HEALTH TIPS

ಸಮರಸ ಈ ಹೊತ್ತಿಗೆ ಹೊಸ ಹೊತ್ತಗೆ-ಭಾಗ 4-ಇಂದಿನ ಪುಸ್ತಕ ಸಾವಿರ ಕಣ್ಣಿನ ನವಿಲು

ಪುಸ್ತಕ: ಸಾವಿರ ಕಣ್ಣಿನ ನವಿಲು (ಗಜಲ್ ಸಂಕಲನ) ಲೇಖಕರು : ಗಿರೀಶ್ ಜಕಾಪುರೆ *ನವಿಲು ಗರಿ ಬಿಚ್ಚಿದಾಗ* ವಿಮರ್ಶೇ:ಚೇತನಾ ಕುಂಬ್ಳೆ ಕವಿಹೃದಯರಿಗೂ, ಕಲಾ ರಸಿಕರಿಗೂ, ಪ್ರಕೃತಿ ಪ್ರಿಯರಿಗೂ ನವಿಲಿನೊಂದಿಗೆ ಒಂದು ಅವಿನಾಭಾವ ಸಂಬಂಧವಿರುತ್ತದೆ. ನವಿಲು, ನವಿಲುಗರಿ, ಅದರ ಕುಣಿತ, ನೋಡುಗರಿಗೆ ಯಾವಾಗಲೂ ಅಚ್ಚರಿ, ಕೌತುಕ.ಸೌಂದರ್ಯಕ್ಕೆ ಇನ್ನೊಂದು ಹೆಸರೇ ನವಿಲು. ಗರೀಶ್ ಜಕಾಪುರೆಯವರ ಮನದಲ್ಲಿ ಮೂಡಿದ ನವಿಲಿಗೆ ಸಾವಿರ ಕಣ್ಣುಗಳಿದ್ದು , ಅದು ಗರಿಬಿಚ್ಚಿ ಕುಣಿದು ಸಹೃದಯರ ಮನವನ್ನು ಸೂರೆಗೊಂಡಿದೆ. ಗಜಲ್ ಲೋಕದಲ್ಲಿ ಸಂಚಲನವನ್ನುಂಟು ಮಾಡುತ್ತಿರುವ ಗಿರೀಶ್ ಜಕಾಪುರೆಯವರು ಪ್ರಕಟಿಸಿದ ಗಜಲ್ ಸಂಕಲನವೇ 'ಸಾವಿರ ಕಣ್ಣಿನ ನವಿಲು'. ಕರ್ನಾಟಕದಿಂದ ಹೊರಗಿದ್ದುಕೊಂಡು ಕನ್ನಡದ ಕಂಪನ್ನು ನಾಲ್ದೆಸೆಗೂ ಹರಡುತ್ತಿರುವ, ಮಹಾರಾಷ್ಟ್ರದ ಮೈಂದರ್ಗಿಯವರಾದ ಗರೀಶ್ ಜಕಾಪುರೆಯವರು ವೃತ್ತಿಯಲ್ಲಿ ಶಿಕ್ಷರಾಗಿದ್ದು , ನಿರಂತರವಾದ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕಾವ್ಯ, ಕತೆ, ವ್ಯಕ್ತಿಚಿತ್ರ, ಲೇಖನ, ಮಕ್ಕಳ ಕಥೆಗಳು-ಪದ್ಯಗಳು, ಕಾದಂಬರಿ, ಜೀವನ ಚರಿತ್ರೆ, ಅನುವಾದ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾದವರು. ಕನ್ನಡ, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್, ಭಾಷೆಗಳ ಸಾಹಿತ್ಯವನ್ನು ಓದಿಕೊಂಡಿರುವುದನ್ನು ನೋಡಿದಾಗ ಅವರ ????