HEALTH TIPS

ಪಿಂಚಣಿದಾರರ ಸಂಘವು ಹಕ್ಕುಗಳಿಗಿಂತ ಸಂಸ್ಕøತಿರಕ್ಷಣೆಯತ್ತ ಗಮನಹರಿಸಬೇಕು-ಸಂಘಟನೆ ರಾಜ್ಯಸಮ್ಮೇಳನದಲ್ಲಿ ಆಗ್ರಹ

ಕಾಸರಗೋಡು: ಪಿಂಚಣಿದಾರರ ಹಕ್ಕುಗಳನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ದೇಶದ ಸಂಸ್ಕೃತಿಯನ್ನು ರಕ್ಷಿಸುವ ಬಗ್ಗೆ ಹೆಚ್ಚಿನ ಒಲವು ತೋರಿಸಲು ಪಿಂಚಣಿದಾರರ ಸಂಘಟನೆ ಬದ್ಧವಾಘಿರಬೇಕುಎಂದು  ಎಂದು  ಪಿಂಚಣಿದಾರರ ಸಂಘಕ್ಕೆ ಆದ್ಯತೆ ನೀಡಬೇಕು ಎಂದು ಬಿಎಂಎಸ್ ರಾಜ್ಯಧ್ಯಕ್ಷ ಅಧ್ಯಕ್ಷ ಬಿ.ಶಿವಾಜಿ ಸುದರ್ಶನ್ ಹೇಳಿದರು.  


ಅವರು ಕಾಸರಗೋಡು ನಗರಸಭೆಯ ಟೌನ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ 28ನೇ ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.   ಕೇರಳದಲ್ಲಿ ಫ್ಯಾಸಿಸ್ಟ್ ಮುಖವಾಡ ಹೊಂದಿರುವ ಆಡಳಿತ ಪಕ್ಷದ ವಿರುದ್ಧ, ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ರಾಜ್ಯಾಧ್ಯಕ್ಷ ಬಿ.ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಭಟ್ ಮುಖ್ಯ ಭಾಷಣ ಮಾಡಿದರು. 

ಎ¥ಫ್‍ಇಟಿಒ. ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಮಹಾದೇವ್, ಎನ್‍ಟಿಯು ರಾಜ್ಯ ಉಪಾಧ್ಯಕ್ಷ ಕೆ. ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಜಯಭಾನು. ಪಿ. ಸ್ವಾಗತಿಸಿದರು. ಸಾಂಸ್ಕøತಿಕ ಸಭೆಯಲ್ಲಿ, ಆರ್‍ಎಸ್‍ಎಸ್. ಎಸ್.

ಕ್ಷೇತ್ರೀಯ ಸಹ ಬೌದ್ಧಿಕ್ ಪ್ರಮುಖ್ ಕೆ. ಪಿ. ರಾಧಾಕೃಷ್ಣನ್ ಅವರು ಸಾಮಾಜಿಕ ಪರಿವರ್ತನೆಯಲ್ಲಿ ಪಿಂಚಣಿದಾರರ ಪಾತ್ರದ ಕುರಿತು ಭಾಷಣ ಮಾಡಿದರು. ಪ್ರತಿನಿಧಿ ಸಭೆಯಲ್ಲಿ, ರಾಜ್ಯ ಉಪಾಧ್ಯಕ್ಷ ಪಿ. ಎನ್. ಬಾಲಕೃಷ್ಣನ್ ಮುಖ್ಯ ಮಾತುಗಳನ್ನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಚಟುವಟಿಕಾ ವರದಿಯನ್ನು  ಆದಾಯ ಮತ್ತು ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದರು. ರಾಜ್ಯ ಉಪಾಧ್ಯಕ್ಷ ಸಿ. ಸುರೇಶ್ ಕುಮಾರ್ ಸಂಘಟನಾ ನಿರ್ಣಯವನ್ನು ಮಂಡಿಸಿದರು. ರಾಜ್ಯ ಕಾರ್ಯದರ್ಶಿ ಕೆ. ಎನ್. ವಿನೋದ್ ಇತರ ನಿರ್ಣಯಗಳನ್ನು ಮಂಡಿಸಿದರು.   

ಈ ಸಂದರ್ಭ ಸಂಘಟನೆ  ಪದಾಧಿಕಾರಿಗಳ ಆಯ್ಕೆ ನಡೆಯಿತು. ಬಿ. ಜಯಪ್ರಕಾಶ್ ಅಧ್ಯಕ್ಷ, ವಕೀಲ ಜಯಭಾನು.ಪಿ ಪ್ರಧಾನ ಕಾರ್ಯದರ್ಶಿ ಮತ್ತು ಜಿ. ಗೋಪಕುಮಾರ್ ಕೋಶಾಧಿಕಾರಿ ಹಾಗೂ ಇತರ 44ಮಂದಿ  ಸದಸ್ಯರ ಆಡಳಿತ ಸಮಿತಿಯನ್ನು ಆಯ್ಕೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಬಿಎಂಎಸ್ ರಾಷ್ಟ್ರೀಯ ಸಮಿತಿ ಸದಸ್ಯೆ, ವಕೀಲೆ ಆಶಾಮೋಳ್ ಸಮಾರಂಭ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ ಬಿ.ಜಯ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ಜಯಭಾನು.ಪಿ ಸ್ವಾಗತಿಸಿದರು.  ಕಾಸರಗೋಡು ಜಿಲ್ಲಾಧ್ಯಕ್ಷ ಬಿ. ನಾಗರಾಜ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries