ತಿರುವನಂತಪುರಂ: ಸಕ್ರಿಯ ಮತದಾರರ ಪಟ್ಟಿಯ(ಎಸ್.ಐ.ಆರ್.) ಪರಿಷ್ಕರಣೆಗೆ ಸಂಬಂಧಿಸಿದ ಪ್ರಕ್ರಿಯೆಗೆ ಕೇಂದ್ರ ಚುನಾವಣಾ ಆಯೋಗವು ಗಡುವನ್ನು ವಿಸ್ತರಿಸಿದೆ. ಕೇರಳ ಸೇರಿದಂತೆ 12 ರಾಜ್ಯಗಳಿಗೆ (ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ) ಗಡುವನ್ನು ವಿಸ್ತರಿಸಲಾಗಿದೆ.
ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಹೊರಡಿಸಿದ ಆದೇಶದ ಪ್ರತಿ ಕಭಿಸಿದ್ದು, ಹೊಸ ಆದೇಶದ ಪ್ರಕಾರ, ಫಾರ್ಮ್ ಅನ್ನು ಡಿಸೆಂಬರ್ 11 ರವರೆಗೆ ವಿತರಿಸಬಹುದು.
ಕರಡು ಪಟ್ಟಿಯನ್ನು ಡಿಸೆಂಬರ್ 16 ರಂದು ಪ್ರಕಟಿಸಲಾಗುವುದು. ಫೆಬ್ರವರಿ 14 ರಂದು ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರಿಗೆ ಕಳುಹಿಸಲಾದ ಆದೇಶವನ್ನು ಬಿಡುಗಡೆ ಮಾಡಲಾಗಿದೆ.
ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳು ನಡೆಯುತ್ತಿರುವಾಗÉಸ್.ಐ.ಆರ್. ಪ್ರಕ್ರಿಯೆಯನ್ನು ಮುಂದೂಡಬೇಕೆಂದು ರಾಜಕೀಯ ಪಕ್ಷಗಳು ಮೊದಲಿನಿಂದಲೂ ಒತ್ತಾಯಿಸುತ್ತಿದ್ದವು. ಗಡುವು ವಿಸ್ತರಣೆಯೊಂದಿಗೆ, ಬಿ.ಎಲ್.ಒ.ಗಳಿಗೆ ಫಾರ್ಮ್ ವಿತರಿಸಲು ಒಂದು ವಾರ ಹೆಚ್ಚಿನ ಸಮಯ ಲಭಿಸಲಿದೆ. ಹೊಸ ನಿರ್ಧಾರವು ಬಿಎಲ್‍ಒಗಳಿಗೆ ಹಾಗೂ ಫಾರ್ಮ್‍ಗಳನ್ನು ಭರ್ತಿ ಮಾಡಿ ಸಲ್ಲಿಸುವ ಮತದಾರರಿಗೆ ಪರಿಹಾರವಾಗಲಿದೆ.




