HEALTH TIPS

ರಂಗಸಿರಿ ದಶಮ ಸಂಭ್ರಮದ ಉಚಿತ ಯಕ್ಷಗಾನ ತರಗತಿಗೆ ಅರ್ಜಿ ಆಹ್ವಾನ


      ಬದಿಯಡ್ಕ: ನಾಡಿನಾಂದ್ಯಂತ ನಮ್ಮ ಭಾಷೆ,ಕಲೆ,ಸಂಸ್ಕøತಿಯ ಚಟುವಟಿಕೆಗಳಿಂದ ಉತ್ತಮ ಹೆಸರು ಪಡೆದಿರುವ ರಂಗಸಿರಿ ಸಾಂಸ್ಕøತಿಕ ವೇದಿಕೆಯು ಕಳೆದ ಹತ್ತು ವರ್ಷಗಳಿಂದ ಯಕ್ಷಗಾನ ನಾಟ್ಯ, ಹಿಮ್ಮೇಳ, ಶಾಸ್ತ್ರೀಯ, ಸುಗಮ ಸಂಗೀತ ತರಗತಿಗಳನ್ನು ನಡೆಸುತ್ತಾ ಬಂದಿದೆ. ಅಲ್ಲದೆ ಕಾರ್ಯಾಗಾರ, ಬೇಸಿಗೆ ಶಿಬಿರ, ಯಕ್ಷಗಾನ ರಂಗದ ಪ್ರಥಮ ಪ್ರಯೋಗ 'ಹಣತೆ ಬೆಳಕಿನ ತಾಳಮದ್ದಳೆ', ಸಾರ್ವಜನಿಕ ಬಲೀಂದ್ರ ಪರ್ಬ ಇತ್ಯಾದಿ ಚಟುವಟಿಕೆಗಳಿಂದ ಸಾಂಸ್ಕøತಿಕ ರಂಗದಲ್ಲಿ ಗುರುತಿಸಲ್ಪಟ್ಟಿದೆ. ಸಂಸ್ಥೆಯ ವಿದ್ಯಾರ್ಥಿಗಳ ತಂಡ ನಿರಂತರವಾಗಿ ಕರ್ನಾಟಕ, ಕೇರಳ ರಾಜ್ಯದ ವಿವಿಧೆಡೆಗಳಲ್ಲಿ ಮಾತ್ರವಲ್ಲ ತಮಿಳುನಾಡಿನ ಕೊಯಂಬತ್ತೂರಲ್ಲೂ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಮೆಚ್ಚುಗೆಗಳಿಸಿದೆ. ರಂಗಸಿರಿಯು  ಈ ವರ್ಷ ದಶಮಾನೋತ್ಸವದ ಸಂಭ್ರಮದಲ್ಲಿದೆ. ಅದನ್ನು ಅವಿಸ್ಮರಣೀಯವಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಿದೆ.
           ದಶಮಾನೋತ್ಸವ ಸಂಭ್ರಮದ ರಂಗಸಿರಿ ಸಾಂಸ್ಕøತಿಕ ವೇದಿಕೆಯು ಬದಿಯಡ್ಕದಲ್ಲಿ ಈ ವರ್ಷ ಉಚಿತ ಯಕ್ಷಗಾನ ತರಗತಿಗಳನ್ನು ನಡೆಸಲಿದೆ. ಅದಕ್ಕಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಕಾರದೊಂದಿಗೆ ತರಗತಿಗಳು ನಡೆಯಲಿವೆ. ತರಗತಿಗಳಿಗೆ ಸೇರಲಿಚ್ಛಿಸುವವರು ಈ ಕೆಳಗಿನ ಸೂಚನೆಗಳನ್ನು ಗಮನಿಸಿ ತಮ್ಮ ಹೆಸರನ್ನು ಜುಲೈ 29ರೊಳಗಾಗಿ ನೋಂದಾಯಿಸಬೇಕಾಗಿ ವಿನಂತಿ.
                     ಸೂಚನೆಗಳು:
    ತರಗತಿಗೆ ಸೇರಲು ಯಾವುದೇ ವಯೋಮಾನ, ಜಾತಿ, ಧರ್ಮ, ಲಿಂಗ ಇತ್ಯಾದಿ ಮಿತಿಗಳಿಲ್ಲ.
ಪ್ರತೀ ವಾರ ಶನಿವಾರ ಸಂಜೆ ತರಗತಿಗಳಿರಲಿವೆ.
ತರಗತಿಗೆ 30 ಮಂದಿಗೆ ಅವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ.
ಆಸಕ್ತರು ತಮ್ಮ ಹೆಸರು,ವಯಸ್ಸು,ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಅಂಚೆ, ಈಮೈಲ್ ಅಥವಾ ವಾಟ್ಸಾಪ್ ಮೂಲಕ 29/7/2019ರೊಳಗೆ ಕಳುಹಿಸಿ ನೋಂದಾಯಿಸಿಕೊಳ್ಳಬೇಕು.
ವಿಳಾಸ: ಅಧ್ಯಕ್ಷರು, ರಂಗಸಿರಿ ಸಾಂಸ್ಕøತಿಕ ವೇದಿಕೆ(ರಿ) ಬದಿಯಡ್ಕ, ಅ/o ಶ್ರೀಶ ಕುಮಾರ, ಪಂಜಿತ್ತಡ್ಕ, ಪೆರಡಾಲ ಅಂಚೆ, ಕಾಸರಗೋಡು-671551
ವಾಟ್ಸಾಪ್: 9633876833 ;  Email: rangasirivedike@gmail.com
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries