದು, ಗೊಂದಲದಲ್ಲಿದ್ದ ಸಂಜಯ್ ಲೀಲಾ ಬನ್ಸಾಲಿಗೆ ಉಸಿರಾಡಲು ಅವಕಾಶ ಸಿಕ್ಕಂತಾಗಿದೆ.


