ಬದಿಯಡ್ಕ: ತ್ರಿಸ್ತರ ಪಂಚಾಯಿತಿ ಚುನಾವಣೆಯ ಭಾಗವಾಗಿ ಬದಿಯಡ್ಕ ಗ್ರಾಮಪಂಚಾಯಿತಿ ಬಿಜೆಪಿ ಅಭ್ಯರ್ಥಿಗಳು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರನ್ನು ಕಿಳಿಂಗಾರು ಸಾಯಿಮಂದಿರದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಬಾಲಕೃಷ್ಣ ಶೆಟ್ಟಿ ಕಡಾರು, ಅಶ್ವಿನಿ ಮೊಳೆಯಾರು, ಶಂಕರ ಡಿ., ಶ್ಯಾಮಪ್ರಸಾದ ಸರಳಿ, ಹರೀಶ ಕಿಳಿಂಗಾರು, ಕಾಸರಗೋಡು ಬ್ಲಾಕ್ ಪಂಚಾಯಿತಿ ನೀರ್ಚಾಲು ಡಿವಿಶನ್ ಅಭ್ಯರ್ಥಿ ಮಹೇಶ್ ವಳಕ್ಕುಂಜ, ಕಾಸರಗೋಡು ಜಿಲ್ಲಾ ಪಂಚಾಯತಿ ಪುತ್ತಿಗೆ ಡಿವಿಶನ್ ಅಭ್ಯರ್ಥಿ ಮಣಿಕಂಠ ರೈ ಪಟ್ಲ ಜೊತೆಗಿದ್ದರು.




.jpg)
