ಮಂಜೇಶ್ವರ: ಜಾನಪದ ಸಂಸ್ಕøತಿ ಸಂವರ್ಧನೆಗೆ ಉತ್ತು ನೀಡದಿದ್ದಲ್ಲಿ ಭವಿಷ್ಯದ ತಲೆಮಾರಿಗೆ ಅಪಾಯವಿದೆ. ತುಳು ಭಾಷೆ, ಸಂಸ್ಕøತಿಯೊಂದಿಗೆ ಹೆಜ್ಜೆಹಾಕಿ ಬೆಳೆದುಬಂದ ಕನ್ನಡ ನಾಡು-ನುಡಿ ತೌಳವ-ಕನ್ನಡ ಸಮಾಗಮವಾಗಿ ವಿಶಿಷ್ಟವೆನಿಸಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಘಟಕ ಮತ್ತು ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಪಾವಳ ಪೈವಳಿಕೆ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ವರ್ಕಾಡಿಯ ಸೈಂಟ್ ಜೋಸೆಫ್ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಟಿಟೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡು ಕಾಸರಗೋಡಿನ ಬಹುಭಾಷೆ, ಸಂಸ್ಕøತಿಯ ನೆಲದಲ್ಲಿ ಪರಸ್ಪರ ಸೌಹಾರ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಜಾನಪದ ಪರಿಷತ್ತಿನ ಕಾರ್ಯಚಟುವಟಿಕೆಗಳು ಗಮನಾರ್ಹವಾಗಿದೆ ಎಂದು ತಿಳಿಸಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಹುಮುಖದ ಕಾರ್ಯಚಟುವಟಿಕೆಗಳ ಸ್ವಾವಲಂಬನೆ, ನೈತಿಕ ಶಿಕ್ಷಣ, ಪಿಡುಗುಗಳ ವಿರುದ್ದ ಜಾಗೃತಿ, ಅಜೀರ್ಣ ಆರಾಧನಾಲಯಗಳ ಪುನರುಜ್ಜೀವನ ಮೊದಲಾದ ಅಸಾಧ್ಯ ಸಾಧನೆಗಳಿಂದ ಸಮಾಜವನ್ನು ಕಟ್ಟಿಬೆಳೆಸುತ್ತಿರುವುದು ಈ ಕಾಲದ ಜನರ ಸುಯೋಗ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ, ಗಡಿನಾಡು ಕಾಸರಗೋಡಿನ ಸಾಹಿತ್ಯ, ಜಾನಪದ, ಸಾಮಾಜಿಕ ಸೇವೆಗಳು ಔನ್ನತ್ಯದಿಂದ ಇತರೆಡೆಗಳಿಗೆ ಮಾದರಿಯಾದುದು. ಬಹುಭಾಷೆ, ಸಂಸ್ಕøತಿಗಳ ನೆಲೆವೀಡಾಗಿ ಏಕತೆಯಿಂದ ಮುನ್ನಡೆಯುತ್ತಿರುವ ಜನಸಾಮಾನ್ಯರ ಕೊಡುಗೆಗಳು ಅಪರಿಮಿತವಾದುದು ಎಂದು ತಿಳಿಸಿದರು.
ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲೆಯ ಯೋಜನಾ ನಿರ್ದೇಶಕ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದಕಾರ್ಯಕ್ರಮದಲ್ಲಿ ವಿಶೇಷಾಹ್ವಾನಿತರಾಗಿ ಪಾಲ್ಗೊಂಡಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್.ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಭಾರತೀಯ ಪರಂಪರೆಯ ಸಾವಿರಾರು ವರ್ಷಗಳ ಆಚರಣೆ-ನಂಬಿಕೆಗಳನ್ನು ಬೆಳೆಸಿ ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ತಿಳಿಸಿದರು. ಪ್ರಕೃತಿಯೊಂದಿಗಿನ ಹೆಜ್ಜೆ ಸಂಸ್ಕøತಿಯಾಗಿದ್ದು, ಪ್ರಕೃತಿಯ ವಿರುದ್ದ ನಡೆ ವಿಕೃತಿಯಾಗುತ್ತದೆ. ಆಧುನಿಕ ಬದುಕಿಗೆತೆರೆದುಕೊಂಡಿರುವ ನಮ್ಮಲ್ಲಿ ಪರಂಪರೆ ಸಾಗಿಬಂದ ಪ್ರಕೃತಿಯೊಂದಿಗಿನ ಬದುಕು ಅಸಹ್ಯವಾಗದಿರಲಿ ಎಂದು ಕರೆನೀಡಿದರು. ಪರಂಪರೆ, ಸಂಸ್ಕøತಿಗಳಂತಹ ಜೀವನ ಮೌಲ್ಯಗಳು ಬದುಕನ್ನು ಸುಂದರಗೊಳಿಸುತ್ತದೆ.