ಮಂಜೇಶ್ವರ: ಮಂಜೇಶ್ವರ ಪೋಲಿಸ್ ಠಾಣಾಧಿಕಾರಿಗಳು ಹಾಗೂ ಸಿಬಂಧಿಗಳು ಮುಸ್ಲಿಂಲೀಗ್ ಪಕ್ಷದ ಹಾಗೂ ಕೆಲ ಮುಸ್ಲಿ ಭಯೋತ್ಪಾದಕ ಸಂಘಟನೆಗಳ ಕೈಗೊಂಬೆಗಳಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ಆರೋಪಿಸಿದೆ.
ಕಡಂಬರ್ ವಿಷ್ಣುಮೂರ್ತಿ ಕ್ಷೇತ್ರ ಪರಿಸರದಲ್ಲಿ ಈ ಹಿಂದೆ ಹಿಂದೂ ಕಾರ್ಯಕರ್ತರುಗಳ ಮೇಲೆ ತಲವಾರು ದಾಳಿ ನಡೆಸಿದ ಆರೋಪಿಗಳನ್ನು, ಕುಂಜತ್ತೂರು ಪರಿಸರದಲ್ಲಿ ಅಯ್ಯಪ್ಪ ಸ್ವಾಮಿಗಳ ಮೇಲೆ ಹಲ್ಲೆ ನಡೆಸಿದ ಕ್ರಿಮಿನಲ್ ಗಳನ್ನು ಇದುವರೆಗೂ ಬಂಧಿಸದ ಪೊಲೀಸ್, ಉಪ್ಪಳದಲ್ಲಿ ಅಯ್ಯಪ್ಪ ಭಕ್ತರು ಸಂಚರಿಸುವ ಬಸ್‍ಗಳ ಮೇಲೆ ಧಾಳಿ ನಡೆಸುವ ಕಿಡಿಗೇಡಿಗಳನ್ನು ಬಂದಿಸದ ಪೊಲೀಸರು, ಹೊಸಂಗಡಿಯಲ್ಲಿ ಸುಳ್ಳು ದೂರು ದಾಖಲಿಸಿ ಹಿಂದೂ ಯುವಕರನ್ನು, ಮನೆಯವರನ್ನು, ವಾಹನ ಗಳನ್ನು ನಿರಾಧಾರವಾಗಿ ಮುಟ್ಟುಗೋಲು ಹಾಕುತ್ತಿರುವುದು ಯಾರ ಒತ್ತಡದಿಂದ ಎಂದು ಬಿಜೆಪಿ ಪ್ರಶ್ನಿಸಿದೆ.
ಪರಿಶಿಷ್ಟ ಜಾತಿ, ಪಂಗಡದ ಸಮುದಾಯ ವಾಸಿಸುವ ಕಾಲನಿಗಳನ್ನು ಕೇಂದ್ರೀಕರಿಸಿ ಯುವಕರನ್ನು ಬಂಧಿಸಿದರೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿದೆ.
ನಕಲಿ ದೂರು ನೀಡುವ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ತನಿಖೆ ನಡೆಸದೆ ಹಿಂದೂಗಳನ್ನು ಮಾತ್ರ ಬಂಧಿಸಿ ಸಮಾಜದಲ್ಲಿ ಕೋಮು ಭಾವನೆ ಕೆರಳಿಸುತ್ತಿದೆ, ಹಿಂದೂ ಮಾತೆಯರಿಗೆ, ಸಹೋದರಿಯರಿಗೆ ರಸ್ತೆಯಲ್ಲಿ ನಡೆದು ಹೋಗುವಾಗ ಕೀಟಲೆ ನೀಡುವ ಸಮಾಜ ದ್ರೋಹಿಗಳನ್ನು ಪ್ರಶ್ನಿಸಿದರೆ ಕಿಡಿಗೇಡಿಗಳನ್ನು ಧಾರ್ಮಿಕ ನೇತಾರ ಮಾಡುವ ಜವಾಬ್ದಾರಿಯನ್ನು ಇಲ್ಲಿನ ಪೋಲಿಸ್ ಇಲಾಖೆ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಉದ್ಯಾವರ ಮಾಡದ ಹಿಂದೂ ರುದ್ರಭೂಮಿಯಲ್ಲಿ ಹಸಿರು ಧ್ವಜ ಹಾರಿಸಿದ ಕಿಡಿಗೇಡಿಗಳನ್ನು ಪೋಲಿದರು ಯಾವಾಗ ಬಂದಿಸುವುದು ಎಂದು ಬಿಜೆಪಿ ಪ್ರಶ್ನಿಸಿದೆ.
ಪೊಲೀಸ್ ಇಲಾಖೆ ಮುಸ್ಲಿಂ ಮೂಲಭೂತ ಸಂಘಟನೆಗಳ ನೇತಾರರುಗಳ ಆಜ್ಞೆಗಳಂತೆ ಕಾರ್ಯ ನಿರ್ವಹಿಸಿದರೆ ಕೇಂದ್ರ ಗೃಹ ಖಾತೆಗೆ ದಾಖಲೆಗಳ ಸಮೇತ ಬಿಜೆಪಿ ದೂರು ನೀಡಲು ತೀರ್ಮಾನಿಸಿದೆ.
ಜಾತಿ ನಿಂದನೆ ಮಾಡಿ ಹಿಂದೂ ಸ್ತ್ರೀಯರನ್ನು ಅವಮಾನಿಸಿದ ವೈಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು ಬಿಜೆಪಿ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದೆ.