ನದ ದಾಹ ಎಷ್ಟರ ಮಟ್ಟಿಗಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಈ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು "ಅವರು ಬರೆದರೆ ಕತೆ, ನುಡಿದರೆ ನಾಟಕ, ಮಿಡಿದರೆ ಮಾರ್ದವ ಕವಿತೆ, ಮೌನವಾಗಿದ್ದರೆ ದನಿಗುಡುವ ಸಂತ" ಎಂದು ಲೇಖಕರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಗಜಲ್ ರಚನೆಕಾರರಾದ ಕನಕಗಿರಿಯ ಅಲ್ಲಾಗಿರಿರಾಜರು ಬೆನ್ನುಡಿ ಬರೆಯುವ ಮೂಲಕ ಶುಭ ಹಾರೈಸಿದ್ದಾರೆ. ಅವರ ಪ್ರಕಾರ "ಗಜಲ್ ದಿಲ್ ಕಾ ಕಾವ್ಯ". ಹಾಗೆಯೇ " 'ಸಾಕಿ' ಎಂಬುವವ/ಳು ಗಜಲ್ ನ ಮತ್ಲಾ ಹಂಚುವ ಸಭಾ ನಾಯಕ/ಕಿಯೇ ಹೊರತು ಮಧು ಸುರಿಯುವ ಸಪ್ಲೈಯರ್ ಅಲ್ಲ ಅಥವಾ ಪ್ರೇಮ ಕಾಮದ ಸಂಕೇತವೂ ಅಲ್ಲ". ಎನ್ನುತ್ತಾರೆ ಲೇಖಕರು ಗಜಲ್ ನ ಕುರಿತು ಆಳವಾದ ಅಧ್ಯಯನವನ್ನು ಮಾಡಿದ್ಧು ರದೀಫ್ ರಹಿತವಾದ ಅಂದರೆ ಕೇವಲ ಕಾಫಿಯಾನ ಗಜಲ್ ಗಳ ಒಂದು ಸಂಕಲನವನ್ನು ಪ್ರಕಟಿಸಿರುವುದು ವಿಶೇಷವಾಗಿದೆ. ಯಾಕೆಂದರೆ, ಗಜಲ್ ಸಂಕಲನ ಎನ್ನುವಾಗ ಅಲ್ಲಿ *ಮುರದ್ಧಫ್ ಗಜಲ್*(ರದೀಫ್ ಇರುವ) ಮತ್ತು *ಗೈರ್ ಮುರದ್ಧಫ್ ಗಜಲ್* ಗಳು(ರದೀಫ್ ಇಲ್ಲದ) ಇರುತ್ತವೆ. ಆದರೆ, ಗರೀಶ್ ಅವರು ತಮ್ಮ ಸಂಕಲನದಲ್ಲಿ ರದೀಫ್ ನ ಹಂಗನ್ನು ತೊರೆದು ಕೇವಲ ಕಾಫಿಯಾನ ಗಜಲ್ ಗಳಿಗೆ ಮಾತ್ರ ಪ್ರಾಧಾನ್ಯತೆಯನ್ನು ನೀಡಿರುವುದು ಗಮನಾರ್ಹ ವಿಷಯ. ಅವರು 'ಅಲ್ಲಮ' ಎಂಬ ಕಾವ್ಯನಾಮದಲ್ಲಿ ಗಜಲ್ ಗಳನ್ನು