ಅದರ ಮರೆವು ದುಃಖಕ್ಕೆ ಕಾರಣವಾಗುತ್ತದೆ. ಯುವ ತಲೆಮಾರಿಗೆ ಒಳಿತಿನ ಪಾಠವನ್ನು ನೀಡೋಣ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಘ್, ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಯಕ್ಷದ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಜನಜಾಗೃತಿ ವೇದಿಕೆಯ ಹರೀಶ್ ಕಡಂಬಾರ್, ಶಂಕರ ಭಂಡಾರಿ, ಜಹೀರ್ ಅಹಮ್ಮದ್ ಬೆಳಪು, ರೋಟರಿ ಕ್ಲಬ್ ಅಧ್ಯಕ್ಷಸುನಿಲ್ ಶಿರ್ವ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಎಸ್.ವಿ.ಕರ್ಕೇರ, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ, ಜಾನಪದ ಪರಿಷತ್ತಿನ ಸಲಹೆಗಾರ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕುಂಬಳೆ ಸೀಮೆಯ ಪ್ರಧಾನ ದೈವನರ್ತಕ ಡಾ.ರವೀಶ ಪರವ ಪಡುಮಲೆ, ಸಮಾಜ ಸೇವಕ ಮೊಹಮ್ಮದ್ ಫಾರೂಕ್ ಚಂದ್ರನಗರ ಅವರನ್ನು ವಿಶೇಷ ಸೇವೆಗಳನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಕುನ್ನಿಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಪಕ್ರುದ್ದೀನ್ ಕುನ್ನಿಲ್ ಹಾಗೂ ಎಂ.ಫಿಲ್ ಪದವಿ ಪಡೆದ ಜಿಲ್ಲೆಯ ಕೊರಗ ಜನಾಂಗದ ಮಹಿಳೆ ಮೀನಾಕ್ಷಿ ಬೊಡ್ಡೋಡಿ ಅವರನ್ನೂ ಗೌರವಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ.ಸ್ವಾಗತಿಸಿ, ಜಾನಪದ ಪರಿಷತ್ತಿನ ಸಲಹೆಗಾರ ಪ್ರೊ.ಎ.ಶ್ರೀನಾಥ್ ವಂದಿಸಿದರು. ಕೋಶಾಧಿಕಾರಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ನಗುಮುಗಂ, ಶ್ರೀಕಾಂತ್ ನೆಟ್ಟಣಿಗೆ, ವಿದ್ಯಾಗಣೇಶ್ ಅಣಂಗೂರು, ಸಂಧ್ಯಾಗೀತ ಬಾಯಾರು ಮೊದಲಾದವರು ಸಹಕರಿಸಿದರು.
ಬಳಿಕಸ್ವಸಹಾಯ ಸಂಘಗಳ ಸದಸ್ಯೆಯರಿಂದ ವಿವಿಧ ಸಾಂಸ್ಕøತಿಕ ವೈವಿಧ್ಯಗಳು ನಡೆಯಿತು.
ಕಳಂಜನ ಆಗಮನ:
ಕಾರ್ಯಕ್ರಮದ ಉದ್ಘಾಟನೆಯ ವೇಳೆ ಆಟಿಕಳಂಜ ಆಗಮಿಸಿ ಪಾಡ್ದನ ಕುಣಿತಗಳ ಮೂಲಕ ಸಾಂಪ್ರದಾಯಿಕ ಚಾಲನೆ ನೀಡಲಾಯಿತು.ಬಾಬು ಮೀಯಪದವು ಮತ್ತು ನಾರಾಯಣ ಅವರು ಆಟಿಕಳಂಜ ವೇಶಧಾರಿಯಾಗಿ ವೇದಿಕೆಗೆ ಆಗಮಿಸಿ ಸಾಂಪ್ರದಾಯಿಕವಾಗಿ ಡೊಲು ಬಡಿದು ಕಣಿಸಲಾಯಿತು. ಈ ಸಂದರ್ಭ ಬಾಲಕೃಷ್ಣ ನಾಯ್ಕ-ಗೀತಾ ದಂಪತಿಗಳು ಗೆರಸೆಯಲ್ಲಿ ಆಟಿಯ ತಿಂಡಿ-ಪದಾರ್ಥಗಳನ್ನು ನೀಡಿ ಆಟಿಕಳಂಜನನ್ನು ಬೀಳ್ಕೊಟ್ಟರು.
107 ಬಗೆಯ ಆಟಿ ತಿನಸುಗಳು:
ಕಾರ್ಯಕ್ರಮದಲ್ಲಿ ಯೋಜನೆಯ ಸ್ವಸಹಾಯ ಸಂಘಗಳು ತಯಾರಿಸಿದ 107 ಬಗೆಯ ಆಟಿ ತಿನಸುಗಳ ಪ್ರದರ್ಶನ ಗಮನ ಸೆಳೆಯಿತು. ಉಪ್ಪಡ್ ಪಚ್ಚಿಲ್, ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಗಾರಿಕೆ, ಗಟ್ಟಿ, ಹಪ್ಪಳ, ಹಲಸಿನ ಬೀಜದ ಚಟ್ನಿ, ಪಲ್ಯ, ಸಾಂತಾಣಿ, ಹಲಸಿನ ಬೀಜದ ದೋಸೆ, ಹಲಸಿನ ಕಾಯಿ ಪ್ರೈ, ಕೊಚ್ಚಿ ಪದಾರ್ಥ, ಕಣಿಲೆ ಪಲ್ಯ,ಕಣಿಲೆ ಉಪ್ಪಿನಕಾಯಿ, ಪುಂಡಿ, ನೀರು ಪುಂಡಿ, ಬಾಳೆ ದಿಂಡಿನ ಪಲ್ಯ, ತಜಂಕ್ ಪಲ್ಯ, ತಜಂಕ್ ಅಂಬಡೆ, ಪತ್ರೊಡೆ ಉಪ್ಪುಕರಿ ಮೊದಲಾದ ತಿಂಡಿ ತಿನಸುಗಳು ಗಮನ ಸೆಳೆದವು. ಜೊತೆಗೆ ಕಶಾಯ, ಪಾನಕ ವ್ಯವಸ್ಥೆ ಮಾಡಲಾಗಿತ್ತು.




