ಕಾಸರಗೋಡು: ರಾಜಾಪುರಂನಲ್ಲಿ ಸ್ನಾನಕ್ಕಾಗಿ ಹೊಳೆಗೆ ಇಳಿದಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾನೆ. ಇಲ್ಲಿನ ಕಾರಕ್ಕೋಡು ನಿವಾಸಿ, ರಾಜಾಪುರಂನ ಖಾಸಗಿ ಕಾಲೇಜೊಂದರ ತೃತೀಯ ವರ್ಷದ ಬಿಎಸ್ಸಿ ಲೈಫ್ ಸಯನ್ಸ್ ವಿದ್ಯಾರ್ಥಿ ವಿ.ಎಂ ಅಶ್ವಿನ್‍ರಾಜ್(20)ಮೃತಪಟ್ಟ ವಿದ್ಯಾರ್ಥಿ.
ಹೊಳೆಯಲ್ಲಿ ಸ್ನಾನ ಮಾಡಿದ ಅಶ್ವಿನ್‍ರಾಜ್ ಮೇಲಕ್ಕೇರಿದ್ದು, ಈ ಸಂದರ್ಭ ತಾನು ಸ್ನಾನಕ್ಕಾಗಿ ತಂದಿದ್ದ ಬಕೆಟ್ ನೀರಿನಲ್ಲಿ ತೇಲಿಹೋಗುತ್ತಿರುವುದನ್ನು ಮೇಲಕ್ಕೆತ್ತಲು ಮತ್ತೆ ಇಳಿದಾಗ ನೀರಿನ ಸೆಳೆತಕ್ಕೆ ಸಿಲುಕಿದ್ದನು. ಜತೆಗಿದ್ದವರು, ಈತನನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಆಸುಪಾಸಿನವರು ಆಗಮಿಸಿ ಅಶ್ವಿನ್‍ರಾಜ್‍ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ಹಾದಿಮಧ್ಯೆ ಸಾವು ಸಂಭವಿಸಿದೆ. ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

