ಬೆಂಗಳೂರು: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಚಂದ್ರಯಾನ-2 ಉಡ್ಡಯನವನ್ನು ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಿನ್ನೆ ಮುಂಜಾನೆ 2.51ರಲ್ಲಿ ಚಂದ್ರಯಾನ ಉಡ್ಡಯನ ನಡೆಯಬೇಕಿತ್ತು. ಆದರೆ, ಅದಕ್ಕೂ 56 ನಿಮಿಷಗಳ ಮುಂಚಿತವಾಗಿ 978 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ರದ್ದುಗೊಳ್ಳಿಸಲಾಯಿತು.
ಕವಾಟದಲ್ಲಿನ ಇಂಧನ ಸೋರಿಕೆಯೇ ಉಡಾವಣೆಯ ಮುಂದೂಡಿಕೆಗೆ ಕಾರಣ ಎಂದು ಊಹಿಸಲಾಗಿದೆ. ಆದರೆ, ಇದನ್ನು ಪರಿಶೀಲಿಸಲಾಗುತ್ತಿದೆ. ಉಡ್ಡಯನಕ್ಕೂ ಮುಂಚಿನ 56 ನಿಮಿಷಗಳಲ್ಲಿ ಉಡಾವಣಾ ವಾಹಕದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಚಂದ್ರಯಾನ-2 ಉಡಾವಣೆಯನ್ನು ನಿಲ್ಲಿಸಲಾಗಿದೆ. ಪರಿಷ್ಕೃತ ಉಡಾವಣಾ ದಿನಾಂಕವನ್ನು ತದನಂತರ ಪ್ರಕಟಿಸಲಾಗುವುದು ಎಂದು ಇಸ್ರೋ ವಕ್ತಾರರು ತಿಳಿಸಿದ್ದಾರೆ.
A technical snag was observed in launch vehicle system at 1 hour before the launch. As a measure of abundant precaution, #Chandrayaan2 launch has been called off for today. Revised launch date will be announced later.
ತಾಂತ್ರಿಕ ದೋಷವೇ ಉಡಾವಣೆ ಮುಂದೂಡಿಕೆ ಕಾರಣ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಮುಂದಿನ ದಿನಾಂಕವನ್ನು ಘೋಷಿಸಿಲ್ಲ. ಜುಲೈ 16 ರಂದು ಉಡಾವಣೆ ನಡೆಯುವ ಸಾಧ್ಯತೆ ಇಲ್ಲ. ಯಾವ ದಿನಾಂಕದಿಂದ ಉಡಾವಣೆ ಮಾಡಬಹುದೆಂದು ಇಸ್ರೋ ವಿ ಜ್ಞಾ ನಿಗಳು ಲೆಕ್ಕಾಚಾರ ಮಾಡುತ್ತಿದ್ದಾರೆ. ಜುಲೈ 9 ಮತ್ತು 16 ರ ನಡುವಿನ ಅವಧಿಯಲ್ಲಿ ಉಡಾವಣೆ ಮಾಡಲು ಇಸ್ರೋ ಈ ಹಿಂದೆ ನಿರ್ಧರಿಸಿತ್ತು.
ಚಂದ್ರಯಾನ- 2 ಉಡಾವಣೆಯಿಂದ ಸೆಪ್ಟೆಂಬರ್ 6 ರಂದು ಚಂದ್ರನ ಮೈಲ್ಮೆ ಮೇಲೆ ರಾಕೆಟ್ ಇಳಿಸಲು ಚಿಂತಿಸಲಾಗಿತ್ತು. ಆದರೆ, ತಾಂತ್ರಿಕ ದೋಷದಿಂದ ಈಗ ಮುಂದೂಡಲಾಗಿದೆ.



