ಕಾಸರಗೋಡು: ಜಿಲ್ಲೆಯ ಎಲ್ಲ ಸಬ್ ರೆಜಿಸ್ತ್ರಾರ್ ಕಚೇರಿಗಳಲ್ಲಿ ಸೆ.26ರಂದು ಮೆಗಾ ಅದಾಲತ್ ನಡೆಯಲಿದೆ.
1986 ರಿಂದ 2017 ಮಾ.31 ವರೆಗೆ ರೆಜಿಸ್ಟರ್ ನಡೆಸಿದ ದಸ್ತಾವೇಜುಗಳಲ್ಲಿ ತೆರಿಗೆ ಪಾವತಿ ಬಾಕಿಯಿರುವವರಿಗೆ ದಂಡ ಹೇರಿಕೆಯಲ್ಲಿ ರಿಯಾಯಿತಿ ನೀಡಲಾಗುವುದು. ಅದಾಲತ್ ನಲ್ಲಿ ಭಾಗವಹಿಸಲು ಆಸಕ್ತರು ಬಾಕಿ ರೆಜಿಸ್ಟ್ರೇಷನ್ ಶುಲ್ಕದ ಶೇ 100, ಬಾಕಿ ಮುದ್ರಬೆಲೆಯ ಶೇ 70 ರಿಯಾಯಿತಿ ಲಭಿಸಲಿದೆ. ಆನ್ ಲೈನ್ ರೂಪದಲ್ಲೂ ಬಾಕಿ ಮೊತ್ತ ಪಾವತಿ ನಡೆಸಬಹುದು. ಎಂಬ ವೆಬ್ ಸೈಟ್ ಮೂಲಕ ಆನ್ ಲೈನ್ ರೆಜಿಸ್ಟ್ರೇಷನ್ ಲಿಂಕ್ ಕ್ಲಿಕ್ ನಡೆಸಬೇಕು. ಅದರಲ್ಲಿ ಅರ್ಜಿದಾರನ ಆಧಾರ ರೆಜಿಸ್ಟರ್ ನಡೆಸಿದ ಜಿಲ್ಲೆ, ಸಬ್ ರಿಜಿಸ್ಟ್ರಾರ್ ಕಚೇರಿ, ರೆಜಿಸ್ಟರ್ ನಡೆಸಿದ ವರ್ಷ, ಆಧಾರದ ನಂಬ್ರ ಇತ್ಯಾದಿ ನಮೂದಿಸಬೇಕು. ನಂತರ ಕಂಡುಬರುವ ಯು.ಪಿ.ಸ್ಟಾಟಸ್ ನಲ್ಲಿ ಕ್ಲಿಕ್ ನಡೆಸಿದಾಗ ಆಧಾರ್ ಅಂಡರ್ ವಾಲ್ಯವೇಷನ್ ಕ್ರಮದಲ್ಲಿ ಅಳವಡಗೊಂಡಿದೆಯೇ, ಇಲ್ಲವೇ ಎಂದು ತಿಳಿಯಬಹುದಾಗಿದೆ. ಅಳವಡಗೊಂಡಿರುವುದಾದರೆ ಯು.ಪಿ.ಸ್ಟಾಟಸ್ ಕ್ಲೋಸ್ ನಡೆಸಿ ಪಾಯಿಂಟ್ ಆಪ್ಶನ್ ನಲ್ಲಿ ಕ್ಲಿಕ್ ಮಾಡಬೇಕು. ನಂತರ ಹೆಸರು, ವಿಳಾಸ ನಮೂದಿಸಬೇಕು. ಸಾಧಾರಣ ಇ-ಪೇಮೆಂಟ್ ಸೌಲಭ್ಯ ಬಳಸಿ ಬಾಕಿಯಿರುವಶುಲ್ಕ ಪಾವತಿ ನಡೆಸಬೇಕು. ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಪೇಮೆಂಟ್ ಸೌಲಭ್ಯ ಸಂಬಂಧ ಸಂಶಯಗಳ ನಿವಾರಣೆಗೆ ಜಿಲ್ಲಾ ರೆಜಿಸ್ಟರ್ ಕಚೇರಿ (ದೂರವಾಣಿ ಸಂಖ್ಯೆ: 04994-255405.)ಯಾ ಸಬ್ ರೆಜಿಸ್ಟರ್ ಕಚೇರಿ ಯನ್ನು ಸಂಪರ್ಕಿಸಬಹುದು.

