ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಜಿಲ್ಲೆಯ ಅತ್ಯಂತ ಹಿರಿಯ ಮತದಾರರೊಬ್ಬರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಪನತ್ತಡಿ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡಿನ ಕೊಯತ್ತಡ್ಕ ನಿವಾಸಿ 105ರ ಹರೆಯದ ವೆಂಕಪ್ಪ ನಾಯ್ಕ್ ಜಿಲ್ಲೆಯ ಅತ್ಯಂತ ಹಿರಿಯ ಮತದಾರರಾಗಿದ್ದಾರೆ. ವೆಂಕಪ್ಪ ನಾಯ್ಕ್ ಅವರು ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಮತ ಚಲಾಯಿಸಲಿದ್ದಾರೆ. ವೃದ್ಧಾಪ್ಯ ಸಹಜ ಕೆಲವೊಂದು ದೈಹಿಕ ಅನಾರೋಗ್ಯದ ನಡುವೆಯೂ ಮತದಾನದ ಉತ್ಸಾಹ ಇವರಲ್ಲಿ ಕಡಿಮೆಯಾಗಿಲ್ಲ. ತಮ್ಮ ಪುತ್ರನ ಜತೆ ವೆಂಕಪ್ಪ ನಾಯ್ಕ ಅವರು ಪನತ್ತಡಿ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡ್‍ನಲ್ಲಿರುವ ಕೊಯತ್ತಡ್ಕದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ಮನೆಯಿಂದಲೇತಮ್ಮ ಹಕ್ಕು ಚಲಾಯಿಸಿದ್ದರು.
ಕಳೆದ ಚುನಾವಣೆಯ ಸಂದರ್ಭ ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಅವರು ವೆಂಕಪ್ಪ ನಾಯ್ಕ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಿದ್ದರು.





