ಮುಳ್ಳೇರಿಯ: ಮಳೆನೀರನ್ನು ಸಂರಕ್ಷಿಸಿ, ಭೂಮಿಯಡಿ ತಂಗುವಂತೆ ಮಾಡಿ ಭೂಗರ್ಭಜಲ ಸಂರಕ್ಷಿಸುವ ನಿಟ್ಟಿನಲ್ಲಿ ಆದೂರಿನ ಕೊಯಕೂಡ್ಲು ಕೆರೆ ಒಂದು ಮಾದರಿಯಾಗಿದೆ.
ಕಾರಡ್ಕ ಗ್ರಾಮಪಂಚಾಯತಿ ಹತ್ತನೇ ವಾರ್ಡ್ ಆಗಿರುವ ಆದೂರಿನಲ್ಲಿ ಈ ಕೆರೆಯಿದೆ. 8 ವರ್ಷಗಳ ಹಿಂದೆ ಈ ಕರೆಯನ್ನು ನಿರ್ಮಿಸಲಾಗಿತ್ತು. 7 ತಿಂಗಳ ಹಿಂದೆ ಬದಿಯ ಮಣ್ಣು ಜರಿದು ಕೆರೆ ವಿನಶದ ಅಂಚಿನಲ್ಲಿತ್ತು. 2018 ಡಿಸೆಂಬರ್ ತಿಂಗಳಲ್ಲಿ ಈ ಕರೆಯ ನವೀಕರಣ ನಡೆಸಲಾಗಿತ್ತು. ಕರೆಯ ಸುತ್ತಲೂ ತೆಂಗಿನನಾರಿನ ಭೂಹಾಸು ನಿರ್ಮಿಸಲಾಗಿತ್ತು. ಇದರಿಂದ ಭದ್ರತೆಯ ಜೊತೆಗೆ ಕೆರೆ ಒಂದು ಉತ್ತಮ ಮಳೆನೀರಿನ ಸಂಗ್ರಹಾಗಾರವೂ ಆಗಿ ಮರ್ಪಟ್ಟಿತ್ತು. ನವೀಕರಣ ವೇಳೆ ಕಾರಡ್ಕ ಗ್ರಾಮಪಂಚಾಯತ್ ಗೆ ಕಾರಡ್ಕ ಬ್ಲಾಕ್ ಪಂಚಾಯತಿ ಹೆಗಲು ನೀಡಿತ್ತು.
ಮಹಾತ್ಮಾಗಾಂಧಿ ರಾಷ್ಟ್ರೀಯ ನೌಕರಿ ಕಾತರಿ ಯೋಜನೆಯಲ್ಲಿ ಅಳವಡಿಸಿ ಕರೆಯ ನವೀಕರಣ ನಡೆಸಲಾಗಿದೆ. ಭೂಹಾಸು ಸಹಿತ ನವೀಕರಣಕ್ಕೆ 2 ಲಕ್ಷರೂ. ವೆಚ್ಚ ತಗುಲಿದೆ. ಈ ಮೂಲಕ ಕೆರೆಯ ಬದಿ ಕುಸಿಯುವ ಭೀತಿಗೆ ಶಾಶ್ವತ ಪರಿಹಾರವಾಗಿದೆ.
ಕೆರೆಯಲ್ಲಿ ನೀರಿನ ಪರಿಪಾಲನೆ ಉತ್ತಮರೀತಿ ನಡೆಯುತ್ತಿದೆ. ಮಳೆನೀರನ್ನು ಭೂಮಿಯಡಿ ಇಂಗುವಂತೆ ಮಾಡಲೂ ಇಲ್ಲಿ ಪೂರಕ ಸ್ಥಿತಿಯಿದೆ. ಇದರ ಪರಿಣಾಮ ಆಸುಪಾಸಿನ ಪ್ರದೇಶಗಳ ಬಾಇ ಸಹಿತ ಜಲಾಶಯಗಳಲ್ಲಿ ನೀರಿನಮಟ್ಟ ಸುಧಾರಿತಗೊಂಡಿದೆ. ಕೆರೆಯ ಸುತ್ತಲೂ 900 ಮನೆಗಳಿವೆ. ಇವರಿಗೆಲ್ಲ ಈ ಕೆರೆ ಆಸರೆಯಾಗಿದೆ. ಕಡು ಬೇಸಗೆಯಲ್ಲೂ ಕೃಷಿಗಾಗಿ ಕೆರೆಯ ನೀರು ಬಳಸಲಾಗುತ್ತಿದೆ.


