ಬದಿಯಡ್ಕ: ಬೆಂಗಳೂರು ಹಿಂದು ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿರುವ ಕನ್ನೆಪ್ಪಾಡಿ ಆಶ್ರಯ ಸೇವಾಶ್ರಮಕ್ಕೆ ಬ್ಯಾಂಕ್ ಆಫ್ ಬರೋಡದ ವತಿಯಿಂದ ಸ್ಥಾಪನಾ ದಿನದ ಅಂಗವಾಗಿ ವಿವಿಧ ವಸ್ತುಗಳನ್ನು ನೀಡಲಾಯಿತು.
ಬ್ಯಾಂಕ್‍ನ 112ನೇ ಸಂಸ್ಥಾಪನಾ ದಿನದ ಪ್ರಯುಕ್ತ ಬದಿಯಡ್ಕ ಶಾಖೆಯ ಮುಖ್ಯ ಪ್ರಬಂಧಕ ರಾಮಚಂದ್ರ ಪ್ರಸಾದ್ ಹಾಗು ಸಿಬ್ಬಂದಿ ವರ್ಗದವರು ಬ್ಯಾಂಕ್‍ನ ಸಿಎಸ್‍ಆರ್ ಫಂಡ್‍ನ ಮೂಲಕ 4 ಟೇಬಲ್ ಪ್ಯಾನ್, ಊಟದ ಅಕ್ಕಿ, ಅಡುಗೆ ಎಣ್ಣೆ ಹಾಗೂ ಇನ್ನಿತರ ನಿತ್ಯೋಪಯೋಗಿ ವಸ್ತುಗಳನ್ನು ನೀಡುವ ಮೂಲಕ ಮಾದರಿಯಾದರು. ಆಶ್ರಮದಲ್ಲಿರುವ ಹಿರಿಯ ಚೇತನಗಳಿಗೆ ಉಪಯುಕ್ತವಾಗುವಂತಹ ಸಾಮಾಗ್ರಿಗಳನ್ನು ಟ್ರಸ್ಟ್‍ನ ಗಣೇಶ ಕೃಷ್ಣ ಅಳಕ್ಕೆ ಮತ್ತು ಆಶ್ರಯದ ವ್ಯವಸ್ಥಾಪನಾ ಪ್ರಮುಖ ರಮೇಶ್ ಅವರು ಪಡೆದುಕೊಂಡರು.