ಕುಂಬಳೆ: ಐ .ವಿ. ದಾಸ್ ರವರ ಸಾಮಾಜಿಕ ಸಾಂಸ್ಕೃತಿಕ ಚಳವಳಿಗಳು ಕೇರಳ ರಾಜ್ಯ ಗ್ರಂಥಾ ಶಾಲಾ ಚಟುವಟಿಕೆಗಳಿಗೆ ಮಾದರಿಯಾಗಿದೆ ಎಂದು ಕಣ್ಣೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ವಿ.ಪಿ.ಪಿ ಮುಸ್ತಾಫಾ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಭಾನುವಾರ ಕುಂಬಳೆ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಾಚನ ಪಕ್ಷಾಚರಣೆ ಸಮಾರೋಪ ಹಾಗೂ ಐ ವಿ ದಾಸ್ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷ ಯಸ್. ನಾರಾಯಣ ಭಟ್ ರವರ ಅಧ್ಯಕ್ಷತೆಯಲ್ಲಿ, ಕಾಸರಗೋಡು ಸರಕಾರಿ ಕಾಲೇಜು ಉಪನ್ಯಾಸಕ ಡಾ.ಆಶಾಲತಾ ಸಿ.ಕೆ, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬರ್ನಾಡ್, ನಿವೃತ್ತ ಮುಖ್ಯೋಪಾಧ್ಯಾಯ ಎಂ. ನಾರಾಯಣ ಗಟ್ಟಿ ಮೊದಲಾದವರು ಮಾತನಾಡಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಕುಮಾರಿ ಟೀಚರ್, ಎ.ಬಿ. ಬಲ್ಲಾಳ್ ಮಾಸ್ತರ್, ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಸದಸ್ಯ ವನಿತಾ ಆರ್.ಶೆಟ್ಟಿ, ಉಮೇಶ ಎ, ಮೊಹಮ್ಮದ್ ಇಕ್ಬಾಲ್ ಮತ್ತು ರತ್ನಾಕರ ಗಟ್ಟಿ ಉಪಸ್ಥಿತರಿದ್ದು ಮಾತನಾಡಿದರು. ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಡಿ. ಕಮಲಾಕ್ಷ ವಂದಿಸಿದರು.


