ಬೆಂಗಳೂರು: ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಈ ಹಣಕಾಸು ವರ್ಷದಲ್ಲಿ 18,000 ಮಂದಿಯನ್ನು ಕ್ಯಾಂಪಸ್ ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಿದೆ.
2.29 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಇನ್ನೂ ಸಾಕಷ್ಟು ಒತ್ತಡದಲ್ಲಿದೆ. ಆದರೂ ಇದು ತನ್ನ ಸೇವೆಗಳ ಪೂರೈಕೆ ಮೇಲೆ ಯಾವ ಪರಿಣಾಮ ಬೀರಿಲ್ಲ ಎಂದು ಕಂಪನಿ ಪ್ರತಿಪಾದಿಸಿದೆ.
ಈ ತ್ರೈಮಾಸಿಕದಲ್ಲಿ ಒಟ್ಟಾರೆ ಸುಮಾರು 8,000 ಜನರನ್ನು ನೇಮಕ ಮಾಡಿಕೊಂಡಿದ್ದೇವೆ, ಅದರಲ್ಲಿ 2,500 ಮಂದಿ ಹೊಸಬರು(ಫ್ರೆಶರ್‍ಗಳು). ಈ ವರ್ಷ ನಾವು ಸುಮಾರು 18,000 ಜನರನ್ನು ದೇಶಾದ್ಯಂತದ ವಿಶ್ವವಿದ್ಯಾಲಯಗಳಿಂದ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ" ಇನ್ಫೋಸಿಸ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ.
ಜೂನ್ 2019 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ 906 ಜನರನ್ನು ಸೇರ್ಪಡೆ ಮಾಡಿಕೊಂಡಿದೆ.ಮಾರ್ಚ್ 2019 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 20.4 ಕ್ಕೆ ಹೋಲಿಸಿದರೆ ಇದೀಗ ಶೇ. 23.4 ರಷ್ಟು ಏರಿಕೆಯಾಗಿದೆ.