ರಚಿಸುತ್ತಿದ್ಧಾರೆ. ಗರಿಬಿಚ್ಚುವ ಮುನ್ನ ಲೇಖಕರು ಗಜಲ್ ನ ಒಂದು ನಿಯಮವಾದ ಕಾಫಿಯಾನದ ಬಗ್ಗೆ , ಅವುಗಳಲ್ಲಿನ ಹಲವು ವಿಧಗಳನ್ನು ಉದಾ: ಸಹಿತ ಸಂಕ್ಷಿಪ್ತ ಮಾಹಿತಿಗಳನ್ನು ನೀಡಿರುವುದು ಗಜಲ್ ಅಧ್ಯಯನ ಮಾಡುವವರಿಗೆ ಉಪಯುಕ್ತವಾಗಿದೆ. ಕಾಫಿಯಾನದ ಕುರಿತ ಮಾಹಿತಿಗಳನ್ನು ಕಂಡಾಗ ಒಮ್ಮೆ ಅಚ್ಚರಿ ಮೂಡಿದ್ದಂತೂ ಸತ್ಯ. ಯಾಕೆಂದರೆ ಕಾಫಾಯಾನದಲ್ಲಿ ಇಷ್ಟೊಂದು ವಿಷಯಗಳಿವೆಯೆಂದು ತಿಳಿದದ್ದು, ಈ ಮಾಹಿತಿಗಳನ್ನು ನಾನು ಓದಿದಾಗಲೇ. ಇದರಿಂದ ಗಜಲ್ ನ ಬಗ್ಗೆ ಲೇಖಕರ ಆಳವಾದ ಅಧ್ಯಯನವನ್ನು ತಿಳಿಯಬಹುದು. ಗೈರ್ ಮುರದ್ದಫ್ ಗಜಲ್ ಗಳಿಗೆ ಮೂಲ ಉರ್ದುವಿನಲ್ಲಿ ಬೇರೆ ಹೆಸರಿಲ್ಲವಾದರೂ ಕನ್ನಡದಲ್ಲಿ 'ಕಾಫಿಯಾನ' ಎಂಬ ಪದ ಬಳಕೆಯಲ್ಲಿದೆ. ಕನ್ನಡದ ಗಜಲ್ ಗಳ ಮಟ್ಟಿಗೆ ಈ ಶಿರೋನಾಮೆ ಸೀಮಿತವಾಗಿದೆ. ಚಿದಾನಂದ ಸಾಲಿ ಹಾಗೂ ಜಂಬಣ್ಣ ಅಮರಚಿಂತರು ಈ ಪದವನ್ನು ಮೊದಲಿಗೆ ಬಳಸಿದರೆಂಬ ಮಾಹಿತಿಯನ್ನೂ ನೀಡುತ್ತಾರೆ. ಕಾಫಿಯಾನದಲ್ಲಿ ಕನಿಷ್ಟ ಎಷ್ಟು ಅಕ್ಷರಗಳಿರಬೇಕೆಂದು ಹೇಳುತ್ತಾ, ಹರ್ಫ ಮುಸ್ತಕಿಲ್ (ಸ್ಥಾಯಿ ಅಕ್ಷರ), ಹರ್ಫ ಮುತ್ ಬದಿಲ್( ಅಸ್ಥಾಯಿ ಅಕ್ಷರ) ಅಲಾಮತ್ ಕಾಫಿಯಾ- (ಏಕ ಅಲಾಮತ್ & ಬಹು ಅಲಾಮತ್), ಬಾಜ್ ಕಾಫಿಯಾ, ಹಮ್ ಕಾಫಿಯಾ, ಜುಲ್ ಕಾಫಾಯಾ, ಸ್ವರ ಕಾಫಿಯಾ ಹೀಗೆ ಪ್ರತಿಯೊಂದಕ್ಕೂ ಉದಾ: ಸಹಿತ ಕಾಫಿಯಾದ ಸ್ವರೂಪವನ್ನು ವಿವರಿಸುತ್ತಾರೆ. ನವಿಲಿನ ಒಂದೊಂದೇ ಗರಿ ಬಿಚ್ಚಿದಾಗ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿರುವುದನ್ನು