ನಮ್ಮ ದೇಶದ ಸಂಸ್ಕøತಿ ಸಂಸ್ಕಾರವನ್ನು ಉಳಿಸಲು ಸಂಘಟಿತರಾಗಬೇಕು : ಶರಣ್ ಪಂಪ್‍ವೆಲ್
ಬದಿಯಡ್ಕ: ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಮಾತೃಮಂಡಳಿಯ ಬದಿಯಡ್ಕ ಪ್ರಖಂಡ ಕಾರ್ಯಕರ್ತರ ಸಮಾವೇಶವು ಭಾನುವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿತು.
ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಸಮಾವೇಶವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, 33 ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹಿಂದುಗಳ ಮೇಲೆ ನಿರಂತವಾಗಿ ಆಕ್ರಮಣಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ನಾವೆಲ್ಲ ಎಚ್ಚೆತ್ತುಕೊಂಡು ನಮ್ಮ ದೇಶದ ಸಂಸ್ಕøತಿ, ಸಂಸ್ಕಾರವನ್ನು ಉಳಿಸಿಕೊಂಡು ನಮ್ಮ ಭೂಮಿಯನ್ನು ಹಾಗೂ ಸಹೋದರಿಯರನ್ನು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಭಜರಂಗದಳ ಕರ್ನಾಟಕ ರಾಜ್ಯ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಇಂದು ನಮ್ಮ ದೇಶವು ಗುರುತಿಸಲ್ಪಡುತ್ತಿರುವುದು ಭಾರತದ ಪ್ರತಿಯೊಬ್ಬ ಪ್ರಜೆಗೂ ಹೆಮ್ಮೆಯ ವಿಚಾರವಾಗಿದೆ. ಭಾರತವು ವಿಶ್ವಗುರುವಿನ ಸ್ಥಾನದತ್ತ ಮುನ್ನಡೆಯುತ್ತಿದೆ. ಅನ್ಯಮತೀಯರು ನಮ್ಮ ಸಂಸ್ಕøತಿ, ಸಂಸ್ಕಾರದ ಮೇಲೆ ಸವಾರಿಮಾಡುತ್ತಿರುವುದನ್ನು ನಾವು ಎದುರಿಸಲೇಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಒಂದುಗೂಡಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಬದಿಯಡ್ಕ ಪ್ರಖಂಡ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು ಅಧ್ಯಕ್ಷತೆ ವಹಿಸಿದರು. ವಿಹಿಂಪ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ, ಕಾರ್ಯದರ್ಶಿ ಉಳುವಾನ ಶಂಕರ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾರ್ಯವಾಹ ಗುಣಾಜೆ ಶಿವಶಂಕರ ಭಟ್, ಗೋಪಾಲಶೆಟ್ಟಿ ಅರಿಬೈಲ್, ಸುರೇಶ್ ಶೆಟ್ಟಿ ಪರಂಕಿಲ, ಸಂಕಪ್ಪ ಭಂಡಾರಿ, ಮಾತೃಮಂಡಳಿ ಅಧ್ಯಕ್ಷೆ ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು. ಹರೀಶ್ ರೈ ಪುತ್ರಕಳ ಸ್ವಾಗತಿಸಿ, ಸುನಿಲ್ ಕಿನ್ನಿಮಾಣಿ ವಂದಿಸಿದರು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.