ಕಾಣಬಹುದು. ಇಲ್ಲಿ ಪ್ರೀತಿಯಿದೆ. ಖುಷಿಯಿದೆ,ನೋವಿದೆ, ವಿರಹವಿದೆ, ಬಡತನದ ಚಿತ್ರಣವಿದೆ, ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿವೆ, ಮೌನಗಳಿವೆ, ಮನದ ತುಡಿತಗಳಿವೆ, ಬಿಟ್ಟೂ ಬಿಡದೆ ತಬ್ಬಿಕೊಳ್ಳುವ ನೆನಪುಗಳಿವೆ ಕನ್ನಡ ನಾಡಿನ , ಮಣ್ಣಿನ ಬಗೆಗಿನ ಪ್ರೀತಿ ಇದೆ ವಾಸ್ತವ ಬದುಕಿನ ಚಿತ್ರಣವಿದೆ. ಕಹಿಯಾದ ಸತ್ಯಗಳಿವೆ, ಸಂದೇಶಗಳಿವೆ, ಆರಂಭದಿಂದ ಕೊನೆವರೆಗೂ ಜೊತೆಯಲ್ಲಿ 'ಅವಳು' ಇದ್ಧಾಳೆ. ಅನ್ಯಭಾಷಾ ಕವಿಗಳ ಸ್ಮರಣೆ ಇದೆ., ಹೀಗೆ ಭಾವಗಳಿಗೆ ಬಡತನವೇ ಇಲ್ಲ. ಆಮತ್, ಮೈಖಾನೆ, ಜಫರ್, ಅಜಾನ್, ಸಾಕಿ, ಚಮ್ಲಾ ಹೀಗೆ ಹಲವು ಅನ್ಯಭಾಷಾ ಪದಗಳಿವೆ. ಲೇಖಕರು ಒಂದೆಡೆ ಹೇಳುತ್ತಾರೆ ಗಜಲ್ ಎಂದರೆ, "ಹೃದಯದ ನೋವಿಗೆ ಮುಲಾಮು ನನ್ನ ಗಜಲ್ ನೊಂದವರನು ಸಂತೈಸುವ ಕೈಯಾಗಿದೆ". ಲೇಖಕರಿಗೆ ಸಾಕಿ, ಮಧುಶಾಲೆ, ಮದಿರೆಗಳ ನಡುವಿದ್ದ ಸಂಬಂಧ ಸಂಕಲನದುದ್ದಕ್ಕೂ ಕಾಣಬಹುದು. ಅವರ ಪ್ರಕಾರ ಮದಿರೆ ಎಂದರೆ 'ಪುಷ್ಪರಸಾಯನ' "ಗುಲಾಬಿ ಹೂಗಳ ಅರೆದು ಬಟ್ಟಲು ತುಂಬಿಹರು 'ಅಲ್ಲಮ' ಮದಿರೆಯೆಂದು ಹೀಯಾಳಿಸಬೇಡ ಇದು ಪುಷ್ಪ ರಸಾಯನ". ಎಂದು ಮದಿರೆಯನ್ನು ವ್ಯಾಖ್ಯಾನಿಸುವರು. "ನಾನು ತೀರಿದರೆ ಸರಾಯಿಯಿಂದ ಸ್ನಾನ ಮಾಡಿಸಿ ನನಗೆ ಸೀಸೆ, ಲೋಟಗಳಿಂದಲೇ ಮುಚ್ಚಿ ನನ್ನನು ಮಣ್ಣಿನ ಬದಲು" ಎಂದು ಹೇಳುವಲ್ಲಿ ಮದಿರೆಯೊಡನಿರುವ ಆಳವಾದ ಸಂಬಂಧದ ಅರಿವಾಗುತ್ತದೆ. "ಈ ಕ್ರೂರ ಜಗದಲ್ಲಿ ಬದುಕಬೇಕಿದ್ದರೆ ಎದೆ ಗಟ್ಟಿ ಮಾಡಿಕೋ" "ಕಾಲ ಪುರುಷನ ನಡುವೆ ಯಾವ ಕಲಿಯ ಆಟವೂ ನಡೆಯುವುದಿಲ್ಲ." "ಶಬ್ಧಕ್ಕೆ ಪ್ರತಿಶಬ್ಧ ಬೆಳೆಯಿತು, ವಾದವಾಯಿತು ಇಲ್ಲಿ ಮಾತಾಡುವುದೂ ಅಪರಾಧವಾಯಿತು" ಎಲ್ಲರೂ ಒಂದಲ್ಲ ಒಂದು ದಿನ ಕೈಕೊಟ್ಟು ಹೊರಟು ಹೋಗುವರು" "ಮನದ ಮಾಯದ ಗಾಯ ಎಲ್ಲರೆದುರಿಗೆ ತೆರೆಯಲಾಗದು" "ಒಂದೆರಡು ದಿನ ತಂಗಿದ್ದು ಸೋಲು ಗೆಲುವುಂಡು ಒಂದಿನ ಎದ್ದು ಹೋಗುವುದು ಬದುಕಿನ ಹೂರಣ" ಹೀಗೆ ಹಲವು ಸಾಲುಗಳು ಮನಸ್ಸಿಗೆ ತಟ್ಟುತ್ತವೆ. ಇಲ್ಲಿ ಶಿಷ್ಟ ಕನ್ನಡವನ್ನಲ್ಲದೆ ಗ್ರಾಮ್ಯ ಭಾಷೆಯಲ್ಲೂ ಗಜಲ್ಗಳನ್ನು ರಚಿಸಿರುವುದನ್ನು ನೋಡಬಹುದು. ಅದೂ ಅಲ್ಲದೆ, ಒಂದು ಗಜಲ್ ನಲ್ಲಿ ಪ್ರತಿ ಸಾಲುಗಳಲ್ಲೂ ಎರಡೆರಡೇ ಪದಗಳಲ್ಲಿ ಭಾವಗಳನ್ನು ಹಿಡಿದಿಟ್ಟ ರೀತಿ ಸೋಜಿಗವೆನಿಸುತ್ತದೆ. ಇದು ಲೇಖಕರ ವಿಶಿಷ್ಟ ಪ್ರಯೋಗವೆಂದೇ ಹೇಳಬಹುದು. ಉದಾ: ಗಜಲ್ 19 ನೀರು ನೀನು ನಾನು ನೀನು ಕಣ್ಣು ಕಡಲು ಅಧರ ಜೇನು... ಕನಿಷ್ಟ 6 ಶೇರ್ ಗಳಿಂದ ತೊಡಗಿ 13 ಶೇರ್ ಗಳ ವರೆಗಿನ ಗಜಲ್ ಗಳನ್ನು ರಚಿಸಿರುವರು. ಇಲ್ಲಿ ಸಮ ಮತ್ತು ಬೆಸ ಸಂಖ್ಯೆಗಳ ಗಜಲ್ ಗಳೂ ಇವೆ. ಕೊನೆಯಲ್ಲಿ ಲೇಖಕರು 52 ಶೇರ್ ಗಳ *ಮುಸಲ್ ಸಲ್ ಗಜಲ್* ರಚಿಸಿರುವದಂತೂ ಅದ್ಭುತವಾಗಿದೆ. ನವಿಲಿನ ಕೊನೆಯ ಗರಿಯಲ್ಲಿ ಶ್ರೀದೇವಿ ಕೆರೆಮನೆಯವರ ಅಂತರಂಗದ ಮಾತುಗಳಿವೆ. ಒಟ್ಟಾರೆಯಾಗಿ, ಸಾವಿರ ಕಣ್ಣಿನ ನವಿಲು' ಸಿದ್ದಲಿಂಗ ಪಟ್ಟಣಶೆಟ್ಟಿಯವರು ಹೇಳಿದಂತೆ '"ಮಾಯಾಮೃಗದಂತೆ ಕುಟುಕುತ್ತದೆ,ಜೀವ ಹಿಂಡುತ್ತದೆ." ಚೇತನಾ ಕುಂಬ್ಳೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